ಅಪಪ್ರಚಾರ ಮಾಡುವವರಿಗೆ ಮತದಾರರಿಂದಲೇ ಪಾ: ಬಾಲರಾಜು

KannadaprabhaNewsNetwork |  
Published : Apr 09, 2024, 12:48 AM IST
ಅಪಪ್ರಚಾರ ಮಾಡುವವರಿಗೆ ಮತದಾರರಿಂದಲೇ ಪಾಠ- ಬಾಲರಾಜು  | Kannada Prabha

ಸಾರಾಂಶ

ನನ್ನ ವಿರುದ್ಧ ಅಪಪ್ರಚಾರ ಸರಿಯಲ್ಲ, ಜನತೆ ಯಾರನ್ನು ಬೆಂಬಲಿಸಬೇಕೊ ಅವರಿಗೆ ಬೆಂಬಲ ನೀಡುತ್ತಾರೆ. ನಾನು ಯಾರ ವಿರುದ್ಧವೂ ಅಪಪ್ರಚಾರ ಮಾಡುವ ವ್ಯಕ್ತಿಯಲ್ಲ, ಕ್ಷೇತ್ರದ ಜನತೆ ಎಲ್ಲವನ್ನು ವೀಕ್ಷಿಸುತ್ತಿದ್ದು ಈ ಚುನಾವಣೆಯಲ್ಲಿ ಅಪಪ್ರಚಾರ ನಡೆಸಲು ಕುಮ್ಮಕ್ಕು ನೀಡಿದವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲನನ್ನ ವಿರುದ್ಧ ಅಪಪ್ರಚಾರ ಸರಿಯಲ್ಲ, ಜನತೆ ಯಾರನ್ನು ಬೆಂಬಲಿಸಬೇಕೊ ಅವರಿಗೆ ಬೆಂಬಲ ನೀಡುತ್ತಾರೆ. ನಾನು ಯಾರ ವಿರುದ್ಧವೂ ಅಪಪ್ರಚಾರ ಮಾಡುವ ವ್ಯಕ್ತಿಯಲ್ಲ, ಕ್ಷೇತ್ರದ ಜನತೆ ಎಲ್ಲವನ್ನು ವೀಕ್ಷಿಸುತ್ತಿದ್ದು ಈ ಚುನಾವಣೆಯಲ್ಲಿ ಅಪಪ್ರಚಾರ ನಡೆಸಲು ಕುಮ್ಮಕ್ಕು ನೀಡಿದವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜು ಹೇಳಿದರು. ಅವರು ತಮ್ಮ ನಿವಾಸದಲ್ಲಿ ವಿವಿಧ ಮುಖಂಡರ ಪಕ್ಷ ಸೇರ್ಪಡೆ ಬಳಿಕ ಮಾತನಾಡಿ, ಕಾಂಗ್ರೆಸಿಗರು ದಲಿತ ಸಮಾಜದ ಮತಕ್ಕಾಗಿ ರಾಜಕೀಯ ಮಾಡುವ ಮೂಲಕ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ, ಬಿಜೆಪಿ ಗೆದ್ದರೆ ಸಂವಿಧಾನ ಬದಲಾವಣೆಯಾಗುತ್ತೆ ಎನ್ನುತ್ತಿದ್ದಾರೆ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಿಸುವ ಶಕ್ತಿ ಯಾರಿಗೂ ಇಲ್ಲ ಎಂದರು. ಬಿಜೆಪಿ ನನಗೊಂದು ಅವಕಾಶ ನೀಡಿದೆ, ಮತದಾರ ಒಲವು ಸಹಾ ನನ್ನ ಮೇಲಿದ್ದು ಗೆಲ್ಲುವ ವಿಶ್ವಾಸವಿದೆ, ದೇಶದ ಅಭಿವೃದ್ಧಿಗಾಗಿ ನರೇಂದ್ರಮೋದಿ ಪ್ರಧಾನಿಗಳಾಗಬೇಕು, ಈನಿಟ್ಟಿನಲ್ಲಿ ನನ್ನ ಗೆಲುವಿಗೆ ಕಾರ್ಯಕರ್ತರು ಪ್ರಮಾಣಿಕವಾಗಿ ಶ್ರಮಿಸಬೇಕು ಎಂದು ಹೇಳಿದರು. ಇದೆ ವೇಳೆ ಉಮ್ಮತ್ತೂರು ತಾಪಂ ಮಾಜಿ ಸದಸ್ಯೆ ಮಂಜುಳಾ ಚಂದ್ರು, ರಘು, ಮಲ್ಲೇಶ್, ಗ್ರಾಪಂ ಮಾಜಿ ಸದಸ್ಯ ಕೆಂಪಶೆಟ್ಟಿ, ಮುಖಂಡರಾದ ಸಿದ್ದೇಶ್ ನಂದ, ಸಿದ್ದರಾಜು ಮತ್ತಿತರರು ಪಕ್ಷ ಸೇರ್ಪಡೆಗೊಂಡ ಹಿನ್ನೆಲೆ ಅವರುಗಳಿಗೆ ಬಿಜೆಪಿ ಶಲ್ಯ ಹಾಕುವ ಮೂಲಕ ಪಕ್ಷ ಸೇರ್ಪಡೆ ಮಾಡಿಕೊಳ್ಳಲಾಯಿತು. ಈ ವೇಳೆ ಮುಖಂಡರಾದ ಜಿ.ಮಹದೇವಪ್ಪ, ಪರಶಿವ, ಚಂದ್ರು, ಬಸವರಾಜು, ದಿನೇಶ್ ಗುಪ್ತಾ, ಮಹದೇವಸ್ವಾಮಿ ಇನ್ನಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ
ರೈತ ಭವನ ಶಿಥಿಲ, ವಾಸಿಸಲು ಜಟಿಲ!