ಕ್ರೀಡೆಗಳಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ: ಮಂಜುನಾಥ್

KannadaprabhaNewsNetwork |  
Published : May 19, 2026, 01:45 AM IST
18ಕೆಎಂಎನ್ ಡಿ15 | Kannada Prabha

ಸಾರಾಂಶ

ಆರೋಗ್ಯ ಸಂಪತ್ತು ದ್ವಿ ಗುಣಗೊಳ್ಳಬೇಕಾದರೆ ಕ್ರೀಡಾ ಚಟುವಟಿಕೆಗಳಿಂದ ಮಾತ್ರ ಸಾಧ್ಯ. ಜಗತ್ತಿನ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ ಭಾರತ. ನಮ್ಮ ಯುವಕರಲ್ಲಿ ಕ್ರೀಡಾ ಆಸಕ್ತಿ ಹೆಚ್ಚಾದಾಗ ನಮ್ಮ ದೇಶದ ರಾಷ್ಟ್ರೀಯ ಶಕ್ತಿಯು ಹೆಚ್ಚುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ಶಾಲಾ ಕಾಲೇಜುಗಳಲ್ಲಿ ಪ್ರತಿ ವರ್ಷ ನಡೆಸುವ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಸೋತರೆ ಕುಗ್ಗದೆ, ಗೆದ್ದರೆ ಹಿಗ್ಗದೆ ಮುನ್ನಡೆಯಬೇಕು ಎಂದು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಚನ್ನಪಟ್ಟಣ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2025-26ಸಾಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಆರೋಗ್ಯ ಸಂಪತ್ತು ದ್ವಿ ಗುಣಗೊಳ್ಳಬೇಕಾದರೆ ಕ್ರೀಡಾ ಚಟುವಟಿಕೆಗಳಿಂದ ಮಾತ್ರ ಸಾಧ್ಯ. ಜಗತ್ತಿನ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶ ಭಾರತ. ನಮ್ಮ ಯುವಕರಲ್ಲಿ ಕ್ರೀಡಾ ಆಸಕ್ತಿ ಹೆಚ್ಚಾದಾಗ ನಮ್ಮ ದೇಶದ ರಾಷ್ಟ್ರೀಯ ಶಕ್ತಿಯು ಹೆಚ್ಚುತ್ತದೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ಡಾ.ಟಿ.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ಬೋಧನೆ ಮಾಡಿ, ಇಂದು ಜಗತ್ತಿನಲ್ಲಿ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಆದ್ಯತೆ ನೀಡಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಿ ಕಾಲೇಜು, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದಲ್ಲಿ ಗೌರವ ತರುವಂತರಾಗಬೇಕು ಎಂದರು.

ಇಂದು ನಡೆದ 100 ಮೀಟರ್ 400 ಮೀಟರ್ ಓಟದ ಸ್ಪರ್ಧೆ ಹಾಗೂ ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದರು.

ಈ ವೇಳೆ ಪ್ರೊ.ಸುಧಾಬಿದರಿ, ರವಿ ಬಿ.ಸಿ, ಅತಿಥಿ ಉಪನ್ಯಾಸಕರಾದ ಡಾ.ಸೀಮಾ ಕೌಸರ್, ಡಾ.ಶಂಕರೇಗೌಡ, ಗುರುಪ್ರಸಾದ್, ತಾರಾ ಜಯಲಕ್ಷ್ಮಿ, ಕುಮಾರಸ್ವಾಮಿ, ಮೂರ್ತಿ, ಮಧುಕುಮಾರ್, ಪ್ರಶಾಂತ್, ರಮ್ಯಾ ಭವ್ಯ, ಚೇತನಾ ಶ್ರೀ ಸೇರಿದಂತೆ ಇತರರು ಇದ್ದರು.ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಅಂಗವಾಗಿ ಪಟ್ಟಣದ ಶ್ರೀಚಾಮರಾಜೇಂದ್ರ ವಸ್ತು ಸಂಗ್ರಹಾಲಯ ಆವರಣದಲ್ಲಿ ವಿವಿಧ ಸಂಘಟನೆಯಿಂದ ಆಚರಿಸಲಾಯಿತು.

ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಹಾಗೂ ಮೈಸೂರು ‘ಐಕ್ಯ’ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್, ಶ್ರೀ ರಂಗನಾಯಕಿ ಸ್ತ್ರೀ ಸಮಾಜ, ಪ್ರಜ್ಞಾವಂತರ ವೇದಿಕೆ ಆಶ್ರಯದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಜೊತೆಗೂಡಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ನಂತರ ವಿಭಜಿತ ಜಗತ್ತನ್ನು ಒಂದುಗೂಡಿಸುವ ವಸ್ತು ಸಂಗ್ರಹಾಲಯ ವಿಷಯ ಕುರಿತು ಅನುಪಮಾ ಹಾಗೂ ವಕೀಲ ವೆಂಕಟೇಶ್ ಮಾತನಾಡಿದರು.ಈ ವೇಳೆ ಅಲಯನ್ಸ್ ಎನ್.ಸರಸ್ವತಿ, ಮೈಸೂರು ‘ಐಕ್ಯ’ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಅಧ್ಯಕ್ಷೆ ಆಶಾಲತ ಪುಟ್ಟೇಗೌಡ, ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆ ವಕೀಲ ವೆಂಕಟೇಶ್, ಚಿಕ್ಕತಮ್ಮೆಗೌಡ, ಜಯಶಂಕರ್, ಶ್ರೀ ರಂಗನಾಯಕಿ ಸ್ತ್ರೀ ಸಮಾಜ ಅಧ್ಯಕ್ಷೆ ವಿಶಾಲಾಕ್ಷಿ, ಮಾಜಿ ಪುರಸಭಾ ಸದಸ್ಯೆ ನಳಿನಿ, ಶೋಭಾ, ಎಚ್.ಜೆ. ಶೀಲಾ, ಸುಮಾ, ಸವಿತಾ, ಆಲಯನ್ ಶಿವು, ಶಿವಕುಮಾರ್ ಚಂದಗಾಲ, ದರಸಗುಪ್ಪೆ ಸುರೇಶ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂತ್ರಜ್ಞಾನ ಸರಿಯಾಗಿ ಬಳಸಿ ಕ್ರಿಯಾಶೀಲತೆ ಮೆರೆಯಿರಿ
.ಗ್ರಾಮ ಒನ್ ಸುಲಿಗೆ ಅಡ್ಡೆ ಮೇಲೆ ಅಧಿಕಾರಿಗಳ ದಾಳಿ