ಅವ್ಯವಹಾರ ನಡೆಸಿದರೆ ಮುಲಾಜಿಲ್ಲದೇ ಕ್ರಮ

KannadaprabhaNewsNetwork |  
Published : Mar 25, 2025, 12:50 AM IST
೨೪ ಜೆ.ಎಲ್.ಆರ್ ಚಿತ್ರ2: ಜಗಳೂರು ಪಟ್ಟಣದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು. | Kannada Prabha

ಸಾರಾಂಶ

2023-24ರಲ್ಲಿ ಜಗಳೂರು ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ₹೧೫ ಕೋಟಿ ಅವ್ಯವಹಾರವಾಗಿತ್ತು. ಸಚಿವರು, ಅಧಿಕಾರಿಗಳ ಮನವೊಲಿಸಿ ಪ್ರಾಮಾಣಿಕ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಂಡೆ. ಈ ಬಾರಿ ಅದೇ ರೀತಿ ಅವ್ಯವಹಾರ ಕಂಡುಬಂದರೆ ಮುಲಾಜಿಲ್ಲದೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.

- ಜಗಳೂರು ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ದೇವೇಂದ್ರಪ್ಪ

- - - ಕನ್ನಡಪ್ರಭ ವಾರ್ತೆ ಜಗಳೂರು

2023-24ರಲ್ಲಿ ಜಗಳೂರು ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ₹೧೫ ಕೋಟಿ ಅವ್ಯವಹಾರವಾಗಿತ್ತು. ಸಚಿವರು, ಅಧಿಕಾರಿಗಳ ಮನವೊಲಿಸಿ ಪ್ರಾಮಾಣಿಕ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಂಡೆ. ಈ ಬಾರಿ ಅದೇ ರೀತಿ ಅವ್ಯವಹಾರ ಕಂಡುಬಂದರೆ ಮುಲಾಜಿಲ್ಲದೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.

ಪಟ್ಟಣದ ಎಪಿಎಂಸಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಸೋಮವಾರ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ವರ್ಷ ಪಟ್ಟಣದ ಎಪಿಎಂಸಿಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ಆರಂಭವಾಗಿರುವ ಎಂಎಸ್‌ಪಿ ಅಡಿ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ಆಗದಂತೆ ಎಚ್ಚರ ವಹಿಸಬೇಕು ಎಂದರು.

ರೈತರು ಫ್ರೂಟ್ ಐಡಿ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಿ ಗುಣಮಟ್ಟದ ರಾಗಿ ಮಾರಾಟ ಮಾಡಬೇಕು. ನೀವು ಮಾರಾಟ ಮಾಡುವ ರಾಗಿ ಪುನಃ ಪಡಿತರ ವ್ಯವಸ್ಥೆಯ ಮುಖೇನ ಜನರಿಗೆ ತಲುಪುತ್ತವೆ. ಹೀಗಾಗಿ, ರೈತರು ಸರಕಾರ ನಿಯಮಗಳಂತೆ ಪ್ರತಿ ಕ್ವಿಂ.ಗೆ ₹೪೨೯೨ ದಂತೆ ನಿಗದಿಪಡಿಸಿದ ದರದಂತೆ ಮಾರಾಟ ಮಾಡಿ. ಜಗಳೂರು ತಾಲೂಕಿನಾದ್ಯಂತ ₹೩೨೫೯೮ ಕ್ವಿಂ. ರಾಗಿ ಉತ್ಪಾದನೆ ಆಗಿದೆ. ೧೫೫೨ ರೈತರು ಎಂಎಸ್‌ಪಿ ಯೋಜನೆ ಅಡಿ ನೋಂದಣೆ ಮಾಡಿಸಿಕೊಂಡಿದ್ದಾರೆ. ಇಡೀ ಜಿಲ್ಕೆಯಲ್ಲೇ ಜಗಳೂರು ಹೆಚ್ಚು ರಾಗಿ ಉತ್ಪಾದನೆಯಾಗಿರುವ ತಾಲೂಕು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಗರಿಷ್ಠ ೨೦ ಕ್ವಿಂ. ರಾಗಿ ಮಾರಾಟ ಮಾಡಲು ಅವಕಾಶವಿದ್ದು, ರೈತರು ಸದುಪಯೋಗ ಮಾಡಿಸಿಕೊಳ್ಳಬೇಕು ಎಂದರು.

ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿ ಮಹೇಂದ್ರ ಮಾತನಾಡಿ, ಭತ್ತ, ರಾಗಿ, ಬಿಳಿಜೋಳ ಖರೀದಿಗೆ ಸರ್ಕಾರ ಮುಂದಾಗಿದೆ. ಜೂನ್ ೩೦ರವರೆಗೆ ರಾಗಿ ಖರೀದಿ ಇರುತ್ತದೆ. ಗೊಂದಲವಿಲ್ಲದಂತೆ ರಾಗಿ ಖರೀದಿ ನಡೆಯಲಿದೆ. ರೈತರು ಅವಸರ ಮಾಡಿಕೊಳ್ಳದೇ ರಾಗಿ ಮಾರಾಟ ಮಾಡಬೇಕೆಂದು ಶಾಸಕರು ಹೇಳಿದರು.

ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಎಪಿಎಂಸಿ ಮ್ಯಾನೇಜರ್ ಮನೋಜ್ ಮಾತನಾಡಿದರು. ಕಾಂಗ್ರೆಸ್ ಮುಖಂಡ ಬಿ.ಮಹೇಶ್ವರಪ, ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ ಪಡಿತರ ವಿತರಕರ ಸಂಘದ ತಾಲೂಕು ಅಧ್ಯಕ್ಷ ಒಮಣ್ಣ, ಉಪಾಧ್ಯಕ್ಷ ತೋಣಗಟ್ಟೆ ರುದ್ರಮುನಿ, ಅಹಾರ ನಿರಿಕ್ಷಕ ಶಿವಪ್ರಕಾಶ್, ರಸೂಲ್ ಸಾಬ್, ಪುಟ್ಟಣ್ಣ ಇತರರು ಇದ್ದರು.

- - - -೨೪ಜೆ.ಎಲ್.ಆರ್ ಚಿತ್ರ2:

ಜಗಳೂರು ಪಟ್ಟಣದ ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ