ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆಗೂ ಮುನ್ನ ನಗರದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಬೆಳಗ್ಗೆ ಶುಭ ಮಂಗಳದಿಂದ ಹೊರಟ ಬೃಹತ್ ಮೆರವಣಿಗೆ ಶುಭಮಂಗಳ, ವಿನೋಬ ನಗರ ಚೌಕಿ, ಲಕ್ಷ್ಮೀ ಚಲನಚಿತ್ರ ಮಂದಿರ ಜೈಲ್ ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಬಾಲರಾಜ ಅರಸ್ ರಸ್ತೆ ಮೂಲಕ ಕಾಂಗ್ರೆಸ್ ಕಚೇರಿ ತಲುಪಿತು.
ಪಟಾಕಿ ಸಿಡಿಸಿ, ವಾದ್ಯಗಳ ಬಾರಿಸುವ ಮೂಲಕ ಮೆರವಣಿಗೆ ಸಾಗಿತು. ಕಾಂಗ್ರೆಸ್ ಕಚೇರಿ ಬಳಿ ಅಭಿಮಾನಿಗಳು ಎಂ.ಶ್ರೀಕಾಂತ್ ಅವರಿಗೆ ಬೃಹದಾಕಾರದ ಸೇಬು ಹಾಗೂ ಹೂವಿನ ಹಾರವನ್ನು ಹಾಕಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಮ್ಮುಖ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಪಡೆದರು.ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದು, ವಿರೋಧ ಪಕ್ಷಗಳ ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್‌ನತ್ತ ಬರುತ್ತಿದ್ದಾರೆ. ಜಿಲ್ಲೆಯಲ್ಲಿಯೂ ಹಲವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈಗ ಎಂ.ಶ್ರೀಕಾಂತ್ ಪಕ್ಷ ಸೇರಿರುವುದು ಕಾಂಗ್ರೆಸ್‌ಗೆ ಇನ್ನಷ್ಟು ಬಲ ಬಂದಂತಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಎಂ.ಶ್ರೀಕಾಂತ್ ಅವರು ಸೇರ್ಪಡೆಯಿಂದ ಪಕ್ಷಕ್ಕೆ ಬಲ ಹೆಚ್ಚಿಸಿದೆ. ನಾವು ಸುಮ್ಮನೆ ಭಾಷಣ ಮಾಡುತ್ತಾ ಕುಳಿತರೇ ಆಗುವುದಿಲ್ಲ. ಮನೆ-ಮನೆಗೆ ಭೇಟಿ ಕೊಡಬೇಕು. ಜನರಿಗೆ ನಮ್ಮ ಪಕ್ಷದ ಸಾಧನೆ, ತತ್ವ-ಸಿದ್ದಾಂತದ ಬಗ್ಗೆ ಮನವರಿಕೆ ಮಾಡಿ ಅವರನ್ನು ಪಕ್ಷದತ್ತ ಸೆಳಶ್ಲು ಶ್ರಮಿಸಬೇಕು. ಆಗ ಮಾತ್ರ ಪಕ್ಷದ ಗೆಲುವು ಸುಲಭ ಎಂದರು.
- - - -4ಎಸ್‌ಎಂಜಿಕೆಪಿ02: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಶನಿವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ಎಂ.ಶ್ರೀಕಾಂತ್ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಮ್ಮುಖ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಪಡೆದರು.