ಕರ ವಸೂಲಿಯಲ್ಲಿ ಗರಿಷ್ಠ ಗುರಿ ಸಾಧಿಸಿ ತೋರಿಸಿ

KannadaprabhaNewsNetwork | Published : Nov 30, 2024 12:46 AM

ಸಾರಾಂಶ

ಎನ್‌ಟಿಪಿಸಿ ತೆರಿಗೆ ಹಾಗೂ ಹಾಗೂ ಕರ ವಸೂಲಾತಿ ಕುರಿತು ಅಧಿಕಾರಿಗಳೊಂದಿಗೆ ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ್ ಅಜೂರ ಸಭೆ ನಡೆಸಿದರು.

ಕೊಲ್ಹಾರ: ತಾಲೂಕಿನ ತಳೇವಾಡ ಹಾಗೂ ಕೂಡಗಿ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ್ ಅಜೂರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅ್ಲದೇ, ಬಳಿಕ ಗ್ರಾಮ ಪಂಚಾಯತಿಯಲ್ಲಿ ಎನ್‌ಟಿಪಿಸಿ ತೆರಿಗೆ ಹಾಗೂ ಹಾಗೂ ಕರ ವಸೂಲಾತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಎನ್‌ಟಿಪಿಸಿ ಅನುದಾನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ, ಡಿಜಿಟಲ್ ಪರಿಕರಗಳು ಹಾಗೂ ಪುಸ್ತಕ ಖರೀದಿಸುವುದು, ಭಿಕ್ಷುಕರ ಉಪಕರಣಗಳ ಭರಣ, ಹೈಟೆಕ್ ಶೌಚಾಲಯ ನಿರ್ಮಾಣ, ಸಭಾಭವನ ನಿರ್ಮಾಣ, ಅಂಗನವಾಡಿ ಕಟ್ಟಡ ನಿರ್ಮಾಣ, ಆಡಳಿತಾತ್ಮಕ ವೆಚ್ಚ ಪರಿಕರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ, ನೈರ್ಮಲ್ಯ , ಬೀದಿ ದೀಪಗಳು, ಶಿಕ್ಷಣ, ಕ್ರೀಡಾ ಸೌಲಭ್ಯಗಳು, ಅರಣ್ಯೀಕರಣ, ನಾಗರಿಕ ಸೇವೆಗಳ ವಿತರಣಾ ವ್ಯವಸ್ಥೆ ಸುಧಾರಣೆ, ಶಾಶ್ವತ ಆಸ್ತಿ ನಿರ್ಮಾಣ ಇವುಗಳ ಕುರಿತು ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಮದ್ದಿನ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಆನಂದ ಕೊಟ್ಯಾಳ ಅವರಿಂದ ಮಾಹಿತಿ ಪಡೆದರು.

ಅಲ್ಲದೇ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ ವಸೂಲಾತಿಯಲ್ಲಿ ಪ್ರಗತಿ ಸಾಧಿಸಲು ಮತ್ತು ತೆರಿಗೆ ಸಂಗ್ರಹ ಹೆಚ್ಚಿಸಲು ಅಭಿಯಾನ ಹಮ್ಮಿಕೊಳ್ಳಲು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಸಹಾಯಕ ನಿರ್ದೇಶಕರಿಗೆ ಮತ್ತು ಪಿಡಿಒ ತಂಡವನ್ನು ರಚಿಸಬೇಕು. ಜಿಲ್ಲಾದ್ಯಂತ ಕರವಸೂಲಿ ಅಭಿಯಾನ ಕೈಗೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದರು. ಕರ ವಸೂಲಿ ಪ್ರಗತಿ ಪರಿಶೀಲಿಸಿದ ಅವರು, ಗರಿಷ್ಟ ಪ್ರಮಾಣದ ಪ್ರಗತಿ ಸಾಧಿಸುವಂತೆ ಸೂಚನೆ ನೀಡಿದರು.

ಇನ್ನು, ಅತಿ ಹೆಚ್ಚು ಕರ ವಸೂಲು ಮಾಡಿದ ಸಾಧನೆ ಮಾಡಿದ ಮೊದಲ ಮೂರು ಗ್ರಾಮ ಪಂಚಾಯಿತಿಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರ. ಅಲ್ಲದೇ, ಇದೇ ವೇಳೆ ವಿವಿಧ ಯೋಜನೆಗಳ ಕಾಮಗಾರಿಗಳು ಹಾಗೂ 2025-26ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆಯ ದಾಖಲಾತಿ ಹಾಗೂ ಕಡತಗಳನ್ನು ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ತಾಪಂ ಇಒ ಸುನಿಲ್ ಮದ್ದೀನ, ಕೂಡಗಿ ಗ್ರಾಪಂ ಪಿಡಿಒ ಆನಂದ್ ಕೊಟ್ಯಾಳ ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿ ಇದ್ದರು.

Share this article