ರಾಮನಗರ: ಜಾನಪದ ಕಲಾವಿದರ ಕಾಶಿ ಎಂದೇ ಕರೆಯಲ್ಪಡುವ ಜಾನಪದ ಲೋಕದಲ್ಲಿ ಶನಿವಾರದಿಂದ ಆರಂಭಗೊಂಡಿದ್ದ ವಿದ್ಯಾರ್ಥಿ ಜಾನಪದ ಲೋಕೋತ್ಸವಕ್ಕೆ ಭಾನುವಾರ ಅದ್ಧೂರಿಯಾಗಿ ತೆರೆ ಬಿದ್ದಿತು.
ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯದಲ್ಲಿ ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 19 ಮಂದಿಗೆ ಪ್ರಶಸ್ತಿ ಪತ್ರ, ನಗದು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ :ನಾಡೋಜ ಎಚ್.ಎಲ್. ನಾಗೇಗೌಡ-ಜಾನಪದ ಲೋಕಶ್ರೀ ಪ್ರಶಸ್ತಿಯನ್ನು ಜಾನಪದ ವಿದ್ವಾಂಸರಾದ ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ ದಕ್ಷಿಣ ಕನ್ನಡ ಜಿಲ್ಲೆ ಜಾನಪದ ವಿದ್ವಾಂಸರಾದ ಡಾ.ಕೆ.ಚಿನ್ನಪ್ಪಗೌಡ, ನಾಡೋಜ ಡಾ. ಜಿ. ನಾರಾಯಣ - ಜಾನಪದ ಲೋಕ ಪ್ರಶಸ್ತಿ ತುಮಕೂರು ಜಿಲ್ಲೆ ಕಾಡುಗೊಲ್ಲರ ಗಣೆ ವಾದನ ಕಲಾವಿದ ಚಿಕ್ಕಣ್ಣ, ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ ಜಾನಪದ ಛಾಯಾಗ್ರಾಹಕ ಡಾ.ಸಿರಿಗಂಧ ವಿ.ಶ್ರೀನಿವಾಸ ಮೂರ್ತಿ, ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿ ಬೆಂ.ದಕ್ಷಿಣ ಜಿಲ್ಲೆಯ ಪೂಜಾ ಕುಣಿತ ಕಲಾವಿದ ಶಿವಮಾದಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದ ಭೈರಪ್ಪ (ಗಂಗಣ್ಣ) ಹಾಗೂ ಲೋಕ ಸರಸ್ವತಿ ಗ್ರಂಥ ಪ್ರಶಸ್ತಿಯನ್ನು ಸ್ವಾತಂತ್ರ್ಯದ ಕಿಡಿಗಳು ಪುಸ್ತಕದ ಲೇಖಕ ಹೂಲಿ ಶೇಖರ್ ಅವರಿಗೆ ಪ್ರದಾನ ಮಾಡಲಾಯಿತು.
ಧಾರವಾಡ ಜಿಲ್ಲೆಯ ಸಾಹಸ ಕಲಾವಿದ ಮುತ್ತಪ್ಪ ಬಸವಂತಪ್ಪ ದಾತನಾಳ, ಕಾಸರಗೋಡಿನ ಯಕ್ಷಗಾನ ವೇಷಧಾರಿ ಕಲಾವಿದ ಚನಿಯಪ್ಪನಾಯ್ಕ, ಚಿಕ್ಕಮಗಳೂರು ಜಿಲ್ಲೆಯ ಸೋಬಾನೆ ಹಾಡುಗಾರ್ತಿ ಟಿ.ಶಾರದಮ್ಮ, ಬೀದರ್ ಜಿಲ್ಲೆಯ ಲಂಬಾಣಿ ನೃತ್ಯಗಾರ್ತಿ ಭಾರತಿ ಬಾಯಿ, ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಯಕ್ಷಗಾನ ಕಲಾವಿದ ಬಿ.ಎಸ್.ಗೌಡ (ಬೀರಪ್ಪ ಶಿವುಗೌಡ), ಬಾಗಲಕೋಟೆ ಜಿಲ್ಲೆಯ ಕರಡಿ ಮಜಲು ಕಲಾವಿದ ಗಂಗಪ್ಪ ಮಹಾಲಿಂಗಪ್ಪ ಕರಡಿ ಅವರಿಗೆ ನೀಡಿ ಗೌರವಿಸಲಾಯಿತು.
ಬಾಕ್ಸ್..............
ರಾಮನಗರ: ಜಾನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಜಾನಪದ ಲೋಕಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಗಮನ ಸೆಳೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ಜಾನಪದ ಲೋಕ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದನ್ನು ಗಮನಕ್ಕೆ ತಂದಿದ್ದಾರೆ. ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆಗಳಿಗೆ ಸಂಬಂಧಿಸಿದಂತೆ ಫೆ.11ರಂದು ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿಯೇ ಜಾನಪದ ಲೋಕಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡುತ್ತೇನೆ ಎಂದರು.
8ಕೆಆರ್ ಎಂಎನ್ 5.ಜೆಪಿಜಿ