ಸಮಗ್ರ ಪರಿಷ್ಕರಣೆಯಿಂದ ನಿಖರ ಮತದಾರರ ಸಂಖ್ಯೆ ಲಭ್ಯ

KannadaprabhaNewsNetwork |  
Published : May 02, 2026, 03:00 AM IST
ಬಾದಾಮಿ | Kannada Prabha

ಸಾರಾಂಶ

ಮತದಾರರ ಪಟ್ಟಿ ಪರಿಷ್ಕರಣೆಯಿಂದ ತಮ್ಮ ಮತಗಟ್ಟೆಯಲ್ಲಿರುವ ಪಟ್ಟಿಯು ನಿಜವಾದ ಅರ್ಹ ನಾಗರಿಕರನ್ನು ಪ್ರತಿಬಿಂಬಿಸುವಂತೆ ಹಾಗೂ ಅನರ್ಹ, ಮೃತ ಅಥವಾ ನಕಲಿ ಹೆಸರುಗಳನ್ನು ತೆಗೆದುಹಾಕುವಂತೆ ಖಚಿತಪಡಿಸುತ್ತದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಮತದಾರರ ಪಟ್ಟಿ ಪರಿಷ್ಕರಣೆಯಿಂದ ತಮ್ಮ ಮತಗಟ್ಟೆಯಲ್ಲಿರುವ ಪಟ್ಟಿಯು ನಿಜವಾದ ಅರ್ಹ ನಾಗರಿಕರನ್ನು ಪ್ರತಿಬಿಂಬಿಸುವಂತೆ ಹಾಗೂ ಅನರ್ಹ, ಮೃತ ಅಥವಾ ನಕಲಿ ಹೆಸರುಗಳನ್ನು ತೆಗೆದುಹಾಕುವಂತೆ ಖಚಿತಪಡಿಸುತ್ತದೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಪಟ್ಟಣದ ವೀರಪುಲಿಕೇಶಿ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಬಿ.ಎಲ್.ಎ-2 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎಸ್.ಐ.ಆರ್.ಮಾಡುವುದರಿಂದ ಪಟ್ಟಿ ಶುದ್ಧೀಕರಣ, ಅರ್ಹ ನಾಗರಿಕರನ್ನು ಪಟ್ಟಿಯಲ್ಲಿ ಒಳಗೊಂಡಿರುವುದು, ವಂಚನೆ ತಡೆಯುವುದು, ವಿಶ್ವಾಸಾರ್ಹತೆ ಬಲಪಡಿಸುವುದು, ಜನಸಂಖ್ಯೆ ಬದಲಾವಣೆಯನ್ನು ಪ್ರತಿಬಿಂಬಿಸುವುದು. 2002ರಲ್ಲಿ ನಮ್ಮ ರಾಜ್ಯದಲ್ಲಿ ಎಸ್.ಐ.ಆರ್. ನಡೆದಿದ್ದು, ಈಗ ಸದ್ಯದಲ್ಲಿಯೇ ಪರಿಷ್ಕರಣೆ ನಡೆಯಲಿದೆ. ಚುನಾವಣೆ ಅಧಿಕಾರಿಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಬೂ ತಮಟ್ಟದ ಏಜೆಂಟರು ಕಾಳಜಿ ವಹಿಸಿ ಅರ್ಹ ಮತದಾರರು ಪಟ್ಟಿಯಿಂದ ಹೊರಹೋಗದಂತೆ ನಿಗಾ ವಹಿಸಬೇಕು ಎಂದರು.ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ, ನ್ಯಾಯವಾದಿ ಪ್ರದೀಪಕುಮಾರ ಎಸ್.ಬಿ ಅವರು ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕುರಿತು ಸುವಿವರವಾಗಿ ಕಾರ್ಯಾಗಾರದಲ್ಲಿ ಏಜೆಂಟರಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾಲೂಕು ಅಧ್ಯಕ್ಷ ಹುಚ್ಚೇಶ ಹದ್ದನ್ನವರ, ಬಸವರಾಜ ಕುಂಬಾರ, ಹನಮಂತ ಸಂಗಟಿ, ಶಿವು ಗೊರವರ, ಬಾದಾಮಿ ನಗರ ಘಟಕದ ಅಧ್ಯಕ್ಷ ಪ್ರಕಾಶ ಕೋಟಿ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ಹಿರೇಹಾರ, ಪ್ರಕಾಶ ಗಾಣಿಗೇರ, ಬಾಲು ಹುನಗುಂಡಿ, ಕೆರೂರ ನಗರ ಘಟಕದ ಅಧ್ಯಕ್ಷ ಟೊಪೇಶ ಬಾದಾಮಿ, ಗುಳೇದಗುಡ್ಡ ನಗರ ಘಟಕದ ಅಧ್ಯಕ್ಷ ರಾಘು ಚಳಗೇರಿ ಉಪಸ್ಥಿತರಿದ್ದರು. ಈರಣ್ಣ ಶೇಖಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಾಗಾರದಲ್ಲಿ ಬಾದಾಮಿ ಮತಕ್ಷೇತ್ರದ ವ್ಯಾಪ್ತಿಯ ಮತಗಟ್ಟೆ ಏಜೆಂಟರು ಭಾಗವಹಿಸಿದ್ದರು.ನಮ್ಮ ಜೆಡಿಎಸ್ ಪಕ್ಷ ಎನ್.ಡಿ.ಎ ಭಾಗವಾಗಿರುವುದರಿಂದ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆ. ನೋಡೋಣ. ಬೂತಮಟ್ಟದ ಏಜೆಂಟರು ಶ್ರಮಪಟ್ಟಷ್ಟು ಮತಗಟ್ಟೆವಾರು ಹೆಚ್ಚಿನ ಮತಗಳು ಪಕ್ಷಕ್ಕೆ ಬರಲು ಸಾಧ್ಯ. 2028ರ ಚುನಾವಣೆ ಗುರಿಯಾಗಿಟ್ಟುಕೊಂಡು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ.

-ಹನಮಂತ ಮಾವಿನಮರದ, ಜೆಡಿಎಸ್ ಜಿಲ್ಲಾಧ್ಯಕ್ಷ, ಬಾದಾಮಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರ ಜೆಡಿಎಸ್ ಪಕ್ಷದ ಪಟ್ಟಿಯಲ್ಲಿ ಎ ಸ್ಥಾನದಲ್ಲಿದೆ. ನೀವೆಲ್ಲರೂ ಚೆನ್ನಾಗಿ ಕೆಲಸ ಮಾಡಿ ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಸಂಘಟನಾ ಚತುರ ಹನಮಂತ ಮಾವಿನಮರದ ಅವರನ್ನು ಶಾಸಕರಾಗಿ ಆಯ್ಕೆ ಮಾಡಲು ಶ್ರಮಿಸಿರಿ.

-ಪ್ರದೀಪಕುಮಾರ ಎಸ್.ಬಿ, ಜೆಡಿಎಸ್ ಪಕ್ಷದ ವಕ್ತಾರರು ಬೆಂಗಳೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿಯಲ್ಲಿ ಹಸಿವಿದ್ದಾಗ ಒಕ್ಕಲುತನ ಪ್ರಗತಿ ಸಾಧ್ಯ
ಸಣ್ಣ ನೀರಾವರಿ ಯೋಜನೆ ದೇಶಕ್ಕೆ ಮಾದರಿ