ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಹೆರಗನಹಳ್ಳಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ 990 ಲಕ್ಷ ರು. ವೆಚ್ಚದಲ್ಲಿ ಪೂರ್ಣಗೊಂಡಿರುವ ಏತನೀರಾವರಿ ಯೋಜನೆ ಪಂಪುಗಳ ಮೂಲಕ ನೀರೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕದಬಹಳ್ಳಿ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಕೊನೆ ಭಾಗವಾಗಿರುವುದರಿಂದ ಸಂಪೂರ್ಣ ಹೇಮಾವತಿ ಜಲಾಶಯದ ನೀರನ್ನು ಹರಿಸಿ ಬೆಳೆಗಳಿಗೆ ಒದಗಿಸಲು ತೊಂದರೆಯಾಗುತ್ತದೆ. ನಾಲೆಗಳು ಆಧುನೀಕರಣವಾದಂತೆ ಮುಂದಿನ ನಾಲ್ಕೈದು ವರ್ಷದಲ್ಲಿ ಕನಿಷ್ಠ ಒಂದು ಬೆಳೆಗಾದರೂ ನೀರು ಸಿಗಬಹುದು ಎಂದರು.ಈ ಹಿಂದೆ ಸಚಿವನಾಗಿದ್ದ ವೇಳೆ ಹೆರಗನಹಳ್ಳಿ ಸಮೀಪದ ಎನ್‌ಬಿಸಿ ಕಾಲುವೆಯ ಎಡಭಾಗದ ಅಚ್ಚುಕಟ್ಟಿಗೆ ಮಾತ್ರ ಅವಕಾಶವಿತ್ತು. ಬಲಭಾಗಕ್ಕೂ ಅವಕಾಶ ಕಲ್ಪಿಸುವ ಸಲುವಾಗಿ ವಿಶೇಷ ಮಂಜೂರಾತಿ ಕೊಡಿಸಿ ಈ ಭಾಗದ ಕೆರೆಗಳಿಗೂ ನೀರು ತುಂಬಿಸಲು 990 ಲಕ್ಷ ರು. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದಾಗಿ ಹೆರಗನಹಳ್ಳಿ ಸೇರಿದಂತೆ ಬಾಳೆಕಟ್ಟೆ, ಹಳ್ಳದಕಟ್ಟೆ, ಚೋಳೇನಹಳ್ಳಿ ಕಟ್ಟೆ, ನಾಗತಿಹಳ್ಳಿ ಕಟ್ಟೆ, ಕದಬಹಳ್ಳಿಯ ಸಂತೆಕಟ್ಟೆ, ಚನ್ನಮ್ಮನಕೆರೆ, ಅವ್ವೇರಹಳ್ಳಿ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಲಿದೆ ಎಂದರು.
ಸ್ವಾತಂತ್ರ್ಯ ನಂತರದಲ್ಲಿ ಕೆ.ಆರ್.ಪೇಟೆ ಮೂಲಕ ತಾಲೂಕಿಗೆ ಹರಿದು ಬರುವ ಹೇಮಾವತಿ ಜಲಾಶಯದ ನೀರಿನಿಂದಾಗಿ ಹೊಣಕೆರೆ, ಕಸಬಾ ಮತ್ತು ದೇವಲಾಪುರ ಹೋಬಳಿಯ ಕೆಲ ಅಚ್ಚುಕಟ್ಟು ಪ್ರದೇಶಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಿದೆ. ತುಮಕೂರು ಮಾರ್ಗದ ಕಾಲುವೆಯಿಂದ ಎನ್‌ಬಿಸಿ ಮಾಡಿ ತುರುವೆಕೆರೆಯಿಂದ ಪ್ರಾರಂಭವಾಗಿ ಬೆಳ್ಳೂರು ಹೋಬಳಿಯ ಬಹುತೇಕ ಭಾಗ, ಬಿಂಡಿಗನವಿಲೆ, ಕಸಬಾ ಮತ್ತು ದೇವಲಾಪುರ ಹೋಬಳಿಯ ಕೆಲ ಭಾಗಗಳಿಗೆ ಅನುಕೂಲವಾಗಿದೆ ಎಂದರು.
ಈ ವೇಳೆ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ, ಮನ್ಮುಲ್ ನಿರ್ದೇಶಕರಾದ ಎನ್.ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ಸಣ್ಣ ನೀರಾವರಿ ಇಲಾಖೆಯ ಇಇ ಶಂಕರ್, ಎಇಇ ನಿರ್ಮಲೇಶ್, ಹೇಮಾವತಿ ಇಲಾಖೆಯ ಎಇಇ ರಾಜೇಗೌಡ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಸಮಾಜ ಸೇವಕ ಜವರನಹಳ್ಳಿ ಗೌರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಎನ್.ಟಿ.ಕೃಷ್ಣಮೂರ್ತಿ, ಬಿ.ರಾಜೇಗೌಡ, ದೊರೆಸ್ವಾಮಿ, ಎನ್.ಕೆ.ವಸಂತಮಣಿ, ಗೀತಾದಾಸೇಗೌಡ ಸೇರಿದಂತೆ ಹಲವರು ಇದ್ದರು.