ಓದುಗರು ತನ್ಮಯರಾಗಿ ಓದುವಂತೆ ಮಾಡುವ ಕೃತಿ

KannadaprabhaNewsNetwork |  
Published : Jun 13, 2025, 03:12 AM IST
12ಬಿಎಸ್ವಿ01- ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಸೋಮೇಶ್ವರ ಭಜನಾ ಮಂಟಪದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಕ್ತರ ಭಾಗ್ಯನಿಧಿ ಮನಗೂಳಿಯ ನಂದಿಬಸವೇಶ್ವರ ಕೃತಿಯನ್ನು ಹಿರಿಯ ಸಾಹಿತಿ ಸಿದ್ದಲಿಂಗ ಮನಹಳ್ಳಿ ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಸಾಹಿತಿ ಮುರುಗೇಶ ಸಂಗಮ ಅವರು ಬರೆದ ಭಕ್ತರ ಭಾಗ್ಯನಿಧಿ ಮನಗೂಳಿಯ ಶ್ರೀ ನಂದಿಬಸವೇಶ್ವರ ಕೃತಿ ಬಸವೇಶ್ವರ ದೇವಸ್ಥಾನದ ಹಿನ್ನೆಲೆಯನ್ನು ಚಿರವಾಗಿಸುವ ಮೌಲಿಕವಾದ ಮೇರು ಕೃತಿಯಾಗಿದೆ ಎಂದು ಹಿರಿಯ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಸಾಹಿತಿ ಮುರುಗೇಶ ಸಂಗಮ ಅವರು ಬರೆದ ಭಕ್ತರ ಭಾಗ್ಯನಿಧಿ ಮನಗೂಳಿಯ ಶ್ರೀ ನಂದಿಬಸವೇಶ್ವರ ಕೃತಿ ಬಸವೇಶ್ವರ ದೇವಸ್ಥಾನದ ಹಿನ್ನೆಲೆಯನ್ನು ಚಿರವಾಗಿಸುವ ಮೌಲಿಕವಾದ ಮೇರು ಕೃತಿಯಾಗಿದೆ ಎಂದು ಹಿರಿಯ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಹೇಳಿದರು.

ತಾಲೂಕಿನ ಮನಗೂಳಿ ಪಟ್ಟಣದ ಸೋಮೇಶ್ವರ ಭಜನಾ ಮಂಟಪದಲ್ಲಿ ಬಸವೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಮಂಗಳವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯದ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಕವಿ ಮುರುಗೇಶ ಸಂಗಮ ದೇವಸ್ಥಾನದ ಇತಿಹಾಸವನ್ನು ಸರಳ ರೀತಿಯಲ್ಲಿ ಜನರಿಗೆ ತಿಳಿಸಿದ್ದಾರೆ. ಹೀಗಾಗಿ ಓದುಗರು ತನ್ಮಯರಾಗಿ ಕೃತಿಯನ್ನು ಓದುವಂತೆ ಮಾಡುವ ಶಕ್ತಿ ಈ ಕೃತಿಗಿದೆ ಎಂದು ಬಣ್ಣಿಸಿದರು.ಕೃತಿ ಪರಿಚಯಿಸಿದ ಬಸವನಬಾಗೇವಾಡಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪಿ.ಎಲ್.ಹಿರೇಮಠ ಮಾತನಾಡಿˌಲೇಖಕ ಮುರುಗೇಶ ಸಂಗಮ ಅವರು ಮನಗೂಳಿ ಬಸವೇಶ್ವರ ದೇವಸ್ಥಾನದ ಇತಿಹಾಸವನ್ನು ಬಲು ಸೊಗಸಾಗಿ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ದೇವಾಲಯ ನಿರ್ಮಾಣ ಮತ್ತು ಪುರಾತನವಾದ ಆಚರಣೆ ಹಾಗೂ ಪರಂಪರೆಯ ಆಳ ಅಗಲನ್ನು ಶೋಧಿಸಿˌ ಚರಿತ್ರೆಯನ್ನು ಸರಳವಾಗಿ ವಿವರಿಸಿದ್ದಾರೆ. ಹಾಗಾಗಿ ಈ ಕೃತಿಯನ್ನು ಓದಿದರೆ ದೇವಸ್ಥಾನದ ಸಂಪೂರ್ಣ ಪರಿಚಯ ನಮಗಾಗಲಿದೆ. ಲೇಖಕರು ದೇಗುಲದ ಚರಿತ್ರೆಯನ್ನು ಸರಳವಾಗಿ ಅರ್ಥೈಸಿದ್ದಾರೆ ಎಂದು ವಿವರಿಸಿದರು.ಅತಿಥಿಯಾಗಿ ಭಾಗವಹಿಸಿದ್ದ ಧುರೀಣ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ದೇವಸ್ಥಾನವೊಂದರ ಹಿನ್ನೆಲೆಯನ್ನು ಜನರಿಂದ ಕೇಳಿ ಕೃತಿ ರಚಿಸುವುದು ಸುಲಭದ ಕಾರ್ಯವಲ್ಲ. ಅಂಥ ಕೆಲಸವನ್ನು ಮುರುಗೇಶ ಸಂಗಮ ಮಾಡಿರುವುದು ಸಂತಸದ ಸಂಗತಿಯಾಗಿದೆ ಎಂದು ಶ್ಲಾಘಿಸಿದರು.ಸಾನಿಧ್ಯ ವಹಿಸಿದ್ದ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಮಾತನಾಡಿ, ಜ್ಞಾನ ಮನುಷ್ಯನ ವಿಕಸನದ ಸಾಧನ. ಮನಗೂಳಿ ಬಸವೇಶ್ವರ ದೇವಸ್ಥಾನದ ಐತಿಹಾಸಿಕತೆಯನ್ನು ಅರ್ಥಪೂರ್ಣವಾಗಿ ಬರೆಯುವ ಮೂಲಕ ಲೇಖಕರು ದೇವಸ್ಥಾನದ ಪ್ರಾಚೀನತೆಯನ್ನು ಓದುಗರಿಗೆ ತಿಳಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಾಹಿತಿ ಮುರುಗೇಶ ಸಂಗಮ ಅವರ ಕೆಲಸ ಮೆಚ್ಚುವಂತದ್ದು ಎಂದರು.ದೇವಸ್ಥಾನದ ಗೌರವಾಧ್ಯಕ್ಷ ಸುಭಾಸಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಈರಪ್ಪ ಹುಣಶಿಕಟ್ಟಿˌ ಪಿ.ಸಿ.ಕುಲಕರ್ಣಿˌ ಗುರಪ್ಪ ದಮಗೊಂಡˌ ಮಹಿಬೂಬ ತೆಗ್ಗಿ ˌ ರೇವಣಸಿದ್ಧ ಮಣೂರˌ ಚಂದ್ರಕಾಂತ ಕಾಂಬಳೆˌ ಗೊಲ್ಲಾಳಪ್ಪಗೌಡ ಗುಜಗೊಂಡˌ ಪ.ಪಂ.ಅಧ್ಯಕ್ಷ ಡಾ.ಎಂ.ಡಿ.ಮೇತ್ರಿ ˌಮುಖ್ಯಾಧಿಕಾರಿ ಶಬ್ಬೀರ ರೇವೂರಕರ ದೇವಸ್ಥಾನ ಸಮಿತಿ ಸದಸ್ಯರಾದ ಮುದುಕಣ್ಣ ಬನ್ನಟ್ಟಿ ˌ ವಿಠ್ಠಲ ಶಿಂಧೆˌ ವಿನೋದ ಕುಲಕರ್ಣಿ,ಶಿವಾಜಿ ಮೋರೆ ಇದ್ದರು.ಕೌಟಿಲ್ಯ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕೃತಿಕರ್ತೃ ಮುರುಗೇಶ ಸಂಗಮ ಪ್ರಾಸ್ತಾವಿಕ ಮಾತನಾಡಿದರು. ರಾಜುಗೌಡ ಪಾಟೀಲ ಸ್ವಾಗತಿಸಿˌ ನಿರೂಪಿಸಿದರು. ಸಾಹಿತಿ ಸಿದ್ಧರಾಮ ಬಿರಾದಾರ ವಂದಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ