ಸ್ಫೂರ್ತಿಯ ಚಿಲುಮೆಯಾಗಿದ್ದ ಆನಂದ ರಾಜ್‌: ಅಮ್ಜದ್

KannadaprabhaNewsNetwork | Published : Oct 7, 2024 1:36 AM

ಸಾರಾಂಶ

ಯಾರೇ ಅಗಲಿ ತಪ್ಪು ಮಾಡಿದ್ದರೆ ಅತ್ಯಂತ ಶಿಸ್ತಿನ ಮೂಲಕ ಕಠೋರ ಮಾತಿನಿಂದ ಖಂಡಿಸುತ್ತಿದ್ದ ವ್ಯಕ್ತಿತ್ವ ಕಾರ್ಮಿಕ ಮುಖಂಡ ದಿವಂಗತ ಆನಂದ ರಾಜ್ ಅವರದ್ದಾಗಿತ್ತು ಎಂದು ಸಿಪಿಐ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಅಮ್ಜದ್ ಹೇಳಿದ್ದಾರೆ.

- ಕಾರ್ಮಿಕ ಮುಖಂಡ ದಿ. ಆನಂದರಾಜ್ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾರೇ ಅಗಲಿ ತಪ್ಪು ಮಾಡಿದ್ದರೆ ಅತ್ಯಂತ ಶಿಸ್ತಿನ ಮೂಲಕ ಕಠೋರ ಮಾತಿನಿಂದ ಖಂಡಿಸುತ್ತಿದ್ದ ವ್ಯಕ್ತಿತ್ವ ಕಾರ್ಮಿಕ ಮುಖಂಡ ದಿವಂಗತ ಆನಂದ ರಾಜ್ ಅವರದ್ದಾಗಿತ್ತು ಎಂದು ಸಿಪಿಐ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಅಮ್ಜದ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಭಾರತೀಯ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ ದಾವಣಗೆರೆ ಜಿಲ್ಲಾ ಮಂಡಳಿ ಸಹಯೋಗದಲ್ಲಿ ನಡೆದ ಹಿರಿಯ ಕಾರ್ಮಿಕ ಮುಖಂಡರೂ, ಸಿಪಿಐ, ಎಐಟಿಯುಸಿ ಜಿಲ್ಲಾ ಮಂಡಳಿ ಖಜಾಂಚಿಯಾಗಿದ್ದ ದಿವಂಗತ ಆನಂದ ರಾಜ್ ಸ್ಮರಣಾರ್ಥ ಆಯೋಜಿಸಲಾಗಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಬಳಿಕ ಅವರು ಮಾತನಾಡಿದರು.

ಆನಂದ ರಾಜ್ ಸ್ಫೂರ್ತಿಯ ಚಿಲುಮೆಯಾಗಿದ್ದರು. ಇಡೀ ಜಿಲ್ಲೆ ಕಾರ್ಮಿಕರ ಚಳವಳಿಗೆ ಸ್ಫೂರ್ತಿ ನೀಡುತ್ತಿದ್ದರಲ್ಲದೇ ಯಾವುದೇ ಮಾತನ್ನು ನಿಷ್ಠುರವಾಗಿ ಹೇಳುತ್ತಿದ್ದ ನಿಷ್ಠೂರವಾದಿ, ಸ್ನೇಹಜೀವಿ. ಉತ್ತಮ ಮಾರ್ಗದರ್ಶನ ನೀಡುತ್ತಿದ್ದ ಧೀಮಂತ ನಾಯಕರಾಗಿದ್ದರು. ಹುಟ್ಟು-ಸಾವು ಜೈವಿಕ ಸಹಜ ಕ್ರಿಯೆ. ಆದರೆ ನಮ್ಮ ಬದುಕಿನ ನಡುವೆ ಬಿಟ್ಟು ಹೋಗುವ ಹೆಜ್ಜೆ ಗುರುತುಗಳು ನಮ್ಮನ್ನು ಸದಾ ನೆನಪಿನಲ್ಲಿ ಇಡುತ್ತವೆ ಎಂದು ಸ್ಮರಿಸಿದರು.

ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ ಮಾತನಾಡಿ, ಯಾವುದೇ ಅಧಿಕಾರ, ಸ್ಥಾನಮಾನ ಇಲ್ಲದೇ ಇದ್ದಾಗಲೂ ಜನರಿಂದ ಪ್ರೀತಿ ಗಳಿಸಿದ ವ್ಯಕ್ತಿ ಆನಂದರಾಜ್. ಕೆಲವರು ಜೀವಂತವಿದ್ದಾಗಲೇ ಏನನ್ನೂ ಸಾಧನೆ ಮಾಡದೇ ಸತ್ತವರಂತೆ ಇರುತ್ತಾರೆ. ಆದರೆ, ಇಂದು ಆನಂದ ರಾಜ್ ನಮ್ಮೊಂದಿಗೆ ಇಲ್ಲದಿದ್ದರೂ ಜನಮಾನಸದಲ್ಲಿ ಉಳಿಸಿದ್ದಾರೆ. ಕಮ್ಯುನಿಸಂ ಸಿದ್ಧಾಂತಗಳಿಗೆ ಬದ್ಧರಾಗಿ ಸರಳ ಜೀವನ ನಡೆಸಿದರು. ಯಾವುದೇ ಅಧಿಕಾರವನ್ನು ಬಯಸದ ಆನಂದರಾಜ್‌ ಎಲ್ಲರೂ ಮೆಚ್ಚುವಂಥ ವ್ಯಕ್ತಿಯಾಗಿದ್ದರು. ಇಂದಿನ ಯುವಪೀಳಿಗೆಗೆ ಆನಂದ ರಾಜ್ ಅವರ ಜೀವನ ನಿರ್ವಹಣೆ ಮತ್ತು ಅವರು ನಡೆದು ಬಂದ ದಾರಿ ಆದರ್ಶವಾಗಬೇಕು. ಯುವಜನತೆ ಅಂತಹ ವ್ಯಕ್ತಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಅವರಗೆರೆ ಚಂದ್ರು, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ಎಚ್.ಜಿ.ಉಮೇಶ್, ಟಿ.ಎಸ್. ನಾಗರಾಜ್, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಎ.ಬಿ.ಶಾರದಮ್ಮ, ಆವರಗೆರೆ ವಾಸು, ಮಹಮ್ಮದ್ ರಫೀಕ್, ವಿ.ಲಕ್ಷ್ಮಣ, ಎಚ್.ಕೆ.ಕೊಟ್ರಪ್ಪ, ಕೆ.ಜಿ.ಶಿವಮೂರ್ತಿ, ಐರಣಿ ಚಂದ್ರು, ನಿಟುವಳ್ಳಿ ಬಸವರಾಜ, ಮಹಮ್ಮದ್ ಭಾಷಾ, ಟಿ.ಎಚ್.ನಾಗರಾಜ, ಕಾರ್ತಿಕ್, ಜಿ.ಯಲ್ಲಪ್ಪ, ರಂಗನಾಥ, ಕೆ.ಬಾನಪ್ಪ, ಟಿ.ಇ.ತಿಪ್ಪೇಸ್ವಾಮಿ, ಸುರೇಶ್ ಯರಗುಂಟೆ, ಜೈನುಲ್ಲಾ ಖಾನ್, ಸರೋಜ, ಜಯಪ್ಪ, ಕೆ.ಗದಿಗೇಶ್, ಎಸ್.ಎಸ್.ಮಲ್ಲಮ್ಮ, ಸಿ.ರಮೇಶ್, ಶ್ಯಾಗಲೇ ಶರಣಪ್ಪ, ನರೇಗಾ ಇತರರು ಭಾಗವಹಿಸಿದ್ದರು.

- - - -6ಕೆಡಿವಿಜಿ31ಃ:

ದಾವಣಗೆರೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ ಜಿಲ್ಲಾ ಮಂಡಳಿ ಸಹಯೋಗದಲ್ಲಿ ನಡೆದ ಹಿರಿಯ ಕಾರ್ಮಿಕ ಮುಖಂಡ ದಿವಂಗತ ಆನಂದ ರಾಜ್ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮದಲ್ಲಿ ಗಣ್ಯರು ಆನಂದ ರಾಜ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

Share this article