ಕನ್ನಡಪ್ರಭ ವಾರ್ತೆ ಹೊಸನಗರಜೆಸಿಐ ಡೈಮಂಡ್, ಡಿಸಿಸಿ ಬ್ಯಾಂಕ್ ಸಹಯೋಗದೊಂದಿಗೆ 3 ದಿನಗಳ 4 ನೇ ರಾಜ್ಯಮಟ್ಟದ ಕೃಷಿ ಮೇಳವು ಜ.12 ರಿಂದ 14ರವರೆಗೆ ಇಲ್ಲಿನ ನೆಹರೂ ಮೈದಾನದಲ್ಲಿ ನಡೆಯಲಿದೆ ಎಂದು ಜೆಸಿಐ ಸಂಸ್ಥೆ ಅಧ್ಯಕ್ಷ ಮಧುಸೂದನ್ ನಾವಡ ತಿಳಿಸಿದರು.
ವೇದಿಕೆಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕಾ ವಿವಿ ಕುಲಪತಿ ಆರ್.ಪಿ.ಜಗದೀಶ್ ಸೇರಿದಂತೆ ಕೃಷಿ ವಿಜ್ಞಾನಿಗಳು, ಪ್ರಗತಿ ಪರ ಕೃಷಿಕರು ಉಪಸ್ಥಿತರಿರುವರು. ಅಂದು ರಾತ್ರಿ ಗಂಗಾವತಿ ಪ್ರಾಣೇಶ್ ತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಜ.13ರಂದು ಸಂಜೆ ಶಾಖಾಹಾರಿ ಸಿನೆಮಾ ಹಾಡುಗಳನ್ನು ಸಂಸದ ಬಿ.ವೈ.ರಾಘವೇಂದ್ರ ಬಿಡುಗಡೆ ಮಾಡುವರು. ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ವಿವಿಧ ಗಣ್ಯರು ಹಾಜರಿವರು.ಜ.14ರಂದು ಕೃಷಿ ಹಾಗೂ ತೋಟಗಾರಿಕೆ ಕುರಿತಂತೆ ವಿವಿಧ ಗೋಷ್ಠಿಗಳು, ರೈತರೊಡನೆ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ತೋಟಗಾರಿಕೆ ವಿವಿ ವಿಜ್ಞಾನಿಗಳು ಭಾಗವಹಿಸುವರು ಎಂದರು.
ಸಂಸ್ಥೆಯ ರಾಜೇಶ ಕೀಳಂಬಿ, ವಿನಾಯಕ ಅರೆಮನೆ ಮತ್ತಿತರರು ಇದ್ದರು.