ಸಾಧಿಸುವ ಛಲವೊಂದಿದ್ದರೆ ಯಾವುದು ಅಸಾಧ್ಯವಲ್ಲ ಎಂಬ ಹಿರಿಯರ ಮಾತನ್ನು ಅಭಿಷೇಕ್ ನಾಯಕ್ ಸಾಬೀತು ಮಾಡಿದ್ದಾರೆ. ಅಂಕಗಳು ಕೇವಲ ಸಂಖ್ಯೆಗಳಲ್ಲ, ಅವು ವಿದ್ಯಾರ್ಥಿಗಳ ಜ್ಞಾನ ಮತ್ತು ಶಿಸ್ತಿನ ಪ್ರತಿಬಿಂಬ. ಈ ಸಾಧನೆ ನಿಜಕ್ಕೂ ಹೆಮ್ಮೆ ತರುವಂತಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಭಾರತೀಯ ಅರಣ್ಯ ಸೇವಾ (ಐಎಫ್‌ಎಸ್) ಪರೀಕ್ಷೆಯಲ್ಲಿ 122ನೇ ಶ್ರೇಣಿಯಲ್ಲಿ ಆಯ್ಕೆಯಾದ ಗಂಜಾನ ಅಭಿಷೇಕ್ ನಾಯಕ್ ಅವರನ್ನು ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಸೇರಿದಂತೆ ಗ್ರಾಮಸ್ಥರು, ಹಲವು ಹಿತೈಷಿಗಳು ಅಭಿನಂದಸಿದರು.
ನಂತರ ಸಚ್ಚಿದಾನಂದ ಮಾತನಾಡಿ, ಗಂಜಾಂ ಗ್ರಾಮದ ಪುರಸಭಾ ಮಾಜಿ ಸದಸ್ಯ ಗಂಜಾಂ ಶಿವು ಮತ್ತು ರಾಜೇಶ್ವರಿ ದಂಪತಿ ದ್ವಿತೀಯ ಪುತ್ರ ಅಭಿಷೇಕ್ ನಾಯಕ್ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಭಾರತದ ಅತ್ಯುನ್ನತ ಸರ್ಕಾರಿ ಸೇವೆಗಳಿಗಾಗಿ ಪ್ರಸಕ್ತ ಸಾಲಿಗೆ ನಡೆಸಿದ ಭಾರತೀಯ ಅರಣ್ಯ ಸೇವಾ (ಐಎಫ್‌ಎಸ್) ಪರೀಕ್ಷೆಯಲ್ಲಿ ಕಠಿಣ ಪರಿಶ್ರಮ ಮತ್ತು ಪ್ರಯತ್ನದ ಮೂಲಕ 122ನೇ ಶ್ರೇಣಿಯನ್ನು ಸಾಧಿಸುವ ಮೂಲಕ ಜಿಲ್ಲೆ ಹಾಗೂ ತಾಲೂಕಿನ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.
ಸಾಧಿಸುವ ಛಲವೊಂದಿದ್ದರೆ ಯಾವುದು ಅಸಾಧ್ಯವಲ್ಲ ಎಂಬ ಹಿರಿಯರ ಮಾತನ್ನು ಅಭಿಷೇಕ್ ನಾಯಕ್ ಸಾಬೀತು ಮಾಡಿದ್ದಾರೆ. ಅಂಕಗಳು ಕೇವಲ ಸಂಖ್ಯೆಗಳಲ್ಲ, ಅವು ವಿದ್ಯಾರ್ಥಿಗಳ ಜ್ಞಾನ ಮತ್ತು ಶಿಸ್ತಿನ ಪ್ರತಿಬಿಂಬ. ಈ ಸಾಧನೆ ನಿಜಕ್ಕೂ ಹೆಮ್ಮೆ ತರುವಂತಿದೆ. ಅವರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಮುಂದಿನ ಅವರ ಉನ್ನತ ಮಟ್ಟದ ಸಾಧನೆಗಳಿಗೆ ಶುಭ ಹಾರೈಸಿದ್ದೇವೆ ಎಂದರು.
ಈ ವೇಳೆ ಪುರಸಭಾ ಮಾಜಿ ಸದಸ್ಯರಾದ ಎಸ್.ಪ್ರಕಾಶ್, ಟಿ.ಕೃಷ್ಣ, ಎಸ್.ಟಿ ರಾಜು, ಶ್ರೀನಿವಾಸು, ಪುಟ್ಟರಾಮು, ನಿಂಗರಾಜು, ಜಯಲಕ್ಷ್ಮಮ್ಮ ರಮೇಶ್, ಕರವೇ ಚಂದಗಾಲು ಶಂಕರ್, ಗೋಪಾಲ್, ಪ್ರಭಾಕರ್, ಈ. ಪ್ರಕಾಶ್, ಗೋವಿಂದರಾಜು, ಮಂಜುಳಾ ಸೇರಿದಂತೆ ಇತರರು ಇದ್ದರು.ನಾಳೆ ಸಾರ್ವಜನಿಕರಿಂದ ದೂರು ಹಾಗೂ ಅಹವಾಲು ಸ್ವೀಕಾರ
ಮದ್ದೂರು: ತಾಲೂಕು ಕಚೇರಿ ಆವರಣದಲ್ಲಿ ಮೇ 13 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ಲೋಕಾಯುಕ್ತ ವಿಭಾಗದ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿ ದೂರು/ ಅಹವಾಲು ಸ್ವೀಕಾರ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೂರುಗಳನ್ನು ಸ್ವೀಕಾರ ಮಾಡಲಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಾದ ಎಚ್.ಟಿ.ಸುನೀಲ್ ಕುಮಾರ್, ಹಾಗೂ ಬ್ಯಾಟರಾಯಗೌಡ.ಬಿ.ಪಿ. ರವಿಕುಮಾರ್.ಎಂ. ಲೇಪಾಕ್ಷ ಮೂರ್ತಿ.ಆರ್.ಜಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಸರ್ಕಾರಿ ಮತ್ತು ಅರೆಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರು ಸರ್ಕಾರಿ ಕೆಲಸ ಮಾಡಿಕೊಡಲು ಅನಗತ್ಯ ವಿಳಂಬ ಮಾಡಿದ ಬಗ್ಗೆ ಹಾಗೂ ಭ್ರಷ್ಟಾಚಾರದ ಬಗ್ಗೆ ದೂರು, ಹವಾಲುಗಳೇನಾದರೂ ಇದ್ದಲ್ಲಿ ಸ್ವೀಕರಿಸಲಾಗುವುದು ಎಂದು ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.