ಕನ್ನಡಪ್ರಭ ವಾರ್ತೆ ಜೇವರ್ಗಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ದೇವರಾಜ ಅರಸು ಅವರು ದೀನದಲಿತರ ಹಿಂದುಳಿದ ವರ್ಗಗಳ, ಬಡವರ ಪರವಾಗಿ ಸಮಾಜಮುಖಿಯಾಗಿ ಕೆಲಸ ಮಾಡಿದ್ದು, ಅವರ ಆಡಳಿತದಲ್ಲಿ ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ಬಡವರಿಗೆ ಭೂಮಿಯ ಮಾಲೀಕರಾಗುವಂತೆ ಮಾಡಿದ್ದಾರೆ. ಅದರಂತೆಯೆ ನಮ್ಮ ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಅಕ್ರಮ ಸಕ್ರಮದ ಅರ್ಜಿಗಳನ್ನು ಕೂಡಲೆ ಅಕ್ರಮ ಸಕ್ರಮ ಸಮಿತಿ ವತಿಯಿಂದ ಪರಿಶೀಲನೆ ನಡೆಸಿ ನಿಜವಾದ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಈ ಹಿಂದೆ ತಾಲೂಕು ಆಡಳಿತದಿಂದ ಅನೇಕ ಬಡವರ ಅರ್ಜಿಗಳನ್ನು ಫಾರಂ ನಂ 50, ಫಾರಂ ನಂ53, ಫಾರಂ ನಂ 57 ಅರ್ಜಿಗಳನ್ನು ಪರಿಶೀಲನೆ ನಡೆಸದೆ ಅನೇಕ ಬಡವರಿಗೆ ಸಾಗುವಳಿ ಚೀಟಿ ನೀಡಿಲ್ಲ ಮತ್ತು ಪಹಣಿ ಮಾಡಿಲ್ಲ. ಇದನ್ನು ಕೂಡಲೆ ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತ ಸರಿಪಡಿಸಬೇಕು ಎಂದರು.ಜೇವರ್ಗಿ ತಾಲೂಕಿನಲ್ಲಿ ಸುಮಾರು 2 ಸಾವಿರ ಅರ್ಜಿಗಳು ಈಗಾಗಲೆ ಹಾಗೆ ಉಳಿದಿದ್ದು, ಕೂಡಲೆ ತಾಲೂಕು ಆಡಳಿತ ಜತೆ ಅಕ್ರಮ ಸಕ್ರಮ ಸಮಿತಿ ಸದಸ್ಯರು ಸೇರಿ ಅರ್ಜಿದಾರ ಸ್ಥಳವನ್ನು ಪರಿಶೀಲನೆ ನಡೆಸಿ ನಿಜವಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಹಾಗೂ ಪಹಣಿ ಮಾಡಿಸುವ ಕೆಲಸ ಮಾಡಬೇಕು ಎಂದರು.