ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅನಾವರಣಕ್ಕೆ ವೇದಿಕೆ ಅಗತ್ಯ

KannadaprabhaNewsNetwork |  
Published : Jun 01, 2025, 01:46 AM IST
31ಡಿಡಬ್ಲೂಡಿ5ಜೆಎಸ್ಎಸ್. ಶ್ರೀ ಮಂಜುನಾಥೇಶ್ವರ ಎಂಸಿಎ ಇನ್ಸಿಟಿಟ್ಯೂಟ್‌ ಮತ್ತು ಜೆಎಸ್ಎಸ್ ಡಾ. ಡಿ. ವೀರೇಂದ್ರ ಹೆಗ್ಗಡೆ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ಸಹಯೋಗದಲ್ಲಿ ನಡೆದ “ಸಂಯೋಜನಾ 2025” ಒಂದು ದಿನದ ರಾಜ್ಯಮಟ್ಟದ ಪ್ರತಿಭಾ ಉತ್ಸವದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. | Kannada Prabha

ಸಾರಾಂಶ

ಪ್ರೀತಿ ಮತ್ತು ನಂಬಿಕೆ ಮನುಷ್ಯನಲ್ಲಿ ಬಹು ಮುಖ್ಯವಾದುದು. ಮನುಷ್ಯತ್ವ ಇರದಿದ್ದರೆ ಎಷ್ಟು ದೊಡ್ಡ ವ್ಯಕ್ತಿಯಾದರು ಪ್ರಯೋಜನವಿಲ್ಲ

ಧಾರವಾಡ: ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೆ ಸಾಲದು ಅದನ್ನು ಪ್ರದರ್ಶಿಸುವುದು ಮುಖ್ಯ. ಸಂಯೋಜನಾ-2025 ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರತಿಭೆ ಪ್ರದರ್ಶಿಸುವ ಕಲೆ ಹೊರತರಲು ಜೆ.ಎಸ್.ಎಸ್.ಸಂಸ್ಥೆ ಪ್ರಯತ್ನಿಸಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ನಿಲಿಂಗಪ್ಪ ಮಟ್ಟಿಹಾಳ ಹೇಳಿದರು.

ಜೆಎಸ್ಎಸ್ ಶ್ರೀಮಂಜುನಾಥೇಶ್ವರ ಎಂಸಿಎ ಇನ್ಸಿಟಿಟ್ಯೂಟ್‌ ಮತ್ತು ಜೆಎಸ್ಎಸ್ ಡಾ.ಡಿ.ವೀರೇಂದ್ರ ಹೆಗ್ಗಡೆ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಆ್ಯಂಡ್ ರಿಸರ್ಚ್ ಸಹಯೋಗದಲ್ಲಿ ನಡೆದ ಸಂಯೋಜನಾ 2025 ಒಂದು ದಿನದ ರಾಜ್ಯಮಟ್ಟದ ಪ್ರತಿಭಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೆಎಸ್ಎಸ್ ಎಂ.ಸಿ.ಎ. ಕಾಲೇಜಿನ ನಿರ್ದೇಶಕ ಡಾ.ಸೂರಜ್ ಜೈನ್ ಮಾತನಾಡಿ, ಪ್ರೀತಿ ಮತ್ತು ನಂಬಿಕೆ ಮನುಷ್ಯನಲ್ಲಿ ಬಹು ಮುಖ್ಯವಾದುದು. ಮನುಷ್ಯತ್ವ ಇರದಿದ್ದರೆ ಎಷ್ಟು ದೊಡ್ಡ ವ್ಯಕ್ತಿಯಾದರು ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸಿದರೆ ಯಾವುದೇ ಕಾರ್ಯದಲ್ಲಿಯೂ ಯಶಸ್ಸು ಪಡೆಯಬಹುದು ಎಂದು ಹೇಳಿದರು.

ನಿರ್ದೇಶಕ ಡಾ. ಸುನೀಲ ಕುಮಾರ ಹಿರೇಮಠ ಪ್ರಾಸ್ತಾವಿಕ ಮಾತನಾಡಿ, ಸಂಯೋಜನಾ-25 ಕಾರ್ಯಕ್ರಮದಲ್ಲಿ ಕಲಾಸಂಗಮ, ಚತುರ-ಕ್ವಿಜ್, ಸಮರ್ಥ ನಾಯಕ, ನೃತ್ಯಾಂಗನ ಮತ್ತು ಚಿತ್ರವಾಹಿನಿ ಸ್ಫರ್ಧೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಡೆಯಿಂದ ಸ್ನಾತಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ತಿಳಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಂಸಿಎ ನಿರ್ದೇಶಕ ಡಾ.ಸೂರಜ್ ಜೈನ್ ಮತ್ತು ಎಂ.ಬಿ.ಎ.ನಿರ್ದೇಶಕ ಡಾ. ಸುನೀಲ್‌ಕುಮಾರ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಿದರು

ಡಾ.ಸುನೀಲಕುಮಾರ ಹಿರೇಮಠ, ಮಂಜುನಾಥ ಪೂಜಾರ, ಪೂಜಾ ಉಪಸ್ಥಿತರಿದ್ದರು. ಸರೋಜಾ ಕಲಕೇರಿ, ಸಿಂಚನಾ ನಾಯ್ಕ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ