ಲಕ್ಷ್ಮೇಶ್ವರ: ಸಮೀಪದ ಗೊಜನೂರು ಗ್ರಾಮದ ಜಮೀನೊಂದರಲ್ಲಿ ಕುರಿ ದೊಡ್ಡಿಯ ಮೇಲೆ 4- 5 ತೋಳಗಳು ಭೀಕರ ದಾಳಿ ನಡೆಸಿ 30 ಕುರಿ ಮರಿಗಳು ಹಾಗೂ 8 ದೊಡ್ಡ ಕುರಿಗಳು ಸಾವಿಗೀಡಾಗಿರುವ ಘಟನೆ ಶುಕ್ರವಾರ ನಡೆದಿದೆ.
ರೋಣ: ನಮ್ಮ ದೇಹವನ್ನು ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಹೊಲದಲ್ಲಿನ ಮಣ್ಣನ್ನು ಕಾಪಾಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.
ಗಜೇಂದ್ರಗಡ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ಹಮ್ಮಿಕೊಂಡಿದ್ದ ಭೂ ಸಂಪನ್ಮೂಲ ಸಮೀಕ್ಷೆ ಸಾಕ್ಷರತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಮಣ್ಣು ಬಹಳ ಶ್ರೇಷ್ಠವಾಗಿದೆ. ಫಲವತ್ತಾದ ಮಣ್ಣು ಎಷ್ಟೋ ವರ್ಷಗಳಿಂದ ರೂಪುಗೊಂಡಿದ್ದು, ಅಂತಹ ಮಣ್ಣನ್ನು ಪರೀಕ್ಷಿಸಿ ಎಲ್‌ಆರ್‌ಐ ಕಾರ್ಡ್ ತಯಾರಿಸಲಾಗಿದೆ. ಕಾರ್ಡಿನಲ್ಲಿರುವ ಮಾಹಿತಿ ರೈತರಿಗೆ ಉಪಯುಕ್ತವಾಗಿದೆ. ಸಾವಯವ ಗೊಬ್ಬರಗಳನ್ನೇ ಉಪಯೋಗಿಸಿ ಮಣ್ಣನ್ನು ಕಾಪಾಡಬೇಕು ಎಂದರು.ಉಪ ಕೃಷಿ ನಿರ್ದೇಶಕ ಪಾಲಾಕ್ಷಗೌಡ ಮಾತನಾಡಿ, ರಿವಾರ್ಡ್ ಯೋಜನೆ ಬಹಳಷ್ಟು ವೈಜ್ಞಾನಿಕ ಹಾಗೂ ಉಪಯುಕ್ತ ಮಾಹಿತಿ ರೈತರಿಗೆ ನೀಡುತ್ತಿದೆ. ಈ ಮಾಹಿತಿಯನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಸಹಾಯಕ ಕೃಷಿ ನಿರ್ದೇಶಕ ಶೌಕತ್ ಅಲಿ ತಹಶೀಲ್ದಾರ್ ಮಾತನಾಡಿ, ಭೂ ಸಂಪನ್ಮೂಲ ಮಾಹಿತಿಯನ್ನು ಈಗಾಗಲೇ ರೈತರಿಗೆ ತರಬೇತಿ ಮೂಲಕ ನೀಡಲಾಗಿದ್ದು, ಕಾರ್ಡುಗಳನ್ನು ವಿತರಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ನೀಡಲು ಈಗ ಸಾಕ್ಷರತಾ ಅಭಿಯಾನ ಮಾಡಲಾಗುತ್ತಿದೆ. ರೈತರು ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.ಅಬ್ಬಿಗೇರಿ ಗ್ರಾಮದ ಪ್ರಗತಿಪರ ರೈತರು, ಮುಖಂಡರು ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು. ಕೃಷಿ ಅಧಿಕಾರಿ ಬಸವರಾಜ ಗದಗಿನ ಸ್ವಾಗತಿಸಿದರು. ವಿಜಯಲಕ್ಷ್ಮಿ ಜೋಗಿ ನಿರೂಪಿಸಿದರು. ಅನ್ನಪೂರ್ಣ ವಂದಿಸಿದರು.