ಕೊಪ್ಪಳ:
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಅವರ ಅಂಗವೈಕಲ್ಯತೆಗೆ ಅನುಗುಣವಾದ ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಬೇಕಿದೆ. ವಿಶೇಷಚೇತನ ನೌಕರರು ಕ್ರೀಡೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿದಾಗ ಅವಕಾಶ ಕಲ್ಪಿಸಲಾಗಿದೆ. 6ನೇ ಬಾರಿಗೆ
ಜಿಲ್ಲೆಯಲ್ಲಿ ವಿಶೇಷಚೇತನ ನೌಕರರಿಗೆ ಪ್ರತ್ಯೇಕವಾಗಿ ಕ್ರೀಡಾಕೂಟ ಏರ್ಪಡಿಸಲಾಗಿದೆ. ಅವರ ಆಸೆಯದಂತೆ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದಲ್ಲೂ ವಿಶೇಷಚೇತನ ನೌಕರರ ಕ್ರೀಡಾಕೂಟ ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಯಾವುದೇ ರೀತಿಯ ಕ್ರೀಡೆ ಆಯೋಜಿಸಿದರೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಉತ್ತಮ ಪ್ರತಿಭೆ ಗುರುತಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು.
ಈ ವೇಳೆ ಜಿಲ್ಲಾ ಖಚಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಪರಿಷತ್ ಸದಸ್ಯ ಆಸೀಫ್ ಅಲಿ, ಜಂಟಿ ಕಾರ್ಯದರ್ಶಿ ನಾಗರಾಜ ಕುಷ್ಟಗಿ, ಕನಕಗಿರಿ ತಾಲೂಕಾಧ್ಯಕ್ಷೆ ಶಂಶಾದ ಬೇಗಂ, ಕಾರಟಗಿ ತಾಲೂಕಾಧ್ಯಕ್ಷ ಹನುಮಂತಪ್ಪ ನಾಯಕ, ವಿಕಲಚೇತನ ಜಿಲ್ಲಾಧ್ಯಕ್ಷ ಅಂದಪ್ಪ ಬೋಳರೆಡ್ಡಿ, ತಾಲೂಕಾಧ್ಯಕ್ಷ ಅಂದಪ್ಪ ಇದ್ಲಿ, ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಳಪ್ಪ ಕಾಳೆ, ಪ್ರಚಾರ ಸಮಿತಿ ಸಂಚಾಲಕ ನಾಗರಾಜ ನಾಯಕ ಡೊಳ್ಳಿನ, ರಾಜ್ಯ ಕ್ರೀಡಾ ಕಾರ್ಯದರ್ಶಿ ಮಂಜುನಾಥ ಆರೆಂಟನೂರು, ಪತ್ತಿನ ಸಂಘದ ಸದಸ್ಯರಾದ ಮಲ್ಲಪ್ಪ ಗುಡದಣ್ಣವರ, ನಫೀಜಖಾನ ಪಠಾಣ ಹಾಜರಿದ್ದರು.