ಚಿರತೆ ದಾಳಿ: 80 ಕೋಳಿ ಬಲಿ

KannadaprabhaNewsNetwork |  
Published : Nov 05, 2023, 01:19 AM IST
ಫೋಟೋ 2 : ಸೋಂಪುರ ಹೋಬಳಿಯ ಬಾಪೂಜಿನಗರ ಹೊರವಲಯದ ರಾಜೇಶ್‌ಗೌಡ ಎಂಬುವರ ಕೋಳಿಫಾರಂನಲ್ಲಿ ಚಿರತೆ ದಾಳಿ ನಡೆಸಿರುವುದು | Kannada Prabha

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಕಾಸರಘಟ್ಟ ಬಳಿಯ ಬಾಪೂಜಿ ನಗರದಲ್ಲಿ ಹಾಡಹಗಲೇ ಕೋಳಿಫಾರಂ ಒಳಗೆ ನುಗ್ಗಿರುವ ಚಿರತೆಗಳು 80ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ತಿಂದು ಮುಗಿಸಿವೆ.

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಕಾಸರಘಟ್ಟ ಬಳಿಯ ಬಾಪೂಜಿ ನಗರದಲ್ಲಿ ಹಾಡಹಗಲೇ ಕೋಳಿಫಾರಂ ಒಳಗೆ ನುಗ್ಗಿರುವ ಚಿರತೆಗಳು 80ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ತಿಂದು ಮುಗಿಸಿವೆ.

ಇತ್ತೀಚಿಗೆ ಕೆರೆಕತ್ತಿಗನೂರು, ಇಂದಿರಾನಗರ, ಮಾರುತಿನಗರದ ಗೋದಾಮಿನ ಬಳಿ ಕಂಡ ಚಿರತೆಯೇ ಆಗಿದ್ದು, ತಾಯಿ ಚಿರತೆ ಜೊತೆಯಲ್ಲಿ ಮರಿಗಳು ಇವೆ. ಕೋಳಿಫಾರಂನ ಒಂದು ಬದಿಯ, ಗೋಡೆ ಬೀಳಿಸಿ, ಕೋಳಿಫಾರಂ ಒಳನುಗ್ಗಿ ಕೋಳಿಗಳನ್ನು ತಿಂದು, ಹತ್ತಕ್ಕೂ ಅಧಿಕ ಕೋಳಿಗಳನ್ನು ಸ್ಥಳದಲ್ಲೇ ರಕ್ತ ಹೀರಿ ಹೋಗಿವೆ. ಸುಮಾರು 60ಕ್ಕೂ ಅಧಿಕ ಕೋಳಿ ನಾಪತ್ತೆಯಾಗಿದೆ. ನಮಗೆ 60 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಕೋಳಿ ಫಾರಂ ಮಾಲೀಕ ರಾಜೇಶ್‌ಗೌಡ (ಪುಟ್ಟಿ) ತಿಳಿಸಿದ್ದಾರೆ.

ಬೋನು ಅಳವಡಿಕೆ: ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯಾಧಿಕಾರಿಗಳು ಚಿರತೆ ದಾಳಿ ಮಾಡಿದ ಕೋಳಿ ಫಾರಂ ಸಮೀಪ, ಬೋನು ಅಳವಡಿಸಿ ಬೋನಿನ ಸುತ್ತಲು ಸೋಪ್ಪನ್ನು ಹಾಕಲಾಗಿದೆ. ರಾಜೇಶ್‌ರ ಕೋಳಿಫಾರಂ, ಮಾಚನಹಳ್ಳಿ, ಶ್ರೀಗಿರಿಪುರ ಬಳಿಯ ಬೆಟ್ಟಹಳ್ಳಿ ಬಳಿ ಹಾಗೂ ಮೆಳೇಕತ್ತಿಗನೂರು ಗ್ರಾಮದಲ್ಲೂ ಬೋನು ಇಡಲಾಗಿದೆ ಎಂದು ಫಾರೆಸ್ಟ್ ಗಾರ್ಡ್ ನಾಗರಾಜು ಪ್ರತಿಕ್ರಿಯಿಸಿ ತಿಳಿಸಿದ್ದಾರೆ. ಗ್ರಾಮಸ್ಥರಾದ ಸಂತೋಷ್, ಹನುಮಂತರಾಜು, ಲಕ್ಷ್ಮಣಯ್ಯ, ಬಾಪೂಜಿನಗರದ ಗ್ರಾಮಸ್ಥರು, ರಾಜೇಶ್‌ ಸ್ಥಳದಲ್ಲಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ