ಕನ್ನಡಪ್ರಭ ವಾರ್ತೆ ಜಮಖಂಡಿ
73 ಹೆಸರುಗಳಷ್ಟೇ ಕೈಬಿಡುವ ನಿರ್ಧಾರ
ಪರಿಶೀಲನೆಯ ನಂತರ 2,564 ಮತದಾರರನ್ನು ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆಗೆ ಕರೆಯಲಾಗಿತ್ತು. ಸಂಬಂಧಿತ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ, ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಅವಕಾಶ ಪಡೆದರು. ಬಳಿಕ ಅಂತಿಮ ಹಂತದಲ್ಲಿ ಸುಮಾರು 73 ಮತದಾರರ ಹೆಸರುಗಳನ್ನು ಮಾತ್ರ ಕೈಬಿಡಲಾಗಿದ್ದು, ಇವರಲ್ಲಿ ಮೃತಪಟ್ಟವರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರು ಸೇರಿದ್ದಾರೆ ಎಂದು ತಿಳಿಸಿದರು.ಆ.24ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 1,93,267 ಮತದಾರರಿದ್ದರು. ಪರಿಶೀಲನೆ, ವಿಚಾರಣೆ ಹಾಗೂ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ಪಟ್ಟಿಯಲ್ಲಿ 1,95,931 ಮತದಾರರು ದಾಖಲಾಗಿದ್ದಾರೆ.
ಯುವ ಮತದಾರರನ್ನು ಮತ ಪಟ್ಟಿಗೆ ಸೇರಿಸಲು ತಾಲೂಕು ಆಡಳಿತದಿಂದ ವ್ಯವಸ್ಥಿತ ಸ್ವೀಪ್ ಚಟುವಟಿಕೆಗಳನ್ನು ನಡೆಸಲಾಗಿತ್ತು. ಇದರ ಫಲವಾಗಿ 3,312 ಹೊಸ ಮತದಾರರನ್ನು ಸೇರಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯುದ್ದಕ್ಕೂ ಬೂತ್ ಮಟ್ಟದ ಅಧಿಕಾರಿಗಳು, ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸಹಕಾರ ದೊರೆತಿದೆ ಎಂದು ತಿಳಿಸಿದರು.ತಹಶೀಲ್ದಾರ್ ಅನೀಲ ಬಡಗೇರ ಮಾತನಾಡಿ, ಇನ್ನು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಬಯಸಿದವರು ಫರ್ಮ್ ನಂ-6ನ್ನು ತುಂಬಿ ದಾಖಲೆಗಳನ್ನು ಒದಗಿಸಬೇಕು. ಪಟ್ಟಿಗೆ ಸೇರ್ಪಡೆಯ ಕಾರ್ಯ ಎಂದಿನಂತೆ ನಡೆಯುತ್ತದೆ ಎಂದು ಹೇಳಿದರು