ಕುಟುಂಬ ಐಡಿ ತಪಾಸಣೆ ಕೈ ಬಿಡಿ: ಸರ್ಕಾರಕ್ಕೆ ಕಾರ್ಮಿಕರ ಮನವಿ

KannadaprabhaNewsNetwork |  
Published : Mar 15, 2025, 01:00 AM IST
13ಕೆಪಿಎಲ್11:ಕೊಪ್ಪಳ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕುಟುಂಬ ಐಡಿ ಮರು ತಪಾಸಣೆ ಮಾಡುವುದನ್ನು ಕೈ ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕಾರಿ ಕಾರ್ಮಿಕ ಫೆಡರೇಷನ್ಸ ರ್ಕಾರಕ್ಕೆ ಮನವಿ ಸಲ್ಲಿಸಿತು. | Kannada Prabha

ಸಾರಾಂಶ

ಈಗಾಗಲೇ ಕಾರ್ಮಿಕರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕಟ್ಟಡ ಕಾರ್ಮಿಕ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತೇಜಾವತಿ ಅವರು ಯಾವುದೇ ಸೂಚನೆ-ಸಲಹೆ ನೀಡದೆ ಅರ್ಜಿದಾರರ ಕುಟುಂಬದ ಐಡಿ ಪರಿಶೀಲಿಸಿಲಿಸುವಂತೆ ಹೇಳಿದ್ದಾರೆ.

ಕೊಪ್ಪಳ:

ಕಾರ್ಮಿಕರ ವಿವಿಧ ಸೌಲಭ್ಯಗಳಿಗಾಗಿ ಕುಟುಂಬ ಐಡಿ ಮರು ತಪಾಸಣೆ ಮಾಡುವುದನ್ನು ಕೈಬಿಡುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕ್ವಾರಿ ಕಾರ್ಮಿಕ ಫೆಡರೇಷನ್ ಜಿಲ್ಲಾ ಸಮಿತಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಈಗಾಗಲೇ ಕಾರ್ಮಿಕರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕಟ್ಟಡ ಕಾರ್ಮಿಕ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತೇಜಾವತಿ ಅವರು ಯಾವುದೇ ಸೂಚನೆ-ಸಲಹೆ ನೀಡದೆ ಅರ್ಜಿದಾರರ ಕುಟುಂಬದ ಐಡಿ ಪರಿಶೀಲಿಸಿಲಿಸುವಂತೆ ಹೇಳಿದ್ದಾರೆ. ಇದೊಂದು ಅವೈಜ್ಞಾನಿಕ ನಡೆಯಾಗಿದೆ. ಅರ್ಜಿ ಸಲ್ಲಿಸಿದ ಅರ್ಜಿಗಳನ್ನೇ ಮತ್ತೆ ಪುನರ್ ಪರಿಶೀಲನೆ ಮಾಡುವುದು ಸರಿಯಲ್ಲ. ಈ ಹಿಂದೆ ಕುಟುಂಬ ಐಡಿ ಯೋಜನೆಯಡಿ ವಿವಿಧ ಹುದ್ದೆಗಳ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕುಟುಂಬ ಐಡಿಯ ಹಿಂದೆ ಹಲವಾರು ಕಾರಣಗಳು ಇವೆ. ಈಗ ಕಾರ್ಮಿಕ ಅಥವಾ ಮತ್ತ್ಯಾವುದೇ ಹುದ್ದೆ ಮಾಡುತ್ತಿರಬಹುದು. ಆ ಕಾರಣ ನೀಡಿ ಅರ್ಜಿ ತಿರಸ್ಕಾರ ಸರಿಯಲ್ಲ. ಅಧಿಕಾರಿಗಳ ಈ ನಡೆ ಸಹಿಸಲ್ಲ. ಈ ಬಗ್ಗೆ ಅಧಿಕಾರಿಗಳು ಅಧಿಕೃತ ಆದೇಶ ಹೊರಡಿಸಲಿ. ಸುಮ್ಮನೆ ಅನ್ಯ ಮಾರ್ಗದಲ್ಲಿ ಅಧಿಕಾರ ದುರುಪಯೋಗ ಮಾಡುವುದು ಸರಿಯಲ್ಲ ಎಂದು ಆರೋಪಿಸಿಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಕಳಕಳಿಯ ಎಸ್ಎಸ್‌ ಅಪ್ರತಿಮ ನಾಯಕ: ಸೈಯದ್‌ ನುಡಿನಮನ
ಶಿವಶಂಕರಪ್ಪ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ