ಹೂವಿನಹಡಗಲಿ: ತಾಲೂಕಿನ ಕೋಮಾರನಹಳ್ಳಿ ಸಸ್ಯ ವಲಯದಲ್ಲಿ ಸಾಮಾಜಿಕ ಅರಣ್ಯ ವಲಯ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಕೃಷಿ ಅರಣ್ಯದ ಕುರಿತು ಕೌಶಲ್ಯ ಅಭಿವೃದ್ಧಿ ತರಬೇತಿ ಆಯೋಜಿಸಲಾಗಿತ್ತು.
ತಾಲೂಕಿನ ರಸ್ತೆಗಳ ಇಕ್ಕೆಲಗಳಲ್ಲಿ ಸಾಮಾಜಿಕ ಅರಣ್ಯ ವಲಯದಿಂದ ಸಾಕಷ್ಟು ಹತ್ತಾರು ತಳಿಯ ವಿವಿಧ ಸಸಿಗಳನ್ನು ನೆಟ್ಟು ನಿರ್ವಹಣೆ ಮಾಡಲಾಗುತ್ತಿದೆ. ಆದರೆ ರೈತರು ರಸ್ತೆಯಲ್ಲಿ ತ್ಯಾಜ್ಯ ಹಾಕುವ ಜತೆಗೆ ಅದಕ್ಕೆ ಬೆಂಕಿ ಹಚ್ಚುವುದರಿಂದ ಬೆಳೆದು ನಿಂತಿರುವ ಗಿಡ ಮರಗಳು ಸುಟ್ಟು ಹೋಗುತ್ತಿವೆ. ಇದು ಪರಿಸರಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತಿದ್ದಾರೆ. ಆದರಿಂದ ರೈತರು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ದಾವಣಗೆರೆಯ ಕಾರ್ಡಿಯಾ ಸಂಸ್ಥೆಯ ಸುದರ್ಶನ್ ಮಾತನಾಡಿ, ರೈತರು ಕೃಷಿ ಅರಣ್ಯ ಹೇಗೆ ಅಳವಡಿಸಿಕೊಳ್ಳಬೇಕು, ಅದಕ್ಕೆ ಸೂಕ್ತವಾದ ಮರಗಳ ಮಾಹಿತಿ ಹಾಗೂ ಕೃಷಿ ಅರಣ್ಯದ ಪ್ರಯೋಜನಗಳ ಕುರಿತು ವಿವರಿಸಿದರು.ಸಂಪನ್ಮೂಲ ವ್ಯಕ್ತಿ ಚಂದ್ರಗೌಡ ಇವರು, ಜೇನು ಕೃಷಿ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ತರಬೇತಿಯಲ್ಲಿ ಸ್ವಸಹಾಯ ಸಂಘಗಳಿಗೆ ಜೇನು ಕೃಷಿ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿ, ಜೇನುಪೆಟ್ಟಿಗೆ ವಿತರಿಸಲಾಯಿತು.
ಉಪವಲಯ ಅರಣ್ಯಾಧಿಕಾರಿ ಸಾಗರ್ ಸ್ವಾಗತಿಸಿದರು, ಗಸ್ತು ಅರಣ್ಯ ಪಾಲಕ ವೀರೇಶ್ ನಿರೂಪಿಸಿದರು. ಗಸ್ತು ಅರಣ್ಯ ಪಾಲಕ ಹುಲುಗಪ್ಪ, ಗಿರೀಶ್, ದುಶ್ಯಂತ್ ಗೌಡ, ರಾಜೇಂದ್ರ ಇತರರಿದ್ದರು.