ಲೋಕನಹಳ್ಳಿ ಬಳಿ ಅರಣ್ಯಕ್ಕೆ ಬೆಂಕಿ: 50 ಎಕ್ರೆಗೂ ಹೆಚ್ಚು ಕಾಡು ಆಹುತಿ

KannadaprabhaNewsNetwork |  
Published : Apr 03, 2026, 01:45 AM IST
 ಕಿಡಿಗೇಡಿಗಳಿದ ಬೆಂಕಿ  | Kannada Prabha

ಸಾರಾಂಶ

ಲೊಕ್ಕನಹಳ್ಳಿ ಬಳಿ ಬಿಳಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ 50 ಎಕರೆಗೂ ಹೆಚ್ಚಿನ ಪ್ರದೇಶ ಬೆಂಕಿಗಾಹುತಿಯಾಗಿದೆ.

ಕನ್ನಡಪ್ರಭ ವಾರ್ತೆ ಹನೂರುಲೊಕ್ಕನಹಳ್ಳಿ ಬಳಿ ಬಿಳಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ 50 ಎಕರೆಗೂ ಹೆಚ್ಚಿನ ಪ್ರದೇಶ ಬೆಂಕಿಗಾಹುತಿಯಾಗಿದೆ.

ಈ ಭಾಗದಲ್ಲಿ ದಿನನಿತ್ಯ ಒಂಟಿ ಕಾಡಾನೆ ರೈತರ ಜಮೀನುಗಳಲ್ಲಿ ಬೆಳೆ ನಷ್ಟ ಉಂಟು ಮಾಡುತ್ತಿದ್ದು ಮತ್ತು ರಸ್ತೆಯಲ್ಲಿಯೇ ವಾಹನ ಸವಾರರಿಗೆ ಉಪಟಳ ನೀಡುತ್ತಿರುವ ಬಗ್ಗೆ ಈ ಭಾಗದ ನಿವಾಸಿಗಳು ದಿನನಿತ್ಯ ಅರಣ್ಯಾಧಿಕಾರಿಗಳಿಗೆ ಒಂಟಿ ಕಾಡಾನೆಯ ಉಪಟಳ ತಪ್ಪಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಅರಣ್ಯಾಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಬೇಸತ್ತ ನಾಗರಿಕರಿಂದ ಕಾಡಿಗೆ ಬೆಂಕಿ ಹಾಕಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಐವತ್ತಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ . ಡಿಸಿಎಫ್ ಬೇಟಿ : ಬಿ ಆರ್ ಟಿ ಅರಣ್ಯ ಪ್ರದೇಶದಲ್ಲಿ ಹತ್ತಿ ಉರಿಯುತ್ತಿರುವ ಬೆಂಕಿಯ ಬಗ್ಗೆ ವಿಚಾರ ತಿಳಿದ ತಕ್ಷಣ ಸ್ಥಳೀಯ ಅರಣ್ಯ ಅಧಿಕಾರಿ ಸಿಬ್ಬಂದಿಗಳಿಗೆ ಸೂಚನೆ ನೀಡಿ ಕೂಡಲೇ ಬೆಂಕಿ ನಂದಿಸುವಂತೆ ಘಟನಾ ಸ್ಥಳಕ್ಕೆ ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಡಿಸಿಎಫ್ ಶ್ರೀಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರು ಹತ್ತಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅರಣ್ಯ ಹಂಚಿನ ಭಾಗಗಳಲ್ಲಿ ಕಟ್ಟೆಚರ : ಬರ ಬಿಸಿಲಿನಿಂದ ತತ್ತರಿಸಿರುವ ಅರಣ್ಯ ಪ್ರದೇಶದ ಅಂಚಿನಲ್ಲಿ ಇಲಾಖೆ ಅಧಿಕಾರಿ ಸಿಬ್ಬಂದಿ ವರ್ಗದವರು ಅರಣ್ಯ ಪ್ರದೇಶದಲ್ಲಿ ಯಾವುದೇ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ .

------------

2ಸಿಎಚ್ಎನ್‌15

ಬಿಆರ್‌ಟಿ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆಯಲ್ಲಿ 2ನೇ ದಿನವೂ ಸಿದ್ದು ಭರ್ಜರಿ ಪ್ರಚಾರ
ಇಂದು ಬೆಂಗ್ಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ