ವಿಘ್ನೇಶ್ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿಒಂದಲ್ಲ ಒಂದು ಸಮಸ್ಯೆಗಳಿಂದಾಗಿ ಕೊಡಗು ಜಿಲ್ಲೆಯಲ್ಲಿ ಕೃಷಿಕರು ಭತ್ತದ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಇದೀಗ ಪಾರಿವಾಳಗಳ ಹಿಂಡೂ ಕೂಡ ಭತ್ತದ ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಕಟಾವು ಮಾಡಿದ್ದ ಭತ್ತದ ಫಸಲು ಉದುರಿ ಹೋಗಿದ್ದು, ನಷ್ಟ ಅನುಭವಿಸುವಂತಾಗಿದೆ.
ಇತ್ತೀಚೆಗೆ ಸಿದ್ದಸಣ್ಣ ಎಂಬ ತಳಿಯನ್ನು ಎರಡು ಎಕರೆ ಜಾಗದಲ್ಲಿ ಕಟಾವು ಮಾಡಲಾಗಿದೆ. ಆದರೆ ಕಟಾವು ಮಾಡಿಟ್ಟ ಫಸಲು ತಿನ್ನಲು ಬರುವ ಪಾರಿವಾಳಗಳಿಂದ ಹೆಚ್ಚು ಫಸಲು ಉದುರಿ ಹೋಗಿದೆ. ಮಳೆ ಕೊರತೆಯಿಂದಾಗಿ ಈ ಬಾರಿ ಶೇ. 60ರಷ್ಟು ಫಸಲು ಮಾತ್ರ ಬಂದಿದೆ ಎಂದು ರವಿಶಂಕರ್ ಹೇಳುತ್ತಿದ್ದು, ಇದೀಗ ಪಾರಿವಾಳಗಳಿಂದಾಗಿ ಕಟಾವು ಮಾಡಿದ ಫಸಲಲ್ಲಿ ಶೇ. 30ರಷ್ಟು ಫಸಲು ನಷ್ಟವಾಗಿದೆ ಎಂದು ಬೇಸರದಿಂದ ನುಡಿಯುತ್ತಾರೆ.
ಭತ್ತದ ಕೃಷಿ ಕೈ ಬಿಡಬಾರದು ಎಂಬ ನಿಟ್ಟಿನಲ್ಲಿ ತಾನು ಈ ಕೃಷಿ ಮಾಡಿಕೊಂಡು ಬರುತ್ತಿದ್ದೇನೆ. ಈ ಹಿಂದೆ ಕೃಷಿಯಲ್ಲಿ ಹಂದಿಗಳ ಕಾಟ ಇತ್ತು. ಕಳೆದ ವರ್ಷ ಮಳೆಯಿಂದಾಗಿ ಕಟಾವು ಮಾಡಿದ್ದ ಫಸಲು ಮೊಳಕೆಯೊಡೆದಿತ್ತು. ಆದರೆ ಇದೀಗ ಫಸಲು ತಿನ್ನಲು ಬರುವ ಪಾರಿವಾಳಗಳಿಂದಾಗಿ ಫಸಲು ಉದುರಿ ಹೋಗುತ್ತಿದ್ದು, ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ರವಿಶಂಕರ್ ಅಳಲು ತೋಡಿಕೊಂಡಿದ್ದಾರೆ.ಇದೀಗ ಉದುರಿರುವ ಫಸಲು ಸಂಗ್ರಹಿಸುವುದು ಕಷ್ಟವಾಗಿದೆ. ಬ್ಯಾಟರಿ ಚಾಲಿತ ವ್ಯಾಕ್ಯೂಮ್ ಬಳಸಿ ಸಂಗ್ರಹಿಸುವ ಪರಿಸ್ಥಿತಿ ಉಂಟಾಗಿದೆ. ಕಟಾವು ಮಾಡಲು ಇನ್ನೂ 30 ಎಕರೆ ಭತ್ತದ ಜಮೀನಿದ್ದು, ಪಾರಿವಾಳಗಳಿಂದ ಫಸಲು ಮತ್ತಷ್ಟು ಫಸಲು ನಷ್ಟವಾಗುವ ಆತಂಕ ಎದುರಾಗಿದೆ. ಸಿದ್ದಸಣ್ಣ, ಮಣಿ ಸಣ್ಣ, ಕಾಗೆ ಸಣ್ಣ, ಮೈಸೂರು ಸಣ್ಣ ಸೇರಿದಂತೆ 20ಕ್ಕೂ ಅಧಿಕ ಬಗೆಯ ತಳಿಗಳನ್ನು ರವಿ ಶಂಕರ್ ಬೆಳೆದಿದ್ದಾರೆ.
ಭತ್ತದ ಕೃಷಿ ಕೊಡಗಿನಲ್ಲಿ ತೀರಾ ಕುಂಠಿತ!
ಭತ್ತದ ಫಸಲು ಕೈಬಿಡಬಾರದು ಎಂಬ ನಿಟ್ಟಿನಲ್ಲಿ ಈ ಕೃಷಿ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಈ ಕೃಷಿಯಲ್ಲಿ ಪ್ರತಿ ಬಾರಿ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಿದೆ. ಇದೀಗ ಪಾರಿವಾಳಗಳ ಗುಂಪಿನಿಂದ ಕಟಾವು ಮಾಡಿಟ್ಟಿದ್ದ ಫಸಲು ಉದುರಿ ಹೋಗಿವೆ. ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ.