ಚನ್ನಪಟ್ಟಣ: ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ, ಕೊರತೆ ಇದೆ. ಆದರೆ ಅದು ನಮ್ಮಿಂದ ಆಗಿದ್ದಲ್ಲ, ಅದು ಹಿಂದಿನ ಸರ್ಕಾರದ ಬಳುವಳಿ. ನಮ್ಮ ಸರ್ಕಾರ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.
ಸಿಎಸ್‌ಆರ್ ಫಂಡ್‌ನಲ್ಲಿ ದೊಡ್ಡದೊಡ್ಡ ಶಾಲೆಗಳನ್ನ ಮಾಡಬೇಕು ಅನ್ನೋದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸು. ಈ ವರ್ಷ ೫೦೦ ಕೆಪಿಎಸ್ ಶಾಲೆಗಳ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ೨೫೦೦ ಕೋಟಿ ಅನುದಾನವನ್ನ ಮೀಸಲಿರಿಸಿದ್ದೇವೆ ಎಂದು ತಿಳಿಸಿದರು.
ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಾಲೆ:ನಮ್ಮ ಇಲಾಖೆ ಸಮಸ್ಯೆ ಬಾಯಿಬಿಟ್ಟು ಹೇಳಲಿಲ್ಲ ಅಂದರೆ ಅದು ಬಗೆಹರಿಯಲ್ಲ. ಅದಕ್ಕಾಗಿ ಪರೀಕ್ಷೆಯ ವೇಳೆ ವೆಬ್ ಕಾಸ್ಟಿಂಗ್ ತಂದು ಕಾಪಿ ಆಗೋದನ್ನ ತಡೆದಿದ್ದೇವೆ. ಇದರಿಂದ ಸಾಕಷ್ಟು ಮಕ್ಕಳು ಫೇಲ್ ಆದರು. ಅದಕ್ಕಾಗಿ ಮೂರು ಪರೀಕ್ಷಾ ನೀತಿಗಳನ್ನ ತಂದಿದ್ದೇವೆ. ಫೇಲ್ ಆದವರಿಗೆ ಫೀಸ್ ಇಲ್ಲದೇ ಪರೀಕ್ಷೆ ನೀಡುತ್ತಿದ್ದೇವೆ. ನಮ್ಮ ಇಲಾಖೆಯಿಂದ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಾಲೆ ಪ್ರಾರಂಭ ಮಾಡಲಾಗುವುದು. ದೇಶದಲ್ಲೇ ಇಂತಹದೊಂದು ಪ್ರಯೋಗ ಇದೇ ಮೊದಲು. .ವೆಂಕಟಪ್ಪರವರು ಎರಡು ಶಾಲೆಗಳನ್ನ ನಮ್ಮ ಇಲಾಖೆಗೆ ಕಟ್ಟಿಸಿಕೊಟ್ಟಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.
ಶಿಕ್ಷಣ ಇಲಾಖೆ ಸಿಗಲು ಡಿಕೆಶಿ ಕಾರಣ: ಮಧು
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಹಾಗೂ ಸುರ್ಜೇವಾಲ ಮೂವರು ಚರ್ಚೆ ಮಾಡಿ ನನಗೆ ಬೇರೆ ಇಲಾಖೆ ಕೊಡಲು ನಿರ್ಧಾರ ಮಾಡಿದ್ದರು. ಆದರೆ ಬಳಿಕ ಡಿಕೆಶಿ ಅವರು ನನ್ನ ತಂದೆ ಮೇಲಿನ ಗೌರವಕ್ಕೆ ಒಳ್ಳೆಯ ಖಾತೆ ನೀಡಬೇಕು ಅಂತ ಶಿಕ್ಷಣ ಇಲಾಖೆ ಕೊಟ್ಟರು. ನನ್ನ ಮೇಲೆ ವಿಶ್ವಾಸ ಇಟ್ಟು ಈ ಇಲಾಖೆ ಕೊಟ್ಟಿದ್ದಕ್ಕೆ ಡಿಸಿಎಂ ಸಾಹೇಬ್ರಿಗೆ ಧನ್ಯವಾದಗಳು ಎಂದರು. ಕೋಟ್ .................
-ಮಧುಬಂಗಾರಪ್ಪ, ಶಿಕ್ಷಣ ಸಚಿವ