ಆಘಾತಕ್ಕೊಳಗಾದ ದಲಿತ ಕುಟುಂಬಕ್ಕೆ ಅರಳಿ ಸ್ಥೈರ್ಯ

KannadaprabhaNewsNetwork |  
Published : Nov 12, 2025, 01:30 AM IST
ಚಿತ್ರ 11ಬಿಡಿಆರ್57 | Kannada Prabha

ಸಾರಾಂಶ

ತಾಲೂಕಿನ ಹಲಸಿ ತುಗಾಂವ ಗ್ರಾಮದಲ್ಲಿ ಕಳೆದ ತಿಂಗಳು ದಲಿತ ಯುವಕರನ್ನು ಥಳಿಸಿ ಅವರಲ್ಲಿನ ನೀಲಿ ಧ್ವಜ ಹರಿದು ಹಾಕಿ ಜಾತಿ ನಿಂದನೆಯ ಘಟನೆಯಿಂದ ಆಘಾತಕ್ಕೊಳಗಾದ ಕುಟುಂಬಕ್ಕೆ ಮಾಜಿ ಎಂಎಲ್ಸಿ ಅರವಿಂದಕುಮಾರ ಅರಳಿ ಭೇಟಿ ನೀಡಿ ಧೈರ್ಯ ತುಂಬಿದರು.

ಭಾಲ್ಕಿ: ತಾಲೂಕಿನ ಹಲಸಿ ತುಗಾಂವ ಗ್ರಾಮದಲ್ಲಿ ಕಳೆದ ತಿಂಗಳು ದಲಿತ ಯುವಕರನ್ನು ಥಳಿಸಿ ಅವರಲ್ಲಿನ ನೀಲಿ ಧ್ವಜ ಹರಿದು ಹಾಕಿ ಜಾತಿ ನಿಂದನೆಯ ಘಟನೆಯಿಂದ ಆಘಾತಕ್ಕೊಳಗಾದ ಕುಟುಂಬಕ್ಕೆ ಮಾಜಿ ಎಂಎಲ್ಸಿ ಅರವಿಂದಕುಮಾರ ಅರಳಿ ಭೇಟಿ ನೀಡಿ ಧೈರ್ಯ ತುಂಬಿದರು.ದಸರಾ ಹಬ್ಬದ ದಿನದಂದು ಧಮ್ಮ ಚಕ್ರ ಪ್ರವರ್ತನ ದರ್ಶನಕ್ಕಾಗಿ ಮಹಾರಾಷ್ಟ್ರದ ಉದಗೀರಗೆ ತೆರಳುತ್ತಿದ್ದ ಐದಾರು ದಲಿತ ಯುವಕರನ್ನು ಅಳವಾಯಿ ಗ್ರಾಮ ದಲ್ಲಿ ಅಲ್ಲಿನ ಅನ್ಯ ಕೋಮಿನ ಯುವಕರು ಕುಡಿದ ಅಮಲಿನಲ್ಲಿ ತಡೆದು ಹಲ್ಲೆ ನಡೆಸಿದಕ್ಕೆ ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇದನ್ನರಿತ ಅರವಿಂದ ಅರಳಿ ಅವರು ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದ ಡಾ.ಅಂಬೇಡ್ಕರ್ ಭವನದಲ್ಲಿ ಅರಳಿ ಅವರಿಗೆ ದಲಿತ ಸಂಘಟನೆಯ ಮುಖಂಡರು ಹಾಗೂ ಬಿಎಸ್ಪಿ ಜಿಲ್ಲಾಧ್ಯಕ್ಷ ಕಪೀಲ್ ಗೊಡಬೋಲೆ ಶಾಲು ಹೊದಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅರಳಿ ಅವರು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅತೀ ಹೆಚ್ಚು ಜಾತಿ ನಿಂದನೆ ಪ್ರಕರಣಗಳು ಭಾಲ್ಕಿ ತಾಲೂಕಿನಲ್ಲಿಯೇ ನಡೆದಿದಕ್ಕೆ ಕಳವಳ ವ್ಯಕ್ತಪಡಿಸಿದರು. ಹಾಗೂ ಹಲಸಿ ತುಗಾಂವ ಗ್ರಾಮದಲ್ಲಿ ಹಲ್ಲೆಗೊಳಗಾದ ದಲಿತ ಕುಟುಂಬಸ್ಥರಿಗೆ ಧೈರ್ಯ ತುಂಬಿ ಸಾಂತ್ವನ, ಹೇಳಿ ಎಲ್ಲಾ ಕೋಮಿನ ಜನರು ಸಹೋದರರಂತೆ ಬಾಳಿ ಇಂತಹ ಕ್ಷುಲ್ಲಕ ಕಾರಣಗಳಿಂದ ಜಗಳವಾಡುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ದಲಿತ ಹೋರಾಟಗಾರ ಭೀಮಶಾಹಿರ ಕಾಳಿದಾಸ ಸೂರ್ಯವಂಶಿ, ರಾಜಕುಮಾರ ಮೂಲಭಾರತಿ, ಪ್ರೇಮನಾಥ ಜಗತಾಪ, ಶತ್ರುಘ್ನ ಮುಳೆ, ಭೂಷಣ ಪ್ರಕಾಶ, ದತ್ತಾ ವಿಲಾಸ ಮೋರೆ ಸೇರಿದಂತೆ ಗ್ರಾಮ ಯುವಕರು, ಮಹಿಳೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ