ರಾಮನಗರ: ಜಿಲ್ಲಾದ್ಯಂತ ಕ್ರೈಸ್ತ ಬಾಂಧವರು ಬುಧವಾರ ಸಂಭ್ರಮ ಸಡಗರದಿಂದ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದರು.
ರಾಮನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಲೂರ್ದು ಮಾತಾ ಚರ್ಚ್, ಬಿಡದಿ ಬಳಿಯ ಸುವಿಶೇಷ ಆಶ್ರಮದ ಸಮಸ್ತ ದೇಶಗಳ ಪ್ರಾರ್ಥನಾ ಮಂದಿರದಲ್ಲಿ ಕ್ರಿಸ್ ಮಸ್ ಆಚರಣೆ ಮಾಡಲಾಯಿತು. ಮಂಗಳವಾರ ಮಧ್ಯರಾತ್ರಿಯಿಂದಲೇ ವಿಶೇಷ ಪ್ರಾರ್ಥನೆಗಳನ್ನು ಮಾಡುವ ಮೂಲಕ ಏಸುಕ್ರಿಸ್ತ ಹುಟ್ಟಿದ ದಿನವನ್ನು ಅದ್ಧೂರಿಯಾಗಿ ಆಚರಿಸಿದರು.
ಮಂಗಳವಾರ ರಾತ್ರಿ 12 ಗಂಟೆಯಲ್ಲಿ ಬಾಲ ಏಸುವಿನ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆತಂದು ಭತ್ತದ ಹುಲ್ಲು, ಲಾಳದ ಕಡ್ಡಿ, ಮರುಳು ಮತ್ತಿತರ ವಸ್ತುಗಳನ್ನು ಬಳಸಿ ಕ್ರಿಸ್ತನಿಗಾಗಿ ಮೊದಲೇ ನಿರ್ಮಿಸಿದ್ದ ತೊಟ್ಟಿಲಲ್ಲಿ (ಗೋದಲಿ) ಪ್ರತಿಷ್ಠಾಪಿಸಿ, ಪ್ರಾರ್ಥನೆ, ಪೂಜೆ ಸಲ್ಲಿಸಿ ಬಾಲ ಏಸುವನ್ನು ಬರಮಾಡಿಕೊಳ್ಳಲಾಗಿತ್ತು.ತಮ್ಮ ಜೀವನದಲ್ಲಿ ಬೆಳಕಾಗಿ ಬಂದ ಕ್ರಿಸ್ತನನ್ನು ಸಮುದಾಯದ ಸದಸ್ಯರು ಚರ್ಚ್‌ನಲ್ಲಿ ಮೋಂಬತ್ತಿ ಬೆಳಗಿ ತಮ್ಮ ಇಷ್ಟಾರ್ಥ ನೆರೆವೇರಿಸುವಂತೆ ಪ್ರಾರ್ಥಿಸಿದರು. ವಿಶೇಷ ಗೀತೆಗಳನ್ನು ಹಾಡುವ ಮೂಲಕ ಶ್ರದ್ಧಾ ಭಕ್ತಿಯನ್ನು ಮೆರೆದರು.
ಕ್ರಿಸ್‌ಮಸ್ ಹಬ್ಬ ಕ್ರೈಸ್ತ ಸಮುದಾಯವರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಹಿಂದೂಗಳೂ ಸಹ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಮೂಲಕ ಧಾರ್ಮಿಕ ಭಾವೈಕ್ಯತೆ ಮೆರೆದರು. ಅಲ್ಲದೆ ಸಮುದಾಯವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿ ಅವರೊಟ್ಟಿಗೆ ಮನೆಗಳಿಗೆ ಭೇಟಿ ನೀಡಿ ಸಿಹಿ ಪದಾರ್ಥ, ತಾಜ ಕೇಕ್ ಗಳನ್ನು, ಘಮಘಮಿಸುವ ಬಿರಿಯಾನಿ ಸೇರಿದಂತೆ ಭಕ್ಷ್ಯ ಭೋಜನವನ್ನು ಸವಿದರು.
ನಗರದ ಸಂತಮೇರಿ ಚಚ್ ನಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
(ಎರಡೂ ಫೋಟೋ ಬಳಸಿ)
4.ರಾಮನಗರದ ಲೂರ್ದು ಮಾತಾ ಚರ್ಚ್ ನಲ್ಲಿ ಕ್ರೈಸ್ತ ಬಾಂಧವರು ಏಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿದರು.