ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪುರಸಭೆಯ 2024-25 ನೇ ಸಾಲಿಗೆ 70.85.146 ಲಕ್ಷ ಉಳಿತಾಯ ಬಜೆಟ್‌ನ್ನು ಉಪ ವಿಭಾಗಾಧಿಕಾರಿ, ಪುರಸಭೆ ಆಡಳಿತಾಧಿಕಾರಿಯಾದ ಶಿವಸ್ವಾಮಿ ಮಂಡಿಸಿದರು.ಪುರಸಭೆ ಸಭಾಂಗಣದಲ್ಲಿ ನಡೆದ ಬಜೆಟ್‌ನಲ್ಲಿ ಪುರಸಭೆಯ ಆಯ-ವ್ಯಯದಲ್ಲಿ ಎಲ್ಲಾ ಮೂಲಗಳಿಂದ 20,39,05,000 ಕೋಟಿ ಆದಾಯ ನಿರೀಕ್ಷೆಯ ಬಜೆಟ್‌ನಲ್ಲಿ 70.85.146 ಲಕ್ಷ ಉಳಿತಾಯ ಆಗಲಿದೆ ಎಂದರು. ಆಸ್ತಿ ತೆರಿಗೆ ದಂಡ 2,22 ಕೋಟಿ,ಮಳಿಗೆಗಳ ಬಾಡಿಗೆ ಮತ್ತು ದಂಡ 41,5 ಲಕ್ಷ,ಕಟ್ಟಡ ಪರವಾನಗಿ10 ಲಕ್ಷ,ಅಭಿವೃದ್ಧಿ ಮತ್ತು ಸುಧಾರಣೆ 17.5 ಲಕ್ಷ,ಉದ್ದುಮೆ ಪರವಾನಿಗೆ ಶುಲ್ಕ ಮತ್ತು ಇತರೆ ಪರವಾನಿಗೆ 9.35 ಲಕ್ಷ,ನೀರಿನ ಶುಲ್ಕ ಮತ್ತು ಠೇವಣಿ 25,75 ಲಕ್ಷ,ಘನ ತ್ಯಾಜ್ಯ ನಿರ್ವಹಣೆ 12.70 ಲಕ್ಷ,ರಸ್ತೆ ಅಗೆತ 2.5 ಲಕ್ಷ, ಖಾತಾ ಬದಲಾವಣೆ, ಖಾತಾ ನಕಲು ಪ್ರತಿಗಳ ಶುಲ್ಕ 16.55 ಲಕ್ಷ,ಬ್ಯಾಂಕ್ ಖಾತೆಗಳಿಂದ ಬಡ್ಡಿ 12.45 ಲಕ್ಷ ಆದಾಯ ಬರಲಿದೆ ಎಂದರು. ಸರ್ಕಾರಗಳ ನಿರೀಕ್ಷೆ: ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ 1.15 ಕೋಟಿ,ಎಸ್.ಎಫ್.ಸಿ ವೇತನ ಅನುದಾನ 2.60 ಕೋಟಿ,ಎಸ್.ಎಫ್.ಸಿ ವಿದ್ಯುತ್ ಅನುದಾನ 4.25 ಕೋಟಿ,ಎಸ್.ಎಫ್.ಸಿ ಪ್ರೋತ್ಸಾಹ ಅನುದಾನ/ಜನಗಣತಿ/ಇತರೆ ಅನುದಾನ 36,25 ಲಕ್ಷ,ಪೌರ ಕಾರ್ಮಿಕ ಗೃಹ ಭಾಗ್ಯ ಅನುದಾನ 35 ಲಕ್ಷ,ನಲ್ಮ್ ಅನುದಾನ 10 ಲಕ್ಷ,15 ನೇ ಹಣಕಾಸು ಅನುದಾನ 2.75 ಕೋಟಿ,ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನ 1 ಕೋಟಿ,ಸ್ವಚ್ಛ ಭಾರತ್ ಮಿಷನ್ ಅನುದಾನ 1 ಕೋಟಿ,ವಿಶೇಷ ಅನುದಾನ 2 ಕೋಟಿ,ಘನತ್ಯಾಜ್ಯ ವಸ್ತು ನಿರ್ವಹಣೆ ಅನುದಾನ 1 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ ಎಂದರು. ಪ್ರಮುಖ ವೆಚ್ಚಗಳು: ಕಚೇರಿ ಕಟ್ಟಡ ನಿರ್ಮಾಣಕ್ಕೆ 1.5 ಕೋಟಿ,ಕಚೇರಿ ಅಭಿವೃದ್ಧಿ ಕಾಮಗಾರಿ 12.5 ಲಕ್ಷ,ಕಚೇರಿ ಉಪಕರಣಗಳು, ಸಲಕರಣೆಗಳು, ಪೀಠೋಪಕರಣ 11 ಲಕ್ಷ, ಡಿಜಿಟಲ್ ಲೈಬ್ರರಿ ಕಟ್ಟಡಕ್ಕೆ 40 ಲಕ್ಷ, ಸ್ವಾಗತ ಕಮಾನು, ಕಾಂಪೌಂಡ್, ಕ್ರೀಡಾಂಗಣ ಅಭಿವೃದ್ಧಿ, ರಸ್ತೆ ಬದಿ ಮಾರ್ಗ ಸೂಚಿ ಫಲಕಗಳ ಅಳವಡಿಕೆ ಹಾಗೂ ಇತರೆ ಕಾಮಗಾರಿಗೆ 40 ಲಕ್ಷ, ರಸ್ತೆ, ಪಾದಚಾರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ 4 ಕೋಟಿ, ಸೇತುವೆಗಳ ಕಾಮಗಾರಿಗೆ 25 ಲಕ್ಷ, ಬೀದಿ ದೀಪ ಕಾಮಗಾರಿ 35 ಲಕ್ಷ, ಮಳೆ ನೀರಿನ ಚರಂಡಿ ಕಾಮಗಾರಿ 25 ಲಕ್ಷ, ಸಾರ್ವಜನಿಕರ ಶೌಚಾಲಯ ಕಟ್ಟಡ ನಿರ್ಮಾಣಕ್ಕೆ 15 ಲಕ್ಷ, ನೈರ್ಮಲ್ಯ ವಾಹನ, ಸಲಕರಣೆ ಖರೀದಿಗೆ 37,5 ಲಕ್ಷ, ಸ್ಮಶಾಸನದ ಅಭಿವೃದ್ಧಿಗೆ 25 ಲಕ್ಷ, ಘನ ತ್ಯಾಜ್ಯ ವಸ್ತು ನಿರ್ವಹಣೆ ಯಂತ್ರೋಪಕರಣ ಖರೀದಿ ಹಾಗೂ ಅಭಿವೃದ್ಧಿಗೆ 1.32,5 ಕೋಟಿ, ನೀರು ಸರಬರಾಜು ಕಟ್ಟಡಗಳ ನಿರ್ಮಾಣ, ನೀರು ಸರಬರಾಜು ಅಭಿವೃದ್ಧಿ ಕಾಮಗಾರಿ ಹಾಗೂ ಯಂತ್ರೋಪಕರಣ ಖರೀದಿಗೆ 1.60 ಕೋಟಿ, ಒಳ ಚರಂಡಿ ಅಭಿವೃದ್ಧಿ ಕಾಮಗಾರಿಗೆ 22.5 ಲಕ್ಷ ,ಮಾರುಕಟ್ಟೆ ಅಭಿವೃದ್ಧಿಗೆ 25 ಲಕ್ಷ,ಪಾರ್ಕ್ ಅಭಿವೃದ್ಧಿಗೆ 40 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕ ಹಿಂದುಳಿದ ವರ್ಗ, ಅಂಗವಿಕಲರ ಅಭಿವೃದ್ಧಿ 27,75 ಲಕ್ಷ, ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ ಮತ್ತು ಭತ್ಯೆ ಪಾವತಿ 2.60 ಕೋಟಿ, ಕೌನ್ಸಿಲ್ ಗೌರವ ಧನಕ್ಕೆ 11.75 ಲಕ್ಷ, ಘನ್ಯತ್ಯಾಜ್ಯ ವಸ್ತು ನಿರ್ವಹಣೆ ಕುರಿತು ಅಧ್ಯಯನ ಪ್ರವಾಸ 5 ಲಕ್ಷ, ಎಸ್.ಎಫ್.ಸಿ ವಿದ್ಯುತ್ ಶುಲ್ಕ, ಬೀದಿ ದೀಪಕ್ಕೆ 75 ಲಕ್ಷ, ಎಸ್.ಎಫ್.ಸಿ ವಿದ್ಯುತ್ ಶುಲ್ಕಗಳು, ನೀರು ಸರಬರಾಜುಗೆ 3.50 ಕೋಟಿ, ನೈರ್ಮಲ್ಯ ಹೊರ ಗುತ್ತಿಗೆ ನಿರ್ವಹಣೆ, ನೈರ್ಮಲ್ಯ ದಾಸ್ತಾನು, ಕಾರ್ಯಕ್ರಮ, ವಾಹನಗಳ ಬಾಡಿಗೆ, ರಿಪೇರಿ/, ವಿಮೆಗೆ 1.01,5 ಕೋಟಿ, ನಲ್ಮ್ ತರಭೇತಿ ವೆಚ್ಚ, ಸಹಾಯ ಧನ 10,10 ಲಕ್ಷ, ಸ್ವಚ್ಛ ಭಾರತ್ ಮಿಷನ್ ಯೋಜನಾ ಅನುಷ್ಠಾನಕ್ಕೆ 20 ಲಕ್ಷ, ಪೌರ ಕಾರ್ಮಿಕ ಗೃಹಭಾಗ್ಯ ಸಹಾಯ ಧನಕ್ಕೆ 35 ಲಕ್ಷ, ಕಟ್ಟಡಗಳ ದುರಸ್ಥಿ, ರಸ್ತೆ ಮತ್ತು ಚರಂಡಿ ದುರಸ್ಥಿ, ಮಳೆ ನೀರು ಚರಂಡಿ ಹಾಗೂ ಕಲ್ವರ್ಟ್ ದುರಸ್ಥಿ, ಒಳ ಚರಂಡಿ ದುರಸ್ಥಿ, ಮಾರುಕಟ್ಟೆ ದುರಸ್ಥಿ, ಪಾರ್ಕ್ ದುರಸ್ಥಿಗೆ 84.50 ಲಕ್ಷ, ಜಾಹೀರಾತು ವೆಚ್ಚ, ಲೇಖನ ಸಾಮಾಗ್ರಿಗಳು, ಪ್ರಯಾಣ ಭತ್ಯೆ, ಕಚೇರಿ ವೆಚ್ಚಗಳು, ವೃತ್ತಪರ ಫೀಗಳು, ಕಚೇರಿ ಹೊರ ಗುತ್ತಿಗೆ ಕಾರ್ಯಾಚರಣೆ ವೆಚ್ಚಗಳು, ಕಚೇರಿ ಉಪಕರಣಗಳ ದುರಸ್ಥಿಗಳು, ಕಾರು ಬಾಡಿಗೆ, ಜನಗಣತಿ ಕಾರ್ಯಕ್ರಮಗಳ ವೆಚ್ಚಗಳು, ಇತರೆ ವಿದ್ಯುತ್ ವೆಚ್ಚಗಳು, ದೇಣಿಗೆಗಳು, ಚುನಾವಣೆ ವೆಚ್ಚಗಳು, ಕಾರ್ಯಕ್ರಮ ವೆಚ್ಚಗಳು, ವಂತಿಗೆಗಳು, ಇತರೆ ವೆಚ್ಚಗಳು 89.60 ಲಕ್ಷ ವೆಚ್ಚವಾಗಲಿದೆ ಎಂದರು. ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಪುರಸಭೆ ಮಾಜಿ ಉಪಾಧ್ಯಕ್ಷ ದೀಪಿಕಾ ಅಶ್ವಿನ್, ಪುರಸಭೆ ಸದಸ್ಯರಾದ ಮಧು,ಎಸ್.ಕುಮಾರ್, ಪಟ್ಟಾಭಿ, ಕಿರಣ್ ಗೌಡ, ಶಶಿಧರ್ (ದೀಪು), ವೀಣಾ ಮಂಜುನಾಥ್, ನಿರ್ಮಲ ಸೇರಿದಂತೆ ಸದಸ್ಯರು ಇದ್ದರು.