ಅಹಲ್ಯಾಬಾಯಿ ಹೋಳ್ಕರ್ ಮಾದರಿ ಆಡಳಿತಗಾರ್ತಿ: ರವಿ ದಂಡಿನ್‌

KannadaprabhaNewsNetwork |  
Published : Jun 02, 2025, 01:51 AM IST
ಹಾವೇರಿಯ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಆಹಾರ ನಿಗಮ ಮಂಡಳಿ ನಾಮನಿರ್ದೇಶೀತ ಸದಸ್ಯ ರವಿ ದಂಡಿನ ಮಾತನಾಡಿದರು. | Kannada Prabha

ಸಾರಾಂಶ

ಶಿವಭಕ್ತೆಯಾಗಿದ್ದ ಲೋಕಮಾತೆ ಅಹಲ್ಯಾಬಾಯಿ ತಮ್ಮ ಅವಧಿಯಲ್ಲಿ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ನೂರಾರು ಹಿಂದೂ ದೇವಾಲಯಗಳನ್ನು ಅಭಿವೃದ್ಧಿಪಡಿಸಿದ್ದರು.

ಹಾವೇರಿ: ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರು ತಮ್ಮ ಜೀವಿತದ ಅವಧಿಯಲ್ಲಿ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಆಡಳಿತವನ್ನು ನಡೆಸಿ ಜನಸಾಮಾನ್ಯರ ಜೀವನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ರಾಷ್ಟ್ರೀಯ ಆಹಾರ ನಿಗಮ ಮಂಡಳಿ ನಾಮನಿರ್ದೇಶಿತ ಸದಸ್ಯ ರವಿ ದಂಡಿನ್ ತಿಳಿಸಿದರು.ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಭಕ್ತೆಯಾಗಿದ್ದ ಲೋಕಮಾತೆ ಅಹಲ್ಯಾಬಾಯಿ ತಮ್ಮ ಅವಧಿಯಲ್ಲಿ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ನೂರಾರು ಹಿಂದೂ ದೇವಾಲಯಗಳನ್ನು ಅಭಿವೃದ್ಧಿಪಡಿಸಿದ್ದರು. ಸನಾತನ ಧರ್ಮವನ್ನು ಮತ್ತಷ್ಟು ಉತ್ತುಂಗಕ್ಕೆ ಬೆಳೆಸಿದರು. ತಮ್ಮ ಅವಧಿಯಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ ಮಾದರಿ ಆಡಳಿತ ನಡೆಸಿದರು. ಲೋಕಮಾತೆ ಅಹಲ್ಯಾಬಾಯಿ ಅವಧಿಯಲ್ಲಿಯೇ ಸ್ತ್ರೀ ಸಬಲೀಕರಣಕ್ಕಾಗಿ ಹೆಚ್ಚಿನ ಒತ್ತು ನೀಡಿದರು. ಬಿಜೆಪಿ ಲೋಕಮಾತೆ ಅಹಲ್ಯಾಬಾಯಿಯವರನ್ನು ಜನ್ಮದಿನಾಚರಣೆ ಮೂಲಕ ನೆನೆದು ಅವರ ಆಡಳಿತ ವೈಖರಿ, ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ದೇಶಾದ್ಯಂತ ಪಸರಿಸುತ್ತಿದೆ ಎಂದರು. ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡ್ರ ಮಾತನಾಡಿ, ಮೂನ್ನೂರು ವರ್ಷಗಳ ಹಿಂದೆ ಬದುಕಿದ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಇಂದಿಗೂ ದೇಶಾದ್ಯಂತ ಮನೆಮಾತಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಜೀವಿತದ ಉದ್ದಕ್ಕೂ ಸನಾತನ ಸಂಸ್ಕೃತಿ, ಸನಾತನ ಧರ್ಮ ಉತ್ತಮ ರಾಜ ಆಡಳಿತ ನೀಡಿದ್ದು. ಭಾರತದ ಇತಿಹಾಸದಲ್ಲಿ ಈ ನೆಲಕ್ಕೆ ಬದುಕಿದ ಮಹಿಳೆಯರನ್ನು ಪರಿಚಯಿಸುವ ಕಾರ್ಯ ಆಗಬೇಕಿದೆ. ಇಂದಿನ ಯುವಪೀಳಿಗೆ ಇತಿಹಾಸದಲ್ಲಿ ದೇಶ ಹಾಗೂ ಧರ್ಮಕ್ಕಾಗಿ ಬದುಕಿ ಬಾಳಿದವರ ಜೀವನವನ್ನು ಅರಿಯುವುದು ಪ್ರಮುಖ ಕರ್ತವ್ಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಲೋಕಮಾತೆ ಅಹಲ್ಯಾಬಾಯಿ ಹೋಲ್ಕರ ಜೀವನ ಚರಿತ್ರೆ ಉಳ್ಳ ಪ್ರದರ್ಶನ ಉದ್ಘಾಟಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಆಲದಕಟ್ಟಿ, ವೆಂಕಟೇಶ ನಾರಾಯಣಿ, ಎನ್.ಪಿ. ಚಾವಡಿ, ವಿದ್ಯಾ ಶೆಟ್ಟಿ, ಲಲಿತಾ ಗುಂಡೇನಹಳ್ಳಿ ಸೇರಿದಂತೆ ಜಿಲ್ಲೆ ಮತ್ತು ವಿವಿಧ ಮಂಡಲಗಳ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ರತ್ನಾ ಭೀಮಕ್ಕನವರ ನಿರೂಪಿಸಿದರು. ರಾಜೇಶ್ವರಿ ಬಿಸ್ಟನಗೌಡ್ರ ಸ್ವಾಗತಿಸಿದರು. ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

ಹಾವೇರಿ: ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2024- 25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಿಂದ ವಸತಿ ಸಹಿತ ಉಚಿತ ತರಬೇತಿ ನೀಡಲಾಗುವುದು.

ಆಹಾರ ಮತ್ತು ಪಾನೀಯ ಸೇವಾ ಪರಿಚಾರಕ ತರಬೇತಿಗೆ 10ನೇ ತರಗತಿ, ಕೋಣೆ ಪರಿಚಾರಕ ತರಬೇತಿಗೆ 5ನೇ ತರಗತಿ ಹಾಗೂ ಮಲ್ಟಿಕ್ಯುಸಿನ್ ಕುಕ್ ತರಬೇತಿಗೆ 8ನೇ ತರಗತಿ ಉತ್ತೀರ್ಣರಾಗಿರಬೇಕು. ಅರ್ಜಿಯನ್ನು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆದುಕೊಂಡು, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜೂ. 13ರ ಸಂಜೆ 4ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 08375-296033 ಸಂಪರ್ಕಿಸಬಹುದು.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌