ಶಿವಮೊಗ್ಗ: ಎಚ್.ಕಾಂತರಾಜ್ ಆಯೋಗ ವರದಿಯನ್ನು ಮುಖ್ಯಮಂತ್ರಿ ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ, ಹಿಂದುಳಿತ ಜನಜಾಗೃತಿ ವೇದಿಕೆ ಹಾಗೂ ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ಜನ ಜಾಗೃತಿ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರ 2014-15 ರಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ₹180 ಕೋಟಿ ವೆಚ್ಚ ಮಾಡಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಎಲ್ಲ ಜಾತಿಗಳ ಹಿಂದುಳಿದವರ ಸಮಗ್ರ ವರದಿ ಸಿದ್ಧಪಡಿಸಿದೆ. ಆದರೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಾಶ್ವತ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸದರಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಹಿಂದುಳಿದ ಜನಜಾಗೃತ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್ ಮಾತನಾಡಿ, ಎಚ್.ಕಾಂತರಾಜ್ ಆಯೋಗದ ವರದಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದಿದ್ದರೂ, ಸದರಿ ಸಮೀಕ್ಷೆಯಲ್ಲಿ ಜಾತಿ ವಿವರಗಳು, ಸಾಮಾಜಿ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಕಲೆ ಹಾಕಲಾಗಿದೆ. ಹಿಂದುಳಿದ ಜಾತಿ- ವರ್ಗಗಳಿಗೆ ಸಂಜೀವಿನಿ ಆಗಿರುವ ಕಾಂತರಾಜ್ ಆಯೋಗದ ವರದಿಯನ್ನು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಅವರು ಶೀಘ್ರವೇ ಸ್ವೀಕರಿಸಿ ಅನುಷ್ಠಾನಗೊಳಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್.ಕೆ. ಸಿದ್ರಾಮಣ್ಣ, ಡಿ.ಆರ್. ಉಮೇಶ್, ಪ್ರೊ. ಪ್ರಭಾಕರ್, ವಿ.ರಾಜು, ಪ್ರೊ. ಎಚ್.ರಾಚಪ್ಪ, ಪ್ರಮುಖರಾದ ಆರ್.ಟಿ. ನಟರಾಜ್, ಜನಮೇಜಿರಾವ್, ಎಚ್.ಎಂ. ರಂಗನಾಥ, ಎಸ್.ಬಿ. ಅಶೋಕ್ ಕುಮಾರ್, ಪ್ರೊ. ಡಿ.ಆರ್. ಉಮೇಶ್ ಪ್ರೊ. ಎಚ್. ಕಲ್ಲನ, ಎಸ್.ವಿ.ರಾಜಮ್ಮ ಮತ್ತಿತರರು ಇದ್ದರು.- - -
-20ಎಸ್‌ಎಂಜಿಕೆಪಿ05: