ಸಾಗುವಳಿ ಪತ್ರಕ್ಕಾಗಿ ಆಲುವಳ್ಳಿ ಗ್ರಾಮಸ್ಥರ ಮೊರೆ

KannadaprabhaNewsNetwork |  
Published : Mar 29, 2025, 12:31 AM IST
28ಎಚ್ಎಸ್ಎನ್3  :ಆಲುವಳ್ಳಿ ಗ್ರಾಮಸ್ಥರು ಹಕ್ಕುಪತ್ರ ವಿತರಿಸುವಂತೆ ಶಾಸಕರಲ್ಲಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸಾಗುವಳಿ ಪತ್ರ ನೀಡಿ ಅಥವಾ ಸಾಯಲು ಬಿಡಿ ಇದು ಶಾಸಕ ಸಿಮೆಂಟ್ ಮಂಜು ಎದುರು ಆಲುವಳ್ಳಿ ಗ್ರಾಮಸ್ಥರ ಮನವಿ ಮಾಡಿದರು. ಸಾಗುವಳಿ ಚೀಟಿ ನೀಡುವ ವೇಳೆ ಅರಣ್ಯ ಇಲಾಖೆಯಿಂದ ನಿರಾಪೇಕ್ಷಣ ಪತ್ರ ತರುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ. ಆದರೆ, ಅರಣ್ಯ ಇಲಾಖೆ ಈ ಭೂಮಿ ತಮ್ಮದೆಂದು ಹೇಳುತ್ತಿದೆ. ಸರ್ವೇ ನಡೆಸದೆ ಭೂಮಿ ತಮ್ಮದೆಂದು ಹೇಳುತ್ತಿರುವ ಅರಣ್ಯ ಇಲಾಖೆಯ ಕ್ರಮದಿಂದ ಬೇಸತ್ತಿದ್ದು ಇಲಾಖೆಗೆ ಸುತ್ತಿಸುತ್ತಿ ಸಾಕಾಗಿದೆ. ಆದ್ದರಿಂದ, ಸಭೆಯಲ್ಲೆ ನಮಗೆ ಹಕ್ಕುಪತ್ರ ನೀಡಿ ಅಥವಾ ಸಾಯಲು ಬಿಡಿ ಎಂದು ಶಾಸಕರಿಗೆ ಕೈಮುಗಿದು ಪಟ್ಟು ಹಿಡಿದ ಗ್ರಾಮಸ್ಥರು ಸಮಸ್ಯೆ ಬಗೆಹರಿಸದ ಹೊರತು ಸ್ಥಳದಲ್ಲಿಂದ ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಸಾಗುವಳಿ ಪತ್ರ ನೀಡಿ ಅಥವಾ ಸಾಯಲು ಬಿಡಿ ಇದು ಶಾಸಕ ಸಿಮೆಂಟ್ ಮಂಜು ಎದುರು ಆಲುವಳ್ಳಿ ಗ್ರಾಮಸ್ಥರ ಮನವಿ ಮಾಡಿದರು.

ಗುರುವಾರ ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಡೀಮ್ಡ್ ಅರಣ್ಯ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸರ್ವೇ ಇಲಾಖೆ ಅಧಿಕಾರಿಗಳ ಸಭೆಗೆ ಆಗಮಿಸಿದ ಗ್ರಾಮಸ್ಥರು, ಗ್ರಾಮದ ಸರ್ವೇ ನಂಬರ್ ೪೭ರಲ್ಲಿ ೧೭೩ ಎಕರೆ ಭೂಮಿ ಇದ್ದು, ಇದರಲ್ಲಿ ೧೧೨ ಎಕರೆ ಅರಣ್ಯ ಭೂಮಿ ಮತ್ತು ೬೩ ಎಕರೆ ಕಂದಾಯ ಭೂಮಿ ಇದ್ದು ಕಂದಾಯ ಭೂಮಿಯಲ್ಲಿ ಕಳೆದ ಹಲವು ತಲೆಮಾರುಗಳಿಂದ ಗ್ರಾಮದ ೭ ಕುಟುಂಬಗಳು ೧೫ ಎಕರೆ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿವೆ. ೧೯೯೮ರಲ್ಲಿ ಬಗರ್‌ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು ೨೦೧೮ರಲ್ಲಿ ಭೂಮಿ ಮಂಜೂರು ಮಾಡಲಾಗಿದೆ. ಆದರೆ, ಸಾಗುವಳಿ ಚೀಟಿ ನೀಡುವ ವೇಳೆ ಅರಣ್ಯ ಇಲಾಖೆಯಿಂದ ನಿರಾಪೇಕ್ಷಣ ಪತ್ರ ತರುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ. ಆದರೆ, ಅರಣ್ಯ ಇಲಾಖೆ ಈ ಭೂಮಿ ತಮ್ಮದೆಂದು ಹೇಳುತ್ತಿದೆ. ಸರ್ವೇ ನಡೆಸದೆ ಭೂಮಿ ತಮ್ಮದೆಂದು ಹೇಳುತ್ತಿರುವ ಅರಣ್ಯ ಇಲಾಖೆಯ ಕ್ರಮದಿಂದ ಬೇಸತ್ತಿದ್ದು ಇಲಾಖೆಗೆ ಸುತ್ತಿಸುತ್ತಿ ಸಾಕಾಗಿದೆ. ಆದ್ದರಿಂದ, ಸಭೆಯಲ್ಲೆ ನಮಗೆ ಹಕ್ಕುಪತ್ರ ನೀಡಿ ಅಥವಾ ಸಾಯಲು ಬಿಡಿ ಎಂದು ಶಾಸಕರಿಗೆ ಕೈಮುಗಿದು ಪಟ್ಟು ಹಿಡಿದ ಗ್ರಾಮಸ್ಥರು ಸಮಸ್ಯೆ ಬಗೆಹರಿಸದ ಹೊರತು ಸ್ಥಳದಲ್ಲಿಂದ ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ವಲಯ ಅರಣ್ಯಾಧಿಕಾರಿ ಹೇಮಂತ್‌ ಕುಮಾರ್, ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ವ್ಯಕ್ತಿಗಳೇ ಅರಣ್ಯ ಭೂಮಿಯಲ್ಲಿರುವುದಾಗಿ ಹೇಳಿಕೆ ನೀಡಿದ್ದಾರೆಂದು ವಿವರಣೆ ನೀಡಿದರು. ಇದರಿಂದ ಮತ್ತಷ್ಟು ಆಕ್ರೋಶಭರಿತರಾದ ಗ್ರಾಮಸ್ಥರು ಮರಮಾಲೀಕೆ ಕಟ್ಟಿಸುವುದಕ್ಕಾಗಿ ಬರೆದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಅರಣ್ಯ ಇಲಾಖೆ ವಂಚಿಸಿದೆ ಎಂದು ದೂರಿದರು. ಮಧ್ಯಪ್ರವೇಶಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಮುಂದಿನ ಒಂದು ವಾರದಲ್ಲಿ ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕರೆಸಿ ಸ್ಥಳ ತನಿಖೆ ನಡೆಸಿ ಈಗ ನೀಡಿರುವ ವರದಿಯನ್ನು ಹಿಂಪಡೆದು ತಮಗೆ ಹಕ್ಕುಪತ್ರ ವಿತರಿಸಲಾಗುವುದು ಎಂಬ ಭರವಸೆ ನೀಡಿದ ನಂತರ ಪಟ್ಟು ಸಡಿಲಿಸಿದ ಗ್ರಾಮಸ್ಥರು ಸಭೆಯಿಂದ ಹೊರನಡೆದರು. ಗ್ರಾಮಸ್ಥರಾದ ಪೂರ್ಣೇಶ್, ಚಂದ್ರು, ಅರುಣ್ ಸೇರಿದಂತೆ ಹಲವರಿದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ