ಶ್ರೀ ರೇವಣಸಿದ್ದೇಶ್ವರ ಪ್ರಾ.ಕೃ.ಪ.ಸ. ಸಂಘಕ್ಕೆ ನೂತನ ಅಧ್ಯಕ್ಷರಾಗಿ ಟಿ.ಎಸ್.ಪ್ರಕಾಶ್ ವರ್ಮ ಆಯ್ಕೆ
ಶ್ರೀ ರೇವಣಸಿದ್ದೇಶ್ವರ ಸಂಘದಲ್ಲಿ ಹೊಸ ಯೋಜನೆಗಳನ್ನು ತರುವ ಮೂಲಕ ಜನಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಕರೆನೀಡಿದರು.
ಸೋಮವಾರ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಎಸ್.ಪ್ರಕಾಶ್ ವರ್ಮ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 105 ವರ್ಷಗಳ ಇತಿಹಾಸ, 2900 ಜನ ಸದಸ್ಯರನ್ನು ಹೊಂದಿದೆ. ಪ್ರಗತಿಗೆ ಪೂರಕವಾಗಿ, ರೈತರ ಪರವಾಗಿರುವ ಸಂಸ್ಥೆಯಿಂದ ವಾಹನ ಸಾಲ, ಅಡಕೆ ಸಾಲ ಇತ್ಯಾದಿ ವಿವಿಧ ಬಗೆ ಸಾಲ ನೀಡಿದೆ. ಹೊಸ ಯೋಜನೆಗಳನ್ನು ತರಬೇಕು. ಈ ನಿಟ್ಟಿನಲ್ಲಿ ಜನರ ಪರವಾಗಿ ಕಾರ್ಯ ಮಾಡಿರಿ ಎಂದು ಸಲಹೆ ನೀಡಿದರು.ಸಾಹಿತಿ ಮೋಹನ್ ಕುಮಾರ್ ಮಾತನಾಡಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಭ್ರಷ್ಠಾಚಾರ ರಹಿತವಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದೆ. ಸಾರ್ವಜನಿಕವಾಗಿ ಕಾಳಜಿ ಹೊಂದಿದೆ ಎಂದ ಅವರು ನೂತನ ಅದ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಅವರು ಇನ್ನೂ ಉನ್ನತ ಸ್ಥಾನ ಹೊಂದಲಿ ಎಂದು ಆಶಿಸಿದರು.ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ವು ರೈತರಿಗೆ ಉತ್ತಮವಾದ ಸೇವೆ ಸಲ್ಲಿಸಿದೆ, ಸಂಘಕ್ಕೆ ಇತಿಹಾಸವಿದೆ,
ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ ದೇಶದಲ್ಲಿ 9 ಲಕ್ಷ ಪತ್ತಿನ ಸಹಕಾರ ಸಂಘಗಳು, ಇಡೀ ದೇಶದಲ್ಲಿ 7ವರೆ ಲಕ್ಷ ಹಳ್ಳಿಗಳಲ್ಲಿ 6,44,000 ಗ್ರಾಮಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು ಸಹಕಾರಿ ಕ್ಷೇತ್ರ ಬಹಳ ದೊಡ್ಡ ಕ್ಷೇತ್ರವಾಗಿದೆ. ಸಹಕಾರಿ ಸಂಘಗಳು ಜನರ ಜೀವನದ ಗುಣಮಟ್ಟ ಕಾಪಾಡಬೇಕು ಶ್ರೀ ರೇವಣಸಿದ್ದೇಶ್ವರ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕಿನ ರೈತರ ವಿಶ್ವಾಸಾರ್ಹ ಸಹಕಾರ ಸಂಘವಾಗಿದ್ದು ಷೇರುದಾರರ ಹಿತ ಕಾಪಾಡುತ್ತಿದೆ ಎಂದು ತಿಳಿಸಿದರು.
ಪುರಸಭಾಧ್ಯಕ್ಷ ವಸಂತಕುಮಾರ್ (ಕವಾಲಿ) ಸಂಘದ ಉಪಾಧ್ಯಕ್ಷ ಪರುಶುರಾಮ್, ನಿರ್ದೇಶಕರಾದ ಟಿ.ವಿ.ಗಿರಿರಾಜ್, ಸುರೇಶ್, ರಾಮಚಂದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್, ಬೈಟು ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮತ್ತಿತರರು ಮಾತನಾಡಿದರು.ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ಕಾರ್ಯದರ್ಶಿ ಮೋಹನ್ ರಾಜ್, ಸಂಘದ ಸಿಬ್ಬಂದಿ ಭಾಗವಹಿಸಿದ್ದರು. 26ಕೆಟಿಆರ್.ಕೆ.04ಃ