ಹಲಗೂರು ಬಳಿ ೬ ಅಡಿ ಉದ್ದದ ಹೆಬ್ಬಾವು ಸಂರಕ್ಷಣೆ

KannadaprabhaNewsNetwork |  
Published : Oct 24, 2025, 01:00 AM IST
೨೩ಕೆಎಂಎನ್‌ಡಿ-೫ಹಲಗೂರು ಸಮೀಪದ ಕೊನ್ನಾಪುರದಲ್ಲಿ ಎಂಟು ಅಡಿ ಉದ್ದದ ಹೆಬ್ಬಾವನ್ನು ಹಿಡಿದಿರುವ ದೃಶ್ಯ. | Kannada Prabha

ಸಾರಾಂಶ

ಹಲಗೂರು ಸಮೀಪದ ಕೊನ್ನಾಪುರ ಗ್ರಾಮದ ಮಹೇಶ ಎಂಬುವರ ಅಂಗಡಿಯ ಬಳಿ ಮಂಗಳವಾರ ರಾತ್ರಿ ಎಂಟು ಅಡಿ ಉದ್ದದ ಹೆಬ್ಬಾವನ್ನು ಉರುಗ ರಕ್ಷಕ ಕೃಷ್ಣ ಸಂರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಕೊನ್ನಾಪುರ ಗ್ರಾಮದ ಮಹೇಶ ಎಂಬುವರ ಅಂಗಡಿಯ ಬಳಿ ಮಂಗಳವಾರ ರಾತ್ರಿ ಎಂಟು ಅಡಿ ಉದ್ದದ ಹೆಬ್ಬಾವನ್ನು ಉರುಗ ರಕ್ಷಕ ಕೃಷ್ಣ ಸಂರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಉರಗ ರಕ್ಷಕ ಜಗದೀಶ ಮಾತನಾಡಿ, ಇತ್ತೀಚೆಗೆ ಹಲಗೂರು ವ್ಯಾಪ್ತಿಯ ಹಲಸಹಳ್ಳಿ ,ಬಾಣಸಮುದ್ರ, ಕರಲಕಟ್ಟೆ, ಕೊನ್ನಾಪುರದ ಹತ್ತಿರ ಹಾಗೂ ಇನ್ನೂ ಹಲವು ಕಡೆ ಸುಮಾರು ೯ ರಿಂದ ೧೦ ಹೆಬ್ಬಾವುಗಳನ್ನು ಹಿಡಿದು ಅರಣ್ಯ ಇಲಾಖೆಯವರ ಸಮ್ಮುಖದಲ್ಲಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುತ್ತೇವೆ. ನಾವು ಹಾವುಗಳನ್ನು ಹಿಡಿಯುವುದಕ್ಕೆ ಯಾವುದೇ ಸಂಭಾವನೆ ಪಡೆಯುವುದಿಲ್ಲ. ನಮ್ಮ ಸರಹದ್ದಿನಲ್ಲಿ ಹಾವುಗಳು ಕಂಡರೆ ಹೊಡೆದು ಸಾಯಿಸಬೇಡಿ, ನಮಗೆ ತಕ್ಷಣ ವಿಷಯ ತಿಳಿಸಿದರೆ ನಾವು ಅವನ್ನು ಸಂರಕ್ಷಣೆ ಮಾಡಿ ಕಾಡಿಗೆ ಬಿಡುವ ಕೆಲಸವನ್ನು ಮಾಡುತ್ತೇವೆ. ನನ್ನ ದೂರವಾಣಿ ಸಂಖ್ಯೆ ೮೪೩೧೫೦೦೧೮೯ ಮತ್ತು ಕೃಷ್ಣ ರವರ ದೂರವಾಣಿ ಸಂಖ್ಯೆ, ೯೬೮೬೯೫೫೭೯೫ ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಯುವ ಮುಖಂಡ ಬಸವರಾಜು ಹಾಗೂ ಇತರರಿದ್ದರು.

ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಪುರಸಭಾ ವ್ಯಾಪ್ತಿಯ ಗಂಜಾಂನ 20ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಗುರುವಾರ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಗಂಜಾಂನ ದೇವರಾಜು, ರಮೇಶ್, ನಾಗಣ್ಣ, ಮಂಜು, ನಾಗೇಂದ್ರು, ಸುರೇಶ್, ಮಂಜಪ್ಪ ಇತತರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.

ಈ ವೇಳೆ ಮಾತನಾಡಿದ ಶಾಸಕರು, ಕಾಂಗ್ರೆಸ್‌ನ ಹಲವಾರು ಜನಪ್ರಿಯ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಮೂಲಕ ಸರ್ಕಾರ ಜಾರಿಗೆ ತಂದು ಯೋಜನೆಗಳು ಸರ್ಕಾರದ ಮೇಲಿನ ಭರವಸೆಗಳನ್ನು ನಂಬಿಸಿದೆ. ಇದರಿಂದ ವಿವಿಧ ಪಕ್ಷಗಳ ಕಾರ್ಯಕರ್ತರು ಪಕ್ಷ ಸೇರುತ್ತಿದ್ದಾರೆ ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷ ಎಂ.ಎಲ್.ದಿನೇಶ್, ಮಾಜಿ ಅಧ್ಯಕ್ಷ ಎಲ್.ನಾಗರಾಜು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ರಜನಿ, ನಿಮಿಷಾಂಬ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಯಾನಂದ್, ಕಾಂಗ್ರೆಸ್ ಮುಖಂಡರಾದ ಚನ್ನಪ್ಪ, ಟಿ. ಕೃಷ್ಣ, ಬಾಲು, ಪೂರ್ಣಚಂದ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!