ಸೋಮವಾರ ಬೆಳಗ್ಗೆ ಗೋಪಾಲಚಾರ್ಯ ಡಬೇರ ಹಾಗೂ ಸುಧೀಂದ್ರಚಾರ್ಯ ಪೌರೋಹಿತ್ಯದಲ್ಲಿ ರಾಯರ ವೃಂದಾವನದಲ್ಲಿ ಮಹಾ ಪಂಚಾಮೃತಾಭಿಷೇಕ ವಿವಿಧ ಪೂಜಾ ವಿಧಾನಗಳು ನೆರವೇರಿಸಲಾಯಿತು.
ಗಜೇಂದ್ರಗಡ: ಪಟ್ಟಣದ ಬ್ರಾಹ್ಮಣ ಸಮಾಜ ಸೇವಾ ಸಮಿತಿ ವತಿಯಿಂದ ಸ್ಥಳೀಯ ರುಕ್ಮೀಣಿ ಪಾಂಡುರಂಗ ದೇವಸ್ಥಾನದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ ಸಕಲ ಸದ್ಭಕ್ತರ ಮಧ್ಯೆ ಶ್ರದ್ಧಾಭಕ್ತಿಯಿಂದ ವೈಭವದಿಂದ ನಡೆಯಿತು.ಸೋಮವಾರ ಬೆಳಗ್ಗೆ ಗೋಪಾಲಚಾರ್ಯ ಡಬೇರ ಹಾಗೂ ಸುಧೀಂದ್ರಚಾರ್ಯ ಪೌರೋಹಿತ್ಯದಲ್ಲಿ ರಾಯರ ವೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ ವಿವಿಧ ಪೂಜಾ ವಿಧಾನಗಳು ನೆರವೇರಿಸಲಾಯಿತು. ಸದ್ಭಕ್ತರೊಂದಿಗೆ ರಾಯರ ಅಷ್ಟೋತ್ತರ ಪಠಿಸಿದರು. ನಂತರ ವೃಂದಾವನಕ್ಕೆ ನಾನಾ ಪುಷ್ಪ ಹಾಗೂ ತುಳಸಿಯೊಂದಿಗೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ದಾಸರ ಗೀತೆಯೊಂದಿಗೆ ಹಾಡಿನ ಮೂಲಕ ಗುರುರಾಯರ ನಾಮಸ್ಮರಣೆ ಮಾಡಿದರು. ಬಳಿಕ ಮಧ್ಯಾಹ್ನ ನೈವೇದ್ಯ, ಮಹಾಮಂಗಳಾರತಿಯೊಂದಿಗೆ ತೀರ್ಥ, ಮಹಾಪ್ರಸಾದ ಜರುಗಿತು.ಈ ವೇಳೆ ಸಮಾಜದ ಅಧ್ಯಕ್ಷ ರಾಮಚಂದ್ರ ಗಾಡಗೋಳಿ ಮಾತನಾಡಿ, ದಾಸ ಸಾಹಿತ್ಯ ಭಜನೆ ಭಾರತದ ಒಂದು
ವೈವಿಧ್ಯತೆ, ಕರ್ನಾಟಕ ಎಲ್ಲ ಗ್ರಾಮದವರೆಗೂ ಭಜನೆಯ ಪ್ರಭಾವ ಇದೆ. ಈ ಹಿನ್ನೆಲೆ ಭಜನೆಯ ನಾದ ಮಾಧುರ್ಯ ಕೇಳಿದರೆ ಆನಂದ ಕಿವಿಗಳಿಗೆ ಹಬ್ಬ. ಭಜನೆ ಕೇಳುವುದರಿಂದ, ಹಾಡುವುದರಿಂದ ಮನಸ್ಸಿಗೆ ಆನಂದ ಸಿಗುತ್ತದೆ. ನಮ್ಮ ಜೀವನದಲ್ಲಿ ಎಲ್ಲ ರೀತಿಯ ಜಂಜಾಟಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದರು.ಈ ವೇಳೆ ಕೃಷ್ಣಾಚಾರ್ಯ ಇಟಗಿ, ಕಲ್ಲಿನಾಥಭಟ್ಟ ಜೀರೆ, ರಘುನಾಥ ತಾಸಿನ, ಸುರೇಶ ಪೂಜಾರ, ಶ್ರೀನಿವಾಸ ತೈಲಂಗ, ಕೆ. ಸತ್ಯನಾರಾಯಣಭಟ್ಟ, ವಸಂತ ಕುಲಕರ್ಣಿ, ವಿನಾಯಕ ಜೀರೆ, ಎಸ್.ಬಿ. ಕುಲಕರ್ಣಿ, ರಾಜಾನಾರಾಯಣ ಪೂಜಾರ, ರಾಮಚಂದ್ರ ರಾಜಪುರೋಹಿತ, ಶಶಿಧರ ಕುಲಕರ್ಣಿ, ಸುಧಾಕರ ಕುಲಕರ್ಣಿ, ಸತೀಶ ಕುಲಕರ್ಣಿ, ಹನುಮಂತರಾವ ಕುಲಕರ್ಣಿ, ಬದರಿ ಆಚಾರ್ಯ ಜೋಶಿ, ರಾಘವೇಂದ್ರ, ಶಿಂಗಾರಪುರೆ, ವಿನಾಯಕ ರಾಜಪುರೋಹಿತ, ಪವೀಣ ದೇಸಾಯಿ ಸೇರಿದಂತೆ ಸಮಾಜದ ಮಹಿಳೆಯರು ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಿ ತೀರ್ಥ, ಪ್ರಸಾದ ಸ್ವೀಕರಿಸಿ ರಾಯರ ಅನುಗ್ರಹಕ್ಕೆ ಪಾತ್ರರಾದರು.ವಿವಿಧ ಕಾರ್ಯಕ್ರಮ: ಸ್ಥಳೀಯ ಗಂಜಿಪೇಟೆಯ ಪಲಿಮಾರು ಮಠ ಉಡುಪಿಯ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರು ಜಗನ್ನಾಥ ದಾಸರ ಸೇವಾ ಸಮಿತಿ ಹಾಗೂ ಗುರು ರಾಘವೇಂದ್ರ ಪಾದಯಾತ್ರಾ ಸೇವಾ ಸಮಿತಿ ಮತ್ತು ಸದ್ಭಕ್ತ ಮಂಡಳಿ ವತಿಯಿಂದ ಗುರುರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಪ್ರಯುಕ್ತ ವೆಂಕಟೇಶಾಚಾರ್ಯ ಜೋಶಿ ಅವರಿಂದ ಪಂಚಾಮೃತಾಭಿಷೇಕ ವಿವಿಧ ಪೂಜಾ ವಿಧಾನಗಳು ನೆರವೇರಿಸಲಾಯಿತು.
ಸಕಲ ಸದ್ಭಕ್ತರು ರಾಯರ ಅಷ್ಟೋತ್ತರ ಪಠಿಸುವ ಮೂಲಕ ವಿಶೇಷ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಈ ವೇಳೆ ಶ್ರೀನಿವಾಸ ಬಾಕಳೆ, ವೆಂಕಟೇಶ ಶೆಟ್ಟರ, ಭೀಷ್ಮಸಾ ಬಾಕಳೆ, ಅಂದಪ್ಪ ಸಂಕನೂರ, ರಾಜು ಹೊರಪೇಟಿ, ವಿಶ್ವನಾಥ ಕುಷ್ಟಗಿ, ಈರಣ್ಣ ಉರಕೊಂಡ, ಶಂಕ್ರಪ್ಪ ಉರಕೊಂಡ, ಯಮನೂರಪ್ಪ ಭಂಜತ್ರಿ, ಶ್ರೀಧರ ರಾಯಬಾಗಿ, ಗಣೇಶ ದಿವಾಣದ, ಪ್ರಕಾಶ ಪವಾರ, ಸಂಗಪ್ಪ ಕರಿಕಿಕಟ್ಟಿ ಹಾಗೂ ಗುರುಜಗನ್ನಾಥ ಭಜನಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.