ರೋಣ: ತಾಲೂಕಿನ ಇಟಗಿ ಗ್ರಾಮದ ಕ್ರಾಸ್(ಕಮಾನ್) ಬಳಿ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಸ್ಥಳದಲ್ಲಿಯೇ ಬೈಕ್ ಸವಾರರಿಬ್ಬರು ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ.
ರೋಣ: ಸ್ಲಂ ಕಾಯ್ದೆ 1973ರ ಪ್ರಕಾರ ಘೋಷಿತ ಹಾಗೂ ಅಘೋಷಿತ ಕೊಳಚೆ ಪ್ರದೇಶ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿ ಭೂಮಿ ಹಕ್ಕು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸ್ಲಂ ಮುಖಂಡರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಘೋಷಿತ ಹಾಗೂ 80ಕ್ಕೂ ಅಧಿಕ ಗುರುತಿಸಲಾದ ಸ್ಲಂಗಳಿದ್ದು, ಅನುದಾನ ದುರ್ಬಳಕೆಯಿಂದಾಗಿ ಜನರಿಗೆ ಕನಿಷ್ಠ ಮೂಲ ಸೌಕರ್ಯಗಳೂ ಸಿಗುತ್ತಿಲ್ಲ. ಕೊಳಚೆ ಪ್ರದೇಶಗಳ ಹಕ್ಕಿಗಾಗಿ ಜಿಲ್ಲಾದ್ಯಂತ ಹೋರಾಟ ರೂಪಿಸಲಾಗುವುದು ಎಂದರು.ಇದೇ ವೇಳೆ ರೋಣ ತಾಲೂಕು ಘಟಕವನ್ನು ರಚಿಸಲಾಯಿತು. ವಕೀಲ ಎಂ.ಬಿ. ನದಾಫ್, ಜಿಲ್ಲಾ ಮಹಿಳಾ ಸಂಚಾಲಕಿ ಪರವೀನ್‌ಬಾನು ಹವಾಲ್ದಾರ್, ಮುಖಂಡರಾದ ಮೌಲಾಸಾಬ ಗಚ್ಚಿ, ಬಸವರಾಜ ಕುರಿ, ರಹಿಮಾನಬಿ ಕೊಲಕಾರ, ಹುಸೇನಬಿ ಸರಖವಾಸ, ಭಾಗ್ಯ ಗೊಲ್ಲರ, ಶಂಕ್ರಪ್ಪ ಮುಂಡರಗಿ ಉಪಸ್ಥಿತರಿದ್ದರು.