ಕನ್ನಡಪ್ರಭ ವಾರ್ತೆ ನಾಪೋಕ್ಲು
ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರಾದ ಡಾ. ರಾಜೇಶ್ ತೇನನ ಮತ್ತು ದೇವಜನ ಗೀತಾ ಮೊಂಟಡ್ಕ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿಶೇಷ ಸಾಧಕರಾದ ಕುಯ್ಯಮುಡಿ ಗೀತಾಹಾಗೂ ಸಂಘದ ಹಿರಿಯ ನಾಗರಿಕರಾದ ದಾಯನ ಬಾಲಕೃಷ್ಣ ಮತ್ತು ನಾಟೋಳನ ಭವಾನಿ ಮಾಚಯ್ಯ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಂಘದ ಶ್ರೇಯೋಭಿವೃದ್ಧಿಗೆ ಸಭೆಯಲ್ಲಿ ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆದು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು.ಮಧ್ಯಾಹ್ನ ಭೋಜನ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಬೆಪ್ಪುರನ ಲವ , ಕಾರ್ಯದರ್ಶಿ ಮುಕ್ಕಾಟಿ
ಅರುಣ, ಸಹ ಕಾರ್ಯದರ್ಶಿ ಹೊಸೋಕ್ಲು ಅಪ್ಪಯ್ಯ, ಖಜಾಂಜಿ ಎಡಿಕೇರಿ ಪೂಣಚ್ಚ, ಸಲಹಾ ಸೂಚಕರಾಗಿ ನಡುಮನೆ ಚಂಗಪ್ಪ ಮತ್ತು ಚೆಟ್ಟಿಮಾಡ ಜನಾರ್ದನ ಸಂಘದ ಸದಸ್ಯರು ಉಪಸ್ಥಿತರಿದ್ದರು.