ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ಆಗಿರುವ ಬಡಾವಣೆಗಳಲ್ಲಿ ನಗರಸಭೆಗೆ ಮೀಸಲಿರಿಸಲಾಗಿದ್ದ ಸಿಎ ನಿವೇಶನ ಮತ್ತು ಪಾರ್ಕ್‌ಗಳು ಮಾಯವಾಗುತ್ತಿವೆ. ಸಿಎ ನಿವೇಶನ ಬಳಿ ನಗರಸಭೆ ವತಿಯಿಂದ ಸೂಚನ ಫಲಕ ಹಾಕಿಸಬೇಕು. ಇವುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ, ವಿ.ಎಸ್.ರವಿಕುಮಾರ್, ಲಕ್ಷಾಂತರ ರುಪಾಯಿ ಬೆಲೆ ಬಾಳುವ ನಗರಸಭೆಯ ಸ್ವತ್ತುಗಳ ರಕ್ಷಣೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಿಎ ನಿವೇಶನಗಳು ಖಾಸಗಿಯವರ ಪಾಲಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ದಾಖಲೆಗಳನ್ನೇ ನಿರ್ವಹಿಸಿಲ್ಲ. ಬಡಾವಣೆಯಲ್ಲಿ ಸೌಲಭ್ಯಗಳು ಇಲ್ಲದೇ ಇದ್ದರು ಸಹ ಇ-ಖಾತೆಗಳನ್ನು ಮಾಡಿಕೊಡಲಾಗುತ್ತಿದೆ ಎಂದು ದೂರಿದರು.10 ಅನುಮೋದಿತ ಬಡಾವಣೆಗಳು:
ನಗರಸಭೆ ವ್ಯಾಪ್ತಿಯಲಿ 18 ಅನುಮೋದಿತ ಬಡಾವಣೆಗಳು ಇವೆ. ಈ ಬಡಾವಣೆಗಲ್ಲಿ ಸಿಎ ನಿವೇಶನಗಳು ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚಿಸಲು ವಿಶೇಷ ಸಭೆ ನಡೆಸಬೇಕು. ನೂತನ ಬಡಾವಣೆಗಳಿಗೆ ನಗರಸಭೆಯಿಂದ ಸೌಲಭ್ಯಗಳು ನೀಡುವ ಮುನ್ನ ಸಭೆಯಲ್ಲಿ ಚರ್ಚಿಸಬೇಕು. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಗಳು ಉಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸದಸ್ಯರಾದ ಟಿ.ಎನ್.ಪ್ರಭುದೇವ್, ಎಚ್.ಎಸ್.ಶಿವಶಂಕರ್ ತಿಳಿಸಿದರು.ನಗರಸಭೆಯ ಸ್ವತ್ತಗಳ ಮೇಲೆ ನ್ಯಾಯಾಲಯದಲ್ಲಿನ ಪ್ರಕರಣವನ್ನು ಸಭೆಗೆ ತಿಳಿಸಬೇಕು. ನಗರಸಭೆ ವತಿಯಿಂದ ಇದಕ್ಕಾಗಿ ವಿನಿಯೋಗಿಸುವ ಹಣದ ಮಾಹಿತಿಯನ್ನು ಸದಸ್ಯರಿಗೆ ನೀಡಬೇಕು ಎಂದು ಸದಸ್ಯೆ ಪ್ರಭಾ ನಾಗರಾಜ್ ತಿಳಿಸಿದರು.
ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಇಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರೋತ್ಥಾನದ ಕಾಮಗಾರಿಗಳು ವಿಳಂಬವಾಗುತ್ತಿವೆ ಸದಸ್ಯೆ ವತ್ಸಲಾ ತಿಳಿಸಿದರು.ಜಾಹೀರಾತಿಗೆ ಏಕರೂಪ ಶುಲ್ಕ ವಿಧಿಸಿ:
ಕಟ್ಟಡ ನಿಯಮ ಉಲ್ಲಂಘಿಸಿದವರಿಗೆ ನಗರಸಭೆ ಅಧಿಕಾರಿಗಳು ನೊಟೀಸ್ ನೀಡಿ ಸುಮ್ಮನಾಗುತ್ತಿದ್ದಾರೆ. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಪ್ಲೆಕ್ಸ್‌ಗಳು, ಬ್ಯಾನರ್‌ಗಳು ಮತ್ತು ಜಾಹಿರಾತು ಫಲಕಗಳಿಗೆ ಏಕರೂಪದ ಶುಲ್ಕ ವಿಲ್ಲದೇ ತಾರತಮ್ಯ ಮಾಡಲಾಗುತ್ತಿದೆ. ಆಸ್ತಿತೆರಿಗೆ 739 ಲಕ್ಷ ಹಾಗೂ ವಾಣಿಜ್ಯ ಪರವಾನಗಿ ಶುಲ್ಕ 32.89 ಲಕ್ಷ ರುಪಾಯಿ ಮಾತ್ರ ವಸೂಲಾಗಿದ್ದು, ತೀರಾ ಕಡಿಮೆಯಾಗಿದೆ ಸದಸ್ಯರು ದೂರಿದರು.ಪೌರಾಯುಕ್ತ ಕೆ.ಪರಮೇಶ್ ಪ್ರತಿಕ್ರಿಯಿಸಿ, ವಾಣಿಜ್ಯ ಪರವಾನಗಿ ವಸೂಲಾತಿಗೆ ಕ್ರಮ ವಹಿಸಲಾಗುತ್ತಿದೆ. ನಗರಸಭೆ ವ್ಯಾಪ್ತಿಗೆ ಬರುವ ಕಟ್ಟಡಗಳು, ವಾಣಿಜ್ಯ ಮಳಿಗೆಗಳ ಮಾಹಿತಿಯನ್ನು ಸದಸ್ಯರಿಗೆ ನೀಡಲಾಗುವುದು ಎಂದರು.
ಲೆಕ್ಕಾಧಿಕಾರಿ ನಂದೀಶ್ ಉತ್ತರಿಸಿ, ನಗರಸಭೆಯಲ್ಲಿ ಆಸ್ತಿ ಮಾಲೀಕರ ಪಿ.ಐ.ಡಿ ಸಂಖ್ಯೆಗೆ ಅನುಸಾರವಾಗಿ ಅವರ ತೆರಿಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಆದರೆ ನಗರಸಭೆಯಲ್ಲಿ ಇಲ್ಲಿಯವರೆಗೂ ಡಾಟಾ ಬೇಸ್ ಇಲ್ಲ. ಬರುವ ಏಪ್ರಿಲ್‌ನಿಂದ ಈ ವ್ಯವಸ್ತೆಯನ್ನು ಉನ್ನತೀಕರಿಸುವ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು ಎಂದರು.ನಗರೋತ್ಥಾನ ಕಾಮಗಾರಿ ಗುತ್ತಿಗೆ ನೀಡಿರುವ ಗುತ್ತಿಗೆದಾರರು ಮೂರು ನಗರದಲ್ಲಿ ಕಾಮಗಾರಿ ಮಾಡುತ್ತಿದ್ದಾರೆ. ಕಾಮಗಾರಿ ವಿಳಂಬ ಹಾಗೂ ಗುಣಮಟ್ಟದ ಕಾಮಗಾರಿ ಮಾಡದೇ ಇರುವ ಬಗ್ಗೆ ನೊಟೀಸ್ ನೀಡಲಾಗಿದೆ ಎಂದು ತಾಂತ್ರಿಕ ಶಾಖೆಯ ಕಾರ್ಯಪಾಲಕ ಎಂಜಿನಿಯರ್ ರಾಮೇಗೌಡ ಹೇಳಿದರು.
ರಸ್ತೆ ಬದಿ ಒತ್ತುವರಿ ತೆರವು ತಾರತಮ್ಯ:ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಒತ್ತವರಿ ಮಾಡಿಕೊಂಡು ಶಾಶ್ವತ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದವರ ತೆರವು ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಕೆಲವೇ ವೃತ್ತಗಳಲ್ಲಿ ಮಾತ್ರ ತೆರವು ಕಾರ್ಯಾಚರಣೆ ಮಾಡಿ ನಂತರ ಪ್ರಭಾವಿಗಳ ಒತ್ತಡಕ್ಕೆ ಮಣಿದು ತೆರವು ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಸದಸ್ಯರಾದ ನಾಗರಾಜ್ ಶಿವಣ್ಣರವಿಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರಸಭೆ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರಿಗೆ ಸೇರಿರುವ ವಾಣಿಜ್ಯ ಮಳಿಗೆಗಳ ಮುಂದೆ ರಸ್ತೆ ಒತ್ತುವರಿ ಮಾಡಿಕೊಂಡಿರುವ ಕಡೆಗಳಲ್ಲಿ ತೆರವು ಮಾಡಿಯೇ ಇಲ್ಲ. ಬಡವರು ಯಾವುದೇ ಪ್ರಭಾವ ಇಲ್ಲದವರ ಒತ್ತುವರಿಗಳನ್ನು ಮಾತ್ರ ತೆರವು ಮಾಡಲಾಗಿದೆ ಎಂದು ದೂರಿದರು.ಸಭೆಯಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರು, ಚುನಾಯಿತ ಸದಸ್ಯರು, ವಿವಿಧ ಆಡಳಿತ ಶಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್................ಡಾ.ರಾಜ್‌ಕುಮಾರ್ ಪ್ರತಿಮೆ ನವೀಕರಣ
ನಗರದ ಹಳೇ ಆಸ್ಪತ್ರೆ ವೃತ್ತದ ಬಳಿ ಇರುವ ಡಾ.ರಾಜ್‌ಕುಮಾರ್ ಪ್ರತಿಮೆಯನ್ನು ನವೀಕರಿಸಲು ಹಾಗೂ ಪ್ರತಿ ಸುತ್ತಲಿನ ವೃತ್ತವನ್ನು ಅಭಿವೃದ್ಧಿಪಡಿಸಲು ಈಗಾಗಲೇ ನೀಲ ನಕ್ಷೆ ಸಿದ್ಧಪಡಿಸಲಾಗಿದೆ ಎಂದು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘಧ ಅಧ್ಯಕ್ಷ ಸು.ನರಸಿಂಹಮೂರ್ತಿ ಹೇಳಿದರು. ಅವರು ಶನಿವಾರ ನಗರಸಭೆಯಲ್ಲಿ ಸದಸ್ಯರನ್ನು ಭೇಟಿ ಮಾಡಿ ಡಾ.ರಾಜ್‌ಕುಮಾರ್ ನಾಡಿನ ಭಾಷೆಸಂಸ್ಕೃತಿಯ ರಾಯಬಾರಿ. ಇವರ ಪ್ರತಿಮೆ ನವೀಕರಣಕ್ಕೆ ಎಲ್ಲಾ ನಗರಸಭಾ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.ಬಾಕ್ಸ್........
ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಲಿಇತ್ತೀಚೆಗೆ ನಗರಸಭೆಯ ನಡೆದ ಕುಂದು ಕೊರತೆ ಸಭೆಯಲ್ಲಿ ಗಿರೀಶ್ ಎಂಬುವವರು ಅಧಿಕಾರಿಗಳನ್ನು ಹಾಗೂ ವ್ಯವಸ್ಥೆ ಕುರಿತು ಅಯೋಗ್ಯರು ಎನ್ನುವ ಪದ ಬಳಸಿದ್ದಾರೆ. ಇದನ್ನು ಬೆಂಬಲಿಸಿ ಕೆರೆ ಹೋರಾಟ ಸಮಿತಿಯ ಮುಖಂಡರು ಹೇಳಿಕೆ ನೀಡಿದ್ದಾರೆ.ನಗರಸಭೆಯಿಂದ 390 ಸಾವಿರ ರುಪಾಯಿ ಬಿಡುಗಡೆ ಮಾಡಿ ಟ್ಯಾಂಕರ್‌ಗಳ ಮೂಲಕ ಚಿಕ್ಕತುಮಕೂರು ಗ್ರಾಮಗಳಿಗೆ ಕುಡಿಯುವ ನೀರು ನೀಡಲಾಗಿದೆ. 35 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ನಿಂದನೆ ಕೇಳಿಲ್ಲ. ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸದಸ್ಯ ಟಿ.ಎನ್.ಪ್ರಭುದೇವ್ ತಿಳಿಸಿದರು.5ಕೆಡಿಬಿಪಿ1-
ದೊಡ್ಡಬಳ್ಳಾಪುರ ನಗರಸಭೆಯ ಸರ್ವ ಸದಸ್ಯರ ಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷತೆಯಲ್ಲಿ ನಡೆಯಿತು.