ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಹಮ್ಮಿಕೊಂಡಿರುವ ಸಿಎಸ್ಪಿ ಪಕ್ ಸೀಜನ್-2 ಟಿನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ಮಾತನಾಡಿ, ಇಂದು ಬಹುತೇಕ ಯುವಕರು ಹಲವು ದುಶ್ಚಟಗಳಿಗೆ ಒಳಗಾಗಿ ಭವಿಷ್ಯವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ಯುವ ಸಮುದಾಯ ಮದ್ಯಪಾನ, ಡ್ರಗ್ಸ್, ಸಿಗರೇಟ್, ಬೆಟ್ಟಿಂಗ್, ಗುಟ್ಕ್‌ದಂತಹ ಹಲವು ದುಶ್ಚಟಗಳಿಗೆ ಒಳಗಾಗಿ ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹಲವು ಕುಟುಂಬಗಳು ಬೀದಿಪಾಲಾಗುತ್ತಿವೆ. ಅದರ ಬದಲು ಯುವ ಸಮುದಾಯ ಕ್ರೀಡೆಯತ್ತ ಮುಖ ಮಾಡಿದರೆ ಆರೋಗ್ಯದ ಜತೆಗೆ ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.ಬನ್ನಂಗಾಡಿ ಗ್ರಾಮದ ಯುವಕರು ಸಿಎಸ್‌ಪಿ ಕಪ್ ಕ್ರಿಕೆಟ್ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಯುವ ಸಮುದಾಯ ಗ್ರಾಮಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸಿ ಪ್ರೋತ್ಸಹಿಸುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ಸಿ.ಅಶೋಕ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಮಾಜಿ ಸದಸ್ಯ ಅಲ್ಪಳ್ಳಿ ಗೋವಿಂದಯ್ಯ, ಹೂವಿನ ವ್ಯಾಪಾರಿ ಬಿ.ಆರ್.ಪ್ರಸನ್ನಕುಮಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಶ್ರೀನಿವಾಸ್, ಬಿ.ಎನ್. ನಂದೀಶ್, ಮಹೇಂದ್ರ, ಬಿ.ಎಚ್.ಪ್ರಸನ್ನ, ಯೋಗೇಶ್, ಬಿ.ಸಿ.ವಾಸು ಆಯೋಜಕರಾದ ಬಿ.ಪಿ.ಸಂತೋಷ್, ಆಕಾಶ್, ರಕ್ಷಿತ್, ಸಚ್ಚಿನ್, ಗೌತಮ್, ಪವನ್ ಸೇರಿದಂತೆ ಅನೇಕ ಯುವಕರು ಇದ್ದರು.