ಹಾಲು ಒಕ್ಕೂಟ ಸಭೆಯಲ್ಲಿ ಸಹಿ ಫೋರ್ಜರಿ ಆರೋಪ: ದೂರು

KannadaprabhaNewsNetwork |  
Published : Oct 17, 2024, 12:54 AM IST
ಫೋಟೋ 16ಪಿವಿಡಿ2ಪಾವಗಡ,ತಾಲೂಕಿನ ಕ್ಯಾತಗಾನಹಳ್ಳಿ ಹಾಲು ಉತ್ಪಾಧಕ ಸಂಘದ ಡಿಲಿಗೇಷನ್‌ ಸಭೆಯಲ್ಲಿ ನನ್ನ ಹೆಸರು ಪೊರ್ಜರಿ ಮಾಡಲಾಗಿದೆ.ರದ್ದುಪಡಿಸುವಂತೆ ಸಂಘದ ನಿರ್ದೇಶಕ ವೀರಕ್ಯಾತರಾಯಪ್ಪ ಜಿಲ್ಲಾ ಸಹಕಾರ ಸಂಘಗಳ ಉಪನಿರ್ದೇಶಕರಿಗೆ ದೂರು ಸಲ್ಲಿಸಿದರು.           | Kannada Prabha

ಸಾರಾಂಶ

ನನ್ನ ಹೆಸರನ್ನು ಪೊರ್ಜರಿ ಸಹಿ ಮಾಡಿ ಅಕ್ರಮವೆಸಗಿದ್ದಾರೆ. ಪರಿಶೀಲಿಸಿ ಮತದಾರರ ಪಟ್ಟಿಯಿಂದ ಕೈಬಿಡುವಂತೆ ತಾಲೂಕಿನ ಕ್ಯಾತಗಾನಹಳ್ಳಿ ಹಾಲು ಉತ್ಪಾದಕರ ಸಂಘದ ನಿರ್ದೇಶಕ ವೀರಕ್ಯಾತರಾಯಪ್ಪ ಬುಧವಾರ ಜಿಲ್ಲಾಧಿಕಾರಿಯ ಕಚೇರಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಕಚೇರಿಯ ಅಧಿಕಾರಿಗೆ ದೂರು ಸಲ್ಲಿಸಿದರು.

ಪಾವಗಡ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ವೀರಕ್ಯಾತರಾಯಪ್ಪ ಹೇಳಿಕೆ । ನಿರ್ದೇಶಕರ ಆಯ್ಕೆ ಸಭೆಗೆ ಇಲ್ಲದಿದ್ದರೂ ನಕಲಿ ರುಜು

ಕನ್ನಡಪ್ರಭ ವಾರ್ತೆ ಪಾವಗಡ

ಡಿಲಿಗೇಷನ್‌ ನಿರ್ಣಯದ ಸಭೆಗೆ ಹಾಜರಾಗಿರಲಿಲ್ಲ. ರೆಜುಲೇಷನ್‌ ಪುಸ್ತಕದಲ್ಲಿ ನನ್ನ ಹೆಸರನ್ನು ಪೊರ್ಜರಿ ಸಹಿ ಮಾಡಿ ಅಕ್ರಮವೆಸಗಿದ್ದಾರೆ. ಪರಿಶೀಲಿಸಿ ಮತದಾರರ ಪಟ್ಟಿಯಿಂದ ಕೈಬಿಡುವಂತೆ ತಾಲೂಕಿನ ಕ್ಯಾತಗಾನಹಳ್ಳಿ ಹಾಲು ಉತ್ಪಾದಕರ ಸಂಘದ ನಿರ್ದೇಶಕ ವೀರಕ್ಯಾತರಾಯಪ್ಪ ಬುಧವಾರ ಜಿಲ್ಲಾಧಿಕಾರಿಯ ಕಚೇರಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಕಚೇರಿಯ ಅಧಿಕಾರಿಗೆ ದೂರು ಸಲ್ಲಿಸಿದರು.

ಈ ವೇಳೆ ಮಾತನಾಡಿ, ಪ್ರಸಕ್ತ ಸಾಲಿನ ನ.10ಕ್ಕೆ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನದ ಆಯ್ಕೆಗೆ ಚುನಾವಣೆ ಆಯೋಗದಿಂದ ಗಡವು ವಿಧಿಸಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 60ಕ್ಕಿಂತ ಹೆಚ್ಚು ಹಾಲು ಉತ್ಪಾಧಕ ಸಂಘಗಳಲ್ಲಿ ಡಿಲಿಗೇಷನ್‌ ಪ್ರಕ್ರಿಯೆ ಆರಂಭಗೊಂಡಿವೆ. ಈ ಸ್ಥಳೀಯ ಹಾಲು ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕರೆಲ್ಲಾ ಸೇರಿ ಸಭೆ ನಡೆಸಿ ನಿರ್ಣಯಿಸುವ ಮೂಲಕ ಅನುಭವ ಹೊಂದಿದ ಡೇರಿಯ ಒಬ್ಬ ನಿರ್ದೇಶಕರಿಗೆ ಮಾತ್ರ ಮತದಾನದ ಹಕ್ಕು ನೀಡಿ ಸಭೆಯ ನಡಾವಳಿ ಪುಸ್ತಕದಲ್ಲಿ ದಾಖಲೆ ಮಾಡುತ್ತಾರೆ. ಈ ಸಭೆಯಲ್ಲಿ ಆಯ್ಕೆಯಾದ ವ್ಯಕ್ತಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನದ ಅಭ್ಯರ್ಥಿ ಪರ ಮತದಾನ ಮಾಡಲು ಆರ್ಹತೆ ಹೊಂದಿರುತ್ತಾರೆ. ಈ ಹಿನ್ನಲೆಯಲ್ಲಿ ತಾಲೂಕಿನಧ್ಯಾಂತ ಸ್ಥಳೀಯ ಹಾಲು ಉತ್ಪಾಧಕ ಸಹಕಾರಿ ಸಂಘದ ನಿರ್ದೇಶಕರ ಸಭೆಯ ಡಿಲಿಗೇಷನ್‌ ಪ್ರಕ್ರಿಯೆಗಳು (ಸಭೆ ನಿರ್ಣಯ) ಬಿರಿಸಿನಿಂದ ಸಾಗುತ್ತಿವೆ ಎಂದು ಹೇಳಿದರು.

ಅ,12ರಂದು ತಾಲೂಕಿನ ಕ್ಯಾತನಹಳ್ಳಿಯ ಹಾಲು ಉತ್ಫಾದಕ ಸಂಘದಲ್ಲಿ ಡಿಲಿಗೇಷನ್‌ ಆಯ್ಕೆಯ ಪ್ರಕ್ರಿಯೆ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಂಘದ ನಿರ್ದೇಶಕರಾದ ವೀರಕ್ಯಾತರಾಯಪ್ಪ ಸಭೆಗೆ ಹಾಜರಾಗಿರಲಿಲ್ಲ. ಆದರೂ ಸಂಘದ ಕಾರ್ಯದರ್ಶಿ ಹಾಗೂ ಕೆಲ ಸ್ಥಳೀಯ ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಸೇರಿ ಡಿಲಿಗೇಷನ್‌ ಸಭೆಗೆ ಹಾಜರಾಗಿರುವಂತೆ ನನ್ನ ಹೆಸರನ್ನು ನಕಲಿ ಸಹಿ ಮಾಡಿ ಸಭೆಯ ನಡಾವಳಿ ಪುಸ್ತಕದಲ್ಲಿ ನಮೂದಿಸಿದ್ದಾರೆ. ಇಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರ ಸಭೆಯ ಡಿಲಿಗೇಷನ್ ಪುಸ್ತಕ ಪೊರ್ಜರಿಯ ಸಹಿ ಪರಿಶೀಲಿಸಿ ಚುನಾವಣೆಯ ಮತದಾನದ ಹಕ್ಕು ರದ್ದುಪಡಿಸುವಂತೆ ಜಿಲ್ಲಾ ಸಹಕಾರ ನಿಬಂಧನೆಯ ಕಚೇರಿಯ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.

ತಾಲೂಕಿನ ಜಿಲ್ಲಾ ಹಾಲು ಒಕ್ಕೂಟ ಚುನಾವಣೆಯ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಬೆಳ್ಳಿಬಟ್ಟಲು ಚಂದ್ರಶೇಖರೆಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ