ಆತ್ಮಸಾಕ್ಷಿ ಅನುಗುಣ ಕಾರ್ಯನಿರ್ವಹಿಸಿ: ಕೋರಿಶೆಟ್ಟಿ

KannadaprabhaNewsNetwork |  
Published : Oct 31, 2024, 12:58 AM IST
(ಪೊಟೋ 30ಬಿಕೆಟಿ4, ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ) | Kannada Prabha

ಸಾರಾಂಶ

ವಿದೇಶಗಳ ಮೇಲೆ ಅತಿಯಾದ ಅವಲಂಬನೆಯೂ ಭ್ರಷ್ಟಾಚಾರದ ಮೂಲ ಕಾರಣವಾಗಿದೆ. ಸಮಾಜಕ್ಕೆ ಅಂಟಿದ ಭ್ರಷ್ಟಾಚಾರವೆಂಬ ಪಿಡುಗು ನಿವಾರಿಸಬೇಕಾಗಿದ್ದರೆ ನಿಸ್ವಾರ್ಥ ಜೀವನ ನಮ್ಮದಾಗಬೇಕು

ಬಾಗಲಕೋಟೆ: ಪ್ರತಿಯೊಬ್ಬರು ಪಾರದರ್ಶಕವಾಗಿ ಮತ್ತು ಆತ್ಮಸಾಕ್ಷಿಯಿಂದ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯ ನಿರ್ವಹಿಸಬೇಕು ಎಂದು ವಿದ್ಯಾಗಿರಿ ಬಸವೇಶ್ವರ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಬಿ.ಕೋರಿಶೆಟ್ಟಿ ಹೇಳಿದರು.

ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಅಡಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದೇಶಗಳ ಮೇಲೆ ಅತಿಯಾದ ಅವಲಂಬನೆಯೂ ಭ್ರಷ್ಟಾಚಾರದ ಮೂಲ ಕಾರಣವಾಗಿದೆ. ಸಮಾಜಕ್ಕೆ ಅಂಟಿದ ಭ್ರಷ್ಟಾಚಾರವೆಂಬ ಪಿಡುಗು ನಿವಾರಿಸಬೇಕಾಗಿದ್ದರೆ ನಿಸ್ವಾರ್ಥ ಜೀವನ ನಮ್ಮದಾಗಬೇಕು. ಭ್ರಷ್ಟಾಚಾರವು ನಿರಂತರ ಸೇವೆ ಪ್ರಾಮಾಣಿಕತೆ ತಿಂದು ಹಾಕುತ್ತದೆ. ಸಮಾಜ ಕಲುಷಿತಗೊಂಡರೆ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಶಿವಶಕ್ತಿ ಘಂಟಿಮಠರವರು ಪ್ರತಿಜ್ಞಾವಿಧಿ ಬೋಧಿಸಿದರು. ವೇದಿಕೆಯಲ್ಲಿ ಕುಮಾರ ಸಂತೋಷ ಮೇಟಿ ಚಂದ್ರಕಾಂತ ಚೌಕಿಮಠ ಪ್ರಭುಸ್ವಾಮಿ ಗದ್ದಗಿಮಠ ಶ್ರೀಶೈಲ ಹೆರಕಲ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ