ಕನ್ನಡಪ್ರಭ ವಾರ್ತೆ ಹಲಗೂರು
ಸಮ್ಮೇಳನ ರಥ ಹಲಗೂರು ಪಟ್ಟಣ ಪ್ರದೇಶದಲ್ಲಿ ಸಂಚರಿಸಿ ನಂತರ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ ಬ್ಯಾಡರಹಳ್ಳಿಗೆ ಆಗಮಿಸಿದಾಗ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಭವ್ಯಸಾಗತ ನೀಡಿ ರಥವನ್ನು ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಭಕ್ತವತ್ಸಲ, ಮಂಡ್ಯದಲ್ಲಿ ನಡೆಯುವ ಸಮ್ಮೇಳನಕ್ಕೆ ಹೋಬಳಿ ವ್ಯಾಪ್ತಿಯ ಜನರು, ಕನ್ನಡಾಭಿಮಾನಿಗಳು ಪಾಲ್ಗೊಂಡು ಹಬ್ಬದಂತೆ ಅಭೂತಪೂರ್ವವಾಗಿ ಯಶಸ್ವಿಗೊಳಿಸಬೇಕೆಂದು ಕೋರಿದರು.ಈ ವೇಳೆ ವಿವಿಧ ಸಂಘಟನೆ ಸದಸ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಗ್ರಾಪಂ ಸದಸ್ಯರು ಇದ್ದರು.ಕಾಡಾನೆಗಳ ಕಾರ್ಯಾಚರಣೆ: ಸಾರ್ವಜನಿಕರು ಸಹಕರಿಸಿ ಅರಣ್ಯಾಧಿಕಾರಿಗಳ ಮನವಿ
ತಾಲೂಕಿನ ಕುರುಬರಹಳ್ಳಿ ಬೆಳತೂರು, ಸಂಗಾಪುರ, ಕಲ್ಲಹಳ್ಳಿ, ಭುವರಹನಾಥಸ್ವಾಮಿ ದೇವಸ್ಥಾನ, ಮಾವಿನಕೆರೆ ಗ್ರಾಮಗಳಲ್ಲಿ ಸುತ್ತಮುತ್ತ 2 ಕಾಡಾನೆಗಳು ಕಾಣಿಸಿಕೊಂಡು ಕಾವೇರಿ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿವೆ.
ಸಾರ್ವಜನಿಕರು ಕಾಡಾನೆಗಳ ಹತ್ತಿರ ಹೋಗುತ್ತಿರುವುದು, ಕೂಗಾಡುವುದು, ಪಟಾಕಿ ಸಿಡಿಸುವುದು, ಗಾಬರಿಗೊಳಿಸುವುದು, ಕಾಡಾನೆಗಳ ಛಾಯಾಚಿತ್ರ ತೆಗೆಯುವುದು ಮುಂತಾದ ಚಟುವಟಿಕೆಗಳಿಂದ ಕಾಡಾನೆಗಳು ವಿಚಲಿತಗೊಂಡು ದಿಕ್ಕುತಪ್ಪುವ ಸಾಧ್ಯತೆ ಇರುತ್ತದೆ. ಈ ವೇಳೆ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದ್ದು, ಸದರಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವವರೆಗೂ ಸಾರ್ವಜನಿಕರು ಅರಣ್ಯ ಇಲಾಖೆಯವರಿಗೆ ಸಹಕರಿಸಬೇಕೆಂದು ಮಂಡ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ: ಗುರುಮೂರ್ತಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿಬ್ಬಾಣದ ಪ್ರಯುಕ್ತ ಮಿಮ್ಸ್ ಸಹಯೋಗದೊಂದಿಗೆ ಡಿ.6 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗುರುಮೂರ್ತಿ ತಿಳಿಸಿದರು.
ಶಿಬಿರದಲ್ಲಿ ನುರಿತ ವೈದ್ಯರುಗಳಿಂದ ವೈದ್ಯಶಾಸ್ತ್ರ ವಿಭಾಗ, ಕೀಲು ಮತ್ತು ಮೂಳೆ ನೋವು, ಇಎನ್‌ಟಿ, ಶಸ್ತ್ರ ಚಿಕಿತ್ಸೆ, ಓಬಿಜಿ ಮತ್ತು ಚರ್ಮರೋಗಳ ಸಂಬಂಧ ತಪಾಸಣೆ ನಡೆಸಲಾಗುವುದು ಎಂದರು.
ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿಬ್ಬಾಣದ ಅಂಗವಾಗಿ ಡಿ.6 ರಂದು ನಗರದ ಗಾಂದಿಭವನದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನಿರಂಜನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೀಕ್ಷಿತ್, ಕುಮಾರ್, ಶಿವಶಂಕರಮೂರ್ತಿ, ವೆಂಕಟಾಚಲಯ್ಯ ಇದ್ದರು.