ಬ್ರಾಹ್ಮಣ ಸರ್ವರ ಹಿತ ಬಯಸುವ ಸಮಾಜ: ಪ್ರಮೋದ ಮುತಾಲಿಕ್

KannadaprabhaNewsNetwork |  
Published : Nov 10, 2025, 01:30 AM IST
ಲಕ್ಷ್ಮೇಶ್ವರದ ಶಂಕರಭಾರತಿ ಮಠದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಮಾಜದಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಮತಾಂತರ ಇತ್ಯಾದಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದವರ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಲಕ್ಷ್ಮೇಶ್ವರ: ಬ್ರಾಹ್ಮಣರು ಸಮಾಜದಲ್ಲಿನ ಎಲ್ಲ ವರ್ಗಗಳ ಜನರಿಗೂ ಒಳಿತನ್ನು ಬಯಸುವವರಾಗಿದ್ದು, ಯಾವುದೇ ರೀತಿಯ ಸಮಾಜದ್ರೋಹಿ ಕಾರ್ಯಗಳನ್ನು ಮಾಡದೆ ಎಲ್ಲ ಹಿತವನ್ನು ಬಯಸುವ ಸಮಾಜವಾಗಿದೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ತಿಳಿಸಿದರು.

ಶನಿವಾರ ಪಟ್ಟಣದ ಶಂಕರಭಾರತಿ ಮಠದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇಂದು ಸಮಾಜ ಕಟ್ಟುವಲ್ಲಿ ಬ್ರಾಹ್ಮಣ ಸಮಾಜ ನೀಡಿದ ಕೊಡುಗೆ ಅಪಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಅನೇಕ ಸಮಾಜವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಸಮಾಜದ ಪ್ರತಿಯೊಬ್ಬ ಪಾಲಕರು ತಮ್ಮ ತಮ್ಮ ಮಕ್ಕಳ ಕಡೆಗೆ ವಿಶೇಷ ಗಮನವನ್ನು ನೀಡುವುದು ಅವಶ್ಯವಾಗಿದೆ ಎಂದರು.

ಸಮಾಜದಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಮತಾಂತರ ಇತ್ಯಾದಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದವರ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಿಂದೂ ಸಮಾಜವನ್ನು ದೇಶದಲ್ಲಿ ಉಳಿಯುವಂತೆ ಮಾಡಿದ್ದು ಆದಿ ಶಂಕರರಾಚಾರ್ಯರು. ಅವರಿಂದಲೆ ಹಿಂದೂ ಧರ್ಮ ಬೆಳಗುವಂತಾಯಿತು ಎಂದು ಹೇಳಿದ ಅವರು, ಸಮಾಜದವರು ಒಗ್ಗಟ್ಟಾಗಿ ಸಾಗಿದಾಗ ಎಂತಹುದೆ ಕಠಿಣ ಪರಿಸ್ಥಿತಿ ಬಂದರೂ ಎದುರಿಸಬಹುದಾಗಿದೆ ಎಂದರು.ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್, ಸಮಾಜದ ಹಿರಿಯರಾದ ನಾರಾಯಣಭಟ್ ಪುರಾಣಿಕ, ಪ್ರಹ್ಲಾದ್‌ರಾವ್ ಕುಲಕರ್ಣಿ, ಕೆ.ಎಸ್. ಕುಲಕರ್ಣಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ, ಎಸ್.ಜಿ. ಹೊಂಬಳ, ಅರವಿಂದ ದೇಶಪಾಂಡೆ, ಅನಿಲ ಕುಲಕರ್ಣಿ, ರಾಘವೇಂದ್ರ ಪೂಜಾರ, ಡಿ.ಎಂ. ಪೂಜಾರ, ಡಾ. ಪ್ರಸನ್ನ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಅನಂತಭಟ್ ಪೂಜಾರ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ