ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾ ಗಂಗಾಮತಸ್ಥರ (ಬೆಸ್ತರ) ಸಂಘ ಹಾಗೂ ಹಳೇಪೇಟೆಯ ಶ್ರೀ ಗಂಗಾ ಪರಮೇಶ್ವರಿ ಜಯಂತ್ಯುತ್ಸವ ಸಮಿತಿ ಹಮ್ಮಿಕೊಂಡಿದ್ದ ಶ್ರೀ ಗಂಗಾ ಪರಮೇಶ್ವರಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದುಡಿಮೆಯಲ್ಲಿ ಕಠಿಣ ಪರಿಶ್ರಮ- ಪ್ರಾಮಾಣಿಕತೆ ಇದ್ದರೆ ಯಶಸ್ಸು ಸಾಧ್ಯ. ಗಂಗಾ ಮಾತೆಯನ್ನು ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಯುವಶಕ್ತಿಯನ್ನು ಪ್ರೋತ್ಸಾಹಿಸಿ, ನಾಯಕತ್ವ ಬೆಳೆಸಲು ಸಹಕಾರ ನೀಡುವ ಅವಶ್ಯಕತೆ ಇದೆ. ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಪ್ರಬಲರಾಗಬೇಕು. ಆಗ ಮಾತ್ರ ಮುನ್ನೆಲೆಗೆ ಬರಲು ಸಾಧ್ಯ. ಮಾನವೀಯ ಮೌಲ್ಯ ಕ್ಷೀಣಿಸುಲ ಕಾಲದಲ್ಲಿ ಧಾರ್ಮಿಕ ಜಾಗೃತಿಯ ಅಗತ್ಯವಿದೆ. ಸಂತೃಪ್ತ, ಸಮೃದ್ಧ ಬುದುಕಿಗೆ ನಿಜವಾದ ಧರ್ಮಾಚರಣೆ ಮುಖ್ಯ. ಈ ನಿಟ್ಟಿನಲ್ಲಿ ಶ್ರೀ ಗಂಗಾ ಪರಮೇಶ್ವರಿ ಜಯಂತ್ಯುತ್ಸವ ಮಾದರಿ ಕಾರ್ಯವಾಗಿದೆ ಎಂದು ಸಂಸದರು ಹೇಳಿದರು.ಸಂಘದ ಜಿಲ್ಲಾಧ್ಯಕ್ಷ ಮಾಗಾನಹಳ್ಳಿ ಬಿ.ಕೆ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಮೇಶ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷ ಲಿಂಗರಾಜು ಹಾವನೂರು, ಗಂಗಾಮತ ನೌಕರ ಸಂಘದ ಅಧ್ಯಕ್ಷ ಮಹಾಂತೇಶ ನಿಟ್ಟೂರು, ಸಂಘದ ಪದಾಧಿಕಾರಿಗಳು, ಮುಖಂಡರು, ಸಮಾಜ ಬಾಂಧವರು, ಮಹಿಳೆಯರು ಪಾಲ್ಗೊಂಡಿದ್ದರು.
- - --20ಕೆಡಿವಿಜಿ6: ಶ್ರೀ ಗಂಗಾಪರಮೇಶ್ವರಿ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು.