ಕನ್ನಡಪ್ರಭ ವಾರ್ತೆ ಸಿಂದಗಿ
ಪಟ್ಟಣದ ಎಚ್.ಜಿ ಪ.ಪೂ ಮಹಾ ವಿದ್ಯಾಲಯದಲ್ಲಿ ಕನ್ನಡಪ್ರಭ ದಿನಪತ್ರಿಕೆ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಪ್ರೌಢ ಶಾಲಾ ಮಕ್ಕಳಿಗೆ ಆಯೋಜಿಸಿರುವ ಕರ್ನಾಟಕದ ಅರಣ್ಯ ಪ್ರದೇಶಗಳು ಮತ್ತು ವನ್ಯ ಜೀವಿಗಳು ವಿಷಯದ ಕುರಿತಾದ ತಾಲೂಕುಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಗು ರೇಖೆಗಳಿಂದಲೇ ಕಲಿಕೆ ಪ್ರಾರಂಭ ಮಾಡುತ್ತಾನೆ. ಸಿಂದಗಿ ತಾಲೂಕು ಈ ನಾಡಿಗೆ ಬಹುದೊಡ್ಡ ಕಲಾವಿದರನ್ನು ನೀಡಿದ ತಾಲೂಕು. ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಈರಣ್ಣ ರುಕೂಂಪೂರ ನಮ್ಮ ಊರಿನವರು ಎನ್ನುವುದು ನಮ್ಮ ಹೆಮ್ಮೆ. ಶಾಲಾ ಕಾಲಾಜುಗಳಲ್ಲಿ ಬೆರಳೆಣಿಕೆಯಷ್ಟೆ ಚಿತ್ರಕಲಾ ಶಿಕ್ಷಕರಿದ್ದಾರೆ. ಸರ್ಕಾರ ಚಿತ್ರಕಲಾ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಕಲೆಯಲ್ಲಿ ಪ್ರೊತ್ಸಾಹಿಸಬೇಕು. ನೈಜ ವರದಿ ಬಿತ್ತರಿಸುವ ಕನ್ನಡಪ್ರಭ ದಿನಪತ್ರಿಕೆ ಮಕ್ಕಳ ದಿನಾಚಾರಣೆ ನಿಮಿತ್ತ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು ಸಂತಸ ತಂದಿದೆ. ಕನ್ನಡಪ್ರಭ ಇನ್ನು ಬೇರೆ ಬೇರೆ ಚಟುವಟಿಕೆ ಮಾಡಲಿ. ನಮ್ಮ ಸಂಸ್ಥೆ ಸದಾ ಸಹಕಾರ ನೀಡುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಮಕ್ಕಳಲ್ಲಿರುವ ಕಲಾತ್ಮಕ ಸ್ವಯಂ ವ್ಯಕ್ತಿತ್ವಕ್ಕಾಗಿ ಕನ್ನಡಪ್ರಭ ಆಯೋಜಿಸಿರುವ ಈ ಕಾರ್ಯ ಶ್ಲಾಘನೀಯ. ಚಿತ್ರಕಲೆ ಇಂದು ವೈಜ್ಞಾನಿಕ ಜಗತ್ತಿನಲ್ಲಿ ಸೊರಗುತ್ತಿದೆ. ಚಿತ್ರಕಲಾ ಸ್ಪರ್ಧೆಗಳು ನಿರಂತರವಾಗಿ ನಡೆಯುವುದರ ಮೂಲಕ ಮಕ್ಕಳ ಸೃಜನಶೀಲತೆ ಪ್ರೋತ್ಸಾಹಿಸಬೇಕು ಎಂದರು.
ಸಿಂದಗಿ ತಾಲೂಕಿನ ವಿವಿಧ ಪ್ರೌಢ ಶಾಲೆಗಳ ಸುಮಾರು 80ಕ್ಕೂ ಅಧಿಕ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚಿತ್ರಕಲಾ ಸ್ಪರ್ಧೆಯ ನಿರ್ಣಾಯಕರಾಗಿ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರಾದ ವೈ.ಕೆ.ಚೊರಗಸ್ತಿ, ಮೀನಾಕ್ಷಿ ವಾಗ್ಮೋರೆ, ಎಸ್.ಎಸ್.ಗುಣಾರಿ, ನರೇಂದ್ರರೆ ಬಿನಾಳ, ರಜಪೂತ ಕಾರ್ಯ ನಿರ್ವಹಿಸಿದರು.
ಸಿಂದಗಿ ತಾಲೂಕಿನ ವಿವಿಧ ಶಾಲೆಗಳ ಸುಮಾರು 80ಕ್ಕೂ ಅಧಿಕ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರಲ್ಲಿ ಕೆಲವರ ಚಿತ್ರಗಳು ಅತ್ಯಂತ ವಿಶಿಷ್ಟತೆಯಿಂದ ಕೂಡಿತ್ತು. ನಿರ್ಣಾಯಕರೆ ಬೇರಗಾಗುವ ಚಿತ್ರಗಳು ಅಲ್ಲಿ ಕಂಡು ಬಂದವು.
8ನೇ ತರಗತಿ ವಿಭಾಗದಲ್ಲಿ ಗಣಿಹಾರ ಗ್ರಾಮದ ಸರ್ಕಾರಿ ಎಂ.ಪಿ.ಎಸ್ ಶಾಲೆ ವಿದ್ಯಾರ್ಥಿನಿ ಸಮಿನಾ ಪ್ರಥಮ, ಭಂಟನೂರ ಗ್ರಾಮದ ಹೀರಾಮಾತಾ ಪ್ರೌಢ ಶಾಲೆ ತನುಶ್ರೀ ಚವ್ಹಾಣ ದ್ವಿತೀಯ, ಸಿಂದಗಿ ಜ್ಞಾನ ಭಾರತಿ ಶಾಲೆಯ ನವೀನ ಸ್ವಾಮಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
10ನೇ ತರಗತಿ ವಿಭಾಗದಲ್ಲಿ ಸಿಂದಗಿಯ ಪೂಜ್ಯ ಶ್ರೀ ಚೆನ್ನವೀರ ಸ್ವಾಮಿಜಿ ಪ್ರೌಢ ಶಾಲೆಯ ವಿಕಾಶ ಪತ್ತಾರ ಪ್ರಥಮ, ಪ್ರೇರಣಾ ಪಬ್ಲಿಕ ಶಾಲೆಯ ಶ್ರೇಯಾ ಅಗಸರ, ಭಂಟನೂರ ಹೀರಾಮಾತಾ ಶಾಲೆಯ ಸಮೀರ ಬಾಗವಾನ ತೃತೀಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವೇಳೆ ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಕೊಡಮಾಡುವ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಚಿತ್ರಕಲಾ ಸ್ಪರ್ಧೆಗೆ ಸಹಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಮತ್ತು ನಿರ್ಣಾಯಕರಾಗಿ ಆಗಮಿಸಿದ ಚಿತ್ರಕಲಾ ಶಿಕ್ಷಕರಾದ ವೈ.ಕೆ.ಚೊರಗಸ್ತಿ, ಮೀನಾಕ್ಷಿ ವಾಗ್ಮೋರೆ, ಎಸ್.ಎಸ್.ಗುಣಾರಿ, ನರೇಂದ್ರ ರೆಬಿನಾಳ, ರಜಪೂತ, ಶರಣಪ್ಪ ಕೇಸರಿ ಅವರನ್ನು ಕನ್ನಡಪ್ರಭ ವರದಿಗಾರ ಸಿದ್ದಲಿಂಗ ಕಿಣಗಿಗೆ ಅಭಿನಂದನೆ ಸಲ್ಲಿಸಿದರು.
ಕಲೆ ಯಾರ ಸೊತ್ತು ಅಲ್ಲ ಮತ್ತು ಕಲೆಯನ್ನು ಯಾರು ಕಸಿದು ಕೊಳ್ಳಲು ಸಾಧ್ಯವಿಲ್ಲ. ಮಕ್ಕಳಿಗೆ ಹಿಂತಾ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಕನ್ನಡ ಪ್ರಭ ಮತ್ತು ಸುವರ್ಣ ಟಿ.ವಿ ಸದಾ ಸಮಾಜಮುಖಿ ಕಾರ್ಯ ಮಾಡುತ್ತಲೆ ಬರುತ್ತಿದೆ. ಸಾಧಕರನ್ನು, ಉದ್ಯಮಿಗಳನ್ನು, ರೈತರನ್ನು, ಆದರ್ಶ ಮಹಿಳೆಯರನ್ನು, ಅಭಿಯಂತರರ ಸೇವೆ ಗುರುತಿಸಿ ಅವರಿಗೆ ಗೌರವಿಸುವ ಕಾರ್ಯ ಮಾಡುವ ಮಧ್ಯದಲ್ಲಿ ಇಂದು ಮಕ್ಕಳಿಗೆ ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿದ್ದು ದೊಡ್ಡ ವಿಚಾರವಾಗಿದೆ. ಮಹಾಂತೇಶ ಯಡ್ರಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿಂದಗಿ
ನಾವು ಕೇವಲ ಶಾಲಾ ಮಟ್ಟದಲ್ಲಿ ಮಾತ್ರ ಚಿತ್ರಕಲೆ ಬಿಡಿಸುತ್ತಿದ್ದೇವು ಆದರೆ ಇಂದು ಕನ್ನಡಪ್ರಭ ನಮಗಾಗಿ ಈ ಕಾರ್ಯ ಆಯೋಜನೆ ಮಾಡಿ ನಮಗೆ ಭಾಗವಹಿಸಲು ಅವಕಾಶ ನೀಡಿದೆ. ಇದರಿಂದ ನಮ್ಮ ಖುಷಿಗೆ ಪಾರವೇ ಇಲ್ಲದಂತಾಗಿದೆ. ವಿಕಾಶ ಪತ್ತಾರ, 10 ನೇ ತರಗತಿ ವಿದ್ಯಾರ್ಥಿ ಪೂಜ್ಯ ಶ್ರೀ ಚೆನ್ನವೀರ ಸ್ವಾಮಿಜಿ ಪ್ರೌಢ ಶಾಲೆ ಸಿಂದಗಿ