ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಳಕೇರಿ ಗ್ರಾಮದ ಕುಂಡ್ಯೋಳಂಡ ಮನೆಯ ಮುಖ್ಯಸ್ಥರ ಕೋರಿಕೆ ಮೇರೆಗೆ ಶನಿವಾರ ಸಂಜೆ ಕುಂಡ್ಯೋಳಂಡ ಐನ್ ಮನೆಯಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ಕುಟುಂಬಸ್ಥರ ಆತಿಥ್ಯ ಸ್ವೀಕರಿಸಿ ಮಾತನಾಡಿದರು.
ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ವಿಭಿನ್ನವಾಗಿದೆ. ಅದರೊಂದಿಗೆ ಹಾಕಿ ಕ್ರೀಡೆಯು ಮಹತ್ವವನ್ನು ಹೊಂದಿದೆ. ಮುಂದಿನ ಸಾಲಿನಲ್ಲಿ ನಡೆಯುವ ಹಾಕಿ ಉತ್ಸವದ ಯಶಸ್ವಿಗೆ ಸಕಲ ಸಹಕಾರ ನೀಡುವುದಾಗಿ ತಿಳಿಸಿದರು.2024ರಲ್ಲಿ ಜರುಗಿದ ಕುಂಡ್ಯೋಳಂಡ ಕಪ್ ಹಾಕಿ ನಮ್ಮೆ ಅಭೂತಪೂರ್ವ ಯಶಸ್ಸು ಕಂಡಿತ್ತು. ಈ ಯಶಸ್ಸಿನ ಹಿಂದೆ ಶಾಸಕ ಪೊನ್ನಣ್ಣ ಅವರ ಕೊಡುಗೆ ಬಹು ದೊಡ್ಡದು. ಕುಂಡ್ಯೋಳಂಡ ಕುಟುಂಬಸ್ಥರ ಕೋರಿಕೆ ಮೇರೆಗೆ ಶಾಸಕರು ಈ ಹಾಕಿ ಪಂದ್ಯಾಟಕ್ಕೆ ವಿಶೇಷ ಅನುದಾನ ಒದಗಿಸುವಲ್ಲಿ ಶ್ರಮಿಸಿದರು. ಶಾಸಕರ ಈ ಪ್ರಯತ್ನಕ್ಕೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಲು ಕುಂಡ್ಯೋಳಂಡ ಕುಟುಂಬಸ್ಥರು ಈ ವಿಶೇಷ ಔತಣ ಕೂಟವನ್ನು ಆಯೋಜಿಸಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು.