ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : Jun 10, 2024, 12:31 AM IST
ತರೀಕೆರೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ | Kannada Prabha

ಸಾರಾಂಶ

ತರೀಕೆರೆ, ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ಶನಿವಾರ ಸ್ಟೂಡೆಂಟ್ಸ್ ಇಸ್ಲಾಮಿಕ್ ಫೆಡರೇಶನ್ ಅಫ್ ಇಂಡಿಯಾ, ಬೋರ್ಡ್ ಅಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ, ತರೀಕೆರೆ ಶಾಖೆಯಿಂದ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಯೂನಿಫಾರಂ, ಪಠ್ಯಪುಸ್ತಕ, ಊಟ ಇತ್ಯಾದಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ, ಪ್ರತಿಭಾ ಪುರಸ್ಕಾರ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕಾರ್ಯಕ್ರಮವಾಗಿದೆ. ಇದು ಬಹಳ ಒಳ್ಳೆಯ ಕಾರ್ಯಕ್ರಮ. ಶಿಕ್ಷಕರ ಪರಿಶ್ರಮದಿಂದ ಶಾಲೆಗಳು ಅಭಿವೃದ್ಧಿಯಾಗುತ್ತದೆ.ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ತಾವು ಕ್ರಮವಹಿಸುವುದಾಗಿ ತಿಳಿಸಿದರು.ಕರ್ನಾಟಕ ಜಮಾಅತೆ ಇಸ್ಲಾಮಿ ಹಿಂದ್ ನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಆಲಿ ಮಾತನಾಡಿ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಉತ್ತಮ ಚಾರಿತ್ರ್ಯಹೇಳಿಕೊಡಬೇಕು. ವಿದ್ಯಾರ್ಥಿಗಳು ದೇಶದ ಒಳ್ಳೆಯ ಪ್ರಜೆ ಗಳಾಗಬೇಕು. ತಂದೆ-ತಾಯಿಗೆ ಒಳ್ಳೆಯ ಮಗನಾಗಬೇಕು. ಜೀವನಕ್ಕಾಗಿ ಓದಬೇಕು. ದೇಶಕ್ಕಾಗಿ ಓದಬೇಕು. ವಿದ್ಯಾರ್ಥಿಗಳು ಆತ್ಮಸ್ಥ್ಯೈರ್ಯ ಬೆಳೆಸಿಕೊಂಡು, ಶಿಕ್ಷಿತರಾಗಬೇಕು. ಹೃದಯ ಶುದ್ಧ ವಾಗಿಟ್ಟುಕೊಂಡು ಸಂಬಂಧಗಳನ್ನು ಬೆಸೆಯಬೇಕು ಎಂದು ಸಲಹೆ ನೀಡಿದರು.ಬೋರ್ಡ್ ಅಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹಮದ್ ರೋಣ್ ಮಾತನಾಡಿದರು.ಜಮಾ ಅತೆ ಇಸ್ಲಾಮಿ ಹಿಂದ್ ತರೀಕೆರೆ ಶಾಖೆ ಅಧ್ಯಕ್ಷ ಶೇಖ್ ಜಾವಿದ್, ಪುರಸಭೆ ಮಾಜಿ ಸದಸ್ಯ ಆದಿಲ್ ಪಾಷ, ತರೀಕೆರೆ ಎಸ್.ಐ.ಒ.ಅಧ್ಯಕ್ಷ ಮುಹಮದ್ ಅಸದ್, ಜಮಾಅತೆ ಇಸ್ಲಾಮಿ ಹಿಂದ್ ನ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕ ಶಾಹಿದಾ ಬೇಗಂ, ತರೀಕೆರೆ ಮಹಿಳಾ ವಿಭಾಗದ ಅಧ್ಯಕ್ಷ ದಿಲ್ಶಾದ್ ಬೇಗಮ್, ಅಫೀಫಾ ನಯಿಂ ಭಾಗವಹಿಸಿದ್ದರು.ಎಸ್ಎಸ್ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಪುರಸಭೆ ಮಾಜಿ ಸದಸ್ಯ ಅದಿಲ್ ಪಾಷ ಸ್ವಾಗತಿಸಿ ನಿರೂಪಿಸಿದರು. ಶೇಕ್ ಜಾವಿದ್ ವಂದಿಸಿದರು.

--

9ಕೆಟಿಆರ್.1ಃ

ತರೀಕೆರೆಯಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಫೆಡರೇಶನ್ ಆಫ್ ಇಂಡಿಯಾ, ಬೋರ್ಡ್ ಅಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ, ತರೀಕೆರೆ ಶಾಖೆಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿತ್ತು. ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ