ಕನ್ನಡಪ್ರಭ ವಾರ್ತೆ ಮೈಸೂರು
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ವತಿಯಿಂದ ನಗರದ ವಿಜಯ ವಿಠಲ ಕಾಲೇಜು ಆವರಣದಲ್ಲಿ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಈ ವಿಷಯ ತಿಳಿಸಿದರು.
ಇಂದಿನ ಪ್ರಪಂಚಕ್ಕೆ ಅನ್ವಯವಾಗುವಂತಹ ಅನೇಕ ಪ್ರಸಂಗಗಳು ರಾಮಾಯಣ ಮಹಾಭಾರತಗಳಲ್ಲಿ ದೊರೆಯುತ್ತವೆ. ಉಪನಿಷತ್ತುಗಳು ವೇದಗಳ ಕೊನೆಯ ಭಾಗವಾಗಿವೆ. ಸತ್ಯಮೇವ ಜಯತೆಯನ್ನು ಮಂಡೂಕೋಪನಿಷತ್ತಿನಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.ಮುತ್ತಿನಂತಹ ಮಾತೇ ಮುಕ್ತಕ. ಒಬ್ಬರಿಗೆ ಮಾತ್ರ ಅನ್ವಯಿಸದೇ ಸರ್ವರಿಗೂ ಅನ್ವಯವಾಗುವಂತಿರುವುದೇ ಮುಕ್ತಕದ ವಿಶೇಷತೆ. ಈ ಸಂದರ್ಭದಲ್ಲಿ ನಂಜನಗೂಡು ಸತ್ಯನಾರಾಯಣ ಅವರ ನಂಜನಗೂಡು ತಿರುಮಲಾಂಬ, ಪ್ರಾಚೀನ ವಿಜ್ಞಾನಿಗಳು ಹಾಗು ವೇದಗಳಲ್ಲಿ ವಿಜ್ಞಾನ ಎಂಬ ಮೂರು ಪುಸ್ತಕಗಳನ್ನು ಅವರು ಲೋಕಾರ್ಪಣೆಗೊಳಿಸಿದರು.
ಸಮಾರಂಭದಲ್ಲಿ ಲೇಖಕರಾದ ನಂಜನಗೂಡು ಸತ್ಯನಾರಾಯಣ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಲಯ ಪ್ರಮುಖ್ ಡಾ.ವಿ. ರಂಗನಾಥ್, ಕಾರ್ಯಕ್ರಮ ಅನುವರ್ತಿ ರಘುಶೆಟ್ಟಿ, ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಹಾಗು ಜಿಲ್ಲಾ ಕಾರ್ಯದರ್ಶಿ ಸು. ಸುಬ್ರಹ್ಮಣ್ಯ ಇದ್ದರು.