ಸಮಾನತೆಗಾಗಿ ಶ್ರಮಿಸಿದ ಅಪ್ಪಣ್ಣ

KannadaprabhaNewsNetwork |  
Published : Jul 30, 2026, 02:15 AM IST
ಯಲಬುರ್ಗಾ ತಾಲೂಕಿನ ಬಂಡಿ ಗ್ರಾಪಂ ಕಚೇರಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ, ಜಾತೀಯತೆ, ಕಂದಾಚಾರ ಮತ್ತು ಮೌಢ್ಯತೆ ವಿರುದ್ಧ ಬಸವಾದಿ ಶರಣರು ಕ್ರಾಂತಿ ಮಾಡಿದ್ದಾರೆ

ಯಲಬುರ್ಗಾ: ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ಸಮಾನತೆಗಾಗಿ ಶ್ರಮಿಸಿದ ಹಡಪದ ಅಪ್ಪಣ್ಣ ತತ್ವಾದರ್ಶ ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಡಪದ ಸಮಾಜದ ಮುಖಂಡ ಚಂದ್ರಶೇಖರ ಹಡಪದ ಹೇಳಿದರು.

ತಾಲೂಕಿನ ಬಂಡಿ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ತಾಂಡವವಾಡುತ್ತಿದ್ದ ಅಸಮಾನತೆ, ಜಾತೀಯತೆ, ಕಂದಾಚಾರ ಮತ್ತು ಮೌಢ್ಯತೆ ವಿರುದ್ಧ ಬಸವಾದಿ ಶರಣರು ಕ್ರಾಂತಿ ಮಾಡಿದ್ದಾರೆ.ಕಾಯಕ ದಾಸೋಹಕ್ಕೆ ಪ್ರಾಮುಖ್ಯತೆ ನೀಡಿದ್ದ ಶರಣರ ಪೈಕಿ ಹಡಪದ ಅಪ್ಪಣ್ಣ ಕೂಡ ಒಬ್ಬರಾಗಿದ್ದಾರೆ. ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಮಹಾತ್ಮರ ಆದರ್ಶ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು.ಯುವ ಜನಾಂಗ ಶರಣರ ವಚನಗಳ ಅರ್ಥ ತಿಳಿಯಬೇಕು.ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.

ಈ ಸಂದರ್ಭ ಪಿಡಿಒ ಗೋಣೆಪ್ಪ ಜಿರ್ಲಿ,ಕಾರ್ಯದರ್ಶಿ ಸತೀಶ ಹಟ್ಟಿ, ಸಮಾಜದ ಮುಖಂಡ ಕಲ್ಲಪ್ಪ ಹಡಪದ, ಬಸಪ್ಪ ಹಡಪದ, ಕಳಕಪ್ಪ ಹಡಪದ, ಬಸವರಾಜ ಹಡಪದ, ಸುಭಾಷ್ ಹಡಪದ, ಮಲ್ಲಿಕಾರ್ಜುನ ಹಡಪದ, ಭೀಮೇಶ ಹಡಪದ, ಮಂಜುನಾಥ ಹಡಪದ, ಮಂಜುನಾಥ ಎಸ್.ಹಡಪದ, ಶರಣಪ್ಪ ಹಡಪದ ನಾಗರಾಜ ಹಡಪದ, ಶರಣಪ್ಪ ಬಿ.ಹಡಪದ, ಮಲ್ಲಪ್ಪ ಜುಮಣ್ಣವರ, ಶ್ರೀಕಾಂತ ಹೊರಪೇಟಿ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ಥಕ ಬದುಕಿಗೆ ವಚನಗಳ ಸಾರ ದಾರಿದೀಪ
ನಗರಸಭೆಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ