ಶಾಲೆ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

KannadaprabhaNewsNetwork |  
Published : May 29, 2026, 02:15 AM IST
28ಕೆಪಿಎಲ್29 ಕೊಪ್ಪಳ ತಾಲೂಕಿನ ಶಾಲೆಯೊಂದರಲ್ಲಿ ಬಿಸಿಯೂಟ ಬಾಂಡೆಗಳನ್ನು ತೊಳೆದುಕೊಳ್ಳುತ್ತಿರುವುದು. | Kannada Prabha

ಸಾರಾಂಶ

ಕೆಲವೊಂದು ಸರ್ಕಾರಿ ಶಾಲೆಯವರು ಖಾಸಗಿ ಶಾಲೆಗಳಂತೆ ಬ್ಯಾನರ್ ಹಾಕಿ, ಬನ್ನಿ ಮಕ್ಕಳೇ ನಮ್ಮ ಶಾಲೆಗೆ ಎಂದೆಲ್ಲ ಮನವಿ

ಕೊಪ್ಪಳ: ಸರ್ಕಾರಿ ಶಾಲೆ ಸೇರಿದಂತೆ ಅನುದಾನಿತ ಶಾಲೆಗಳು ಮೇ 29 ರಂದು ಪ್ರಾರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸಕ್ತ ವರ್ಷ ಮೊದಲ ದಿನವೇ ಶಾಲೆಗೆ ಮಕ್ಕಳು ಬರಲಿ ಎಂದು ಈಗಾಗಲೇ ಜಾಗೃತಿ ಮೂಡಿಸಲಾಗಿದೆ.

ಜಿಲ್ಲಾದ್ಯಂತ 1153 ಸರ್ಕಾರಿ ಶಾಲೆಗಳು ಸೇರಿದಂತೆ ಅನುದಾನಿತ ಶಾಲೆಗಳು ಪ್ರಾರಂಭವಾಗಲಿಲ್ಲ. ಎಲ್ಲ ಶಾಲೆಯಲ್ಲಿ ಈಗಾಗಲೇ ಕೊಠಡಿ ಸ್ವಚ್ಛ ಮಾಡಿಕೊಂಡು ಬಿಸಿಯೂಟ ತಯಾರಕರು ಬಾಂಡೆ ತೊಳೆದುಕೊಂಡು ಸಿದ್ಧವಾಗಿದ್ದಾರೆ. ಕೆಲವೊಂದು ಶಾಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಂಡು ಶುಕ್ರವಾರ ಬೆಳಗ್ಗೆ ತಳಿರು, ತೋರಣ ಕಟ್ಟಿ ಸ್ವಾಗತಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾಲೆಗಳಲ್ಲಿ ಕುಡಿವ ನೀರಿನ ವ್ಯವಸ್ಥೆ, ಶೌಚಾಲಯ ಸ್ವಚ್ಛ ಮಾಡಿ, ಮೈದಾನ ಸ್ವಚ್ಛ ಮಾಡಿಸಿಕೊಂಡಿರುವ ಶಿಕ್ಷಕರು ಮಕ್ಕಳ ಬರುವಿಕೆಗಾಗಿ ಕಾಯಲಿದ್ದಾರೆ.

ಸರ್ಕಾರಿ ಶಾಲೆ ಜಾಗೃತಿ: ಇದೇ ಮೊದಲ ಬಾರಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕುರಿತು ಜಾಗೃತಿ ಮೂಡಿಸಲಾಗಿದೆ. ಕೆಲವೊಂದು ಸರ್ಕಾರಿ ಶಾಲೆಯವರು ಖಾಸಗಿ ಶಾಲೆಗಳಂತೆ ಬ್ಯಾನರ್ ಹಾಕಿ, ಬನ್ನಿ ಮಕ್ಕಳೇ ನಮ್ಮ ಶಾಲೆಗೆ ಎಂದೆಲ್ಲ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಶಾಲೆಯ ಫಲಿತಾಂಶ ಬ್ಯಾನರ್ ನಲ್ಲಿ ಪ್ರಕಟಿಸಿ ಶಾಲೆಯಲ್ಲಿರುವ ಸೌಲಭ್ಯ ಹೇಳಿಕೊಂಡು, ಕೂಡಲೇ ಪ್ರವೇಶ ಪಡೆಯುವಂತೆ ಮನವಿ ಮಾಡಿದ್ದಾರೆ.

ಪುಸ್ತಕ ವಿತರಣೆ: ಸರ್ಕಾರಿ ಶಾಲೆಗಳಿಗೆ ಈಗಾಗಲೇ ಪುಸ್ತಕ ಬಂದಿದ್ದು, ಅವುಗಳನ್ನು ಸಹ ಕೆಲವೊಂದು ವಿತರಣೆ ಮಾಡಲಾಗಿದೆ. ಇನ್ನು ಒಂದಿಷ್ಟು ಬರಬೇಕಾಗಿದ್ದು, ಅವುಗಳನ್ನು ಸಹ ಕೆಲವೇ ದಿನಗಳಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪೋಷಕರ ಸಭೆ: ಶಾಲೆ ಪ್ರಾರಂಭವಾಗಿ ಎರಡು ದಿನಗಳ ನಂತರ ಜೂ.1ರಂದು ಪೋಷಕರು ಮತ್ತು ಎಸ್ ಡಿಎಂಸಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಕ್ಕಳನ್ನು ನಿತ್ಯವೂ ಶಾಲೆಗೆ ಕಳುಹಿಸುವುದು ಸೇರಿದಂತೆ ಮಕ್ಕಳ ಸುರಕ್ಷತೆಯ ಕುರಿತು ಚರ್ಚೆ ಮಾಡಲಾಗುತ್ತದೆ. ಕಳೆದ ವರ್ಷದ ಫಲಿತಾಂಶ ಹಾಗೂ ಸುಧಾರಣೆಯ ಬಗ್ಗೆಯೂ ಚರ್ಚಿಸಲು ಈಗಾಗಲೇ ಸೂಕ್ತ ನಿರ್ದೇಶ ನೀಡಲಾಗಿದೆ.

ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಆಯಾ ಶಾಲೆಯ ಶಿಕ್ಷಕರು ಮತ್ತು ಬಿಸಿಯೂಟ ಸಿಬ್ಬಂದಿ ಸಕಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಜೂ.1ರಂದು ಪೋಷಕರ ಸಭೆ ನಡೆಸಲಿದ್ದಾರೆ ಎಂದು ಕೊಪ್ಪಳ ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ