ಕನ್ನಡಪ್ರಭ ವಾರ್ತೆ ಮೈಸೂರು
ಸಭೆಯಲ್ಲಿ ಮುಖ್ಯವಾಗಿ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಯಲ್ಲಿ ರಸ್ತೆ ಸುರಕ್ಷತೆಗಾಗಿ ಹೆಚ್ಚುವರಿ ಮಂಜೂರಾತಿ, ಮೈಸೂರು- ಕುಶಾಲನಗರ ಭಾಗಕ್ಕೆ ಭೂಸ್ವಾಧೀನ ಮತ್ತು ಅನುಮತಿ ಹಾಗೂ ಕೇರಳದಿಂದ ಕೊಳ್ಳೆಗಾಲದವರೆಗೆ 6 ಪಥಗಳ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ಮನವಿ ಮಾಡಲಾಯಿತು.
ಬೆಂಗಳೂರಿನಿಂದ ಮೈಸೂರು ವಿಭಾಗದಲ್ಲಿ ರಸ್ತೆ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಕಾಮಗಾರಿಗಳ ಮಂಜೂರಾತಿ, ಮೈಸೂರು ರಿಂಗ್ ರಸ್ತೆ ಮತ್ತು ಬೆಂಗಳೂರು - ಮೈಸೂರು ಹೆದ್ದಾರಿಯೊಂದಿಗೆ ಸಂಚಾರವನ್ನು ವಿಲೀನಗೊಳಿಸಲು ಮಣಿಪಾಲ್ ಆಸ್ಪತ್ರೆ ಜಂಕ್ಷನ್ನಲ್ಲಿ ಫ್ಲೈ ಓವರ್ ನಿರ್ಮಿಸುವುದು, ಟೋಲ್ ಬೂತ್ ಗಳ ಸ್ಥಾಪನೆಯೊಂದಿಗೆ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ನಿಬಂಧನೆಗಳ ಅಭಿವೃದ್ಧಿಯು ವಿವಿಧ ಸ್ಥಳಗಳಿಗೆ ಪ್ರಯಾಣಿಸುವ ದಟ್ಟಣೆಯನ್ನು ನಿಯಂತ್ರಿಸುತ್ತದೆ. ಅಲ್ಲದೆ, ರೈಲ್ವೆ ಮೇಲ್ಸೇತುವೆಗಳ ಮೂಲಕ ಸೇವಾ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಕೋರಿದರು.ಮೈಸೂರು - ಕುಶಾಲನಗರ ರಾಷ್ಟ್ರೀಯ ಹೆದ್ದಾರಿ - 275 ರ ಕೆಲಸವನ್ನು ಪ್ರಾರಂಭಿಸಲು ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಕೋರಿದರು. ವಶಪಡಿಸಿಕೊಂಡ ಭೂ ಮಾಲೀಕರಿಗೆ ಪರಿಹಾರ ವಿತರಣೆಯನ್ನು ತ್ವರಿತಗೊಳಿಸಬೇಕು, ಕೇರಳದಿಂದ- ಕೊಳ್ಳೇಗಾಲ ವಿಭಾಗವು ರಾಷ್ಟ್ರೀಯ ಹೆದ್ದಾರಿ 766 ವಿಭಾಗವು ಕೊಳ್ಳೇಗಾಲ- ಟಿ. ನರಸೀಪುರ- ಮೈಸೂರು- ನಂಜನಗೂಡು- ಗುಂಡ್ಲುಪೇಟೆ- ಕೋಜಿಕೋಡ್ ಮೂಲಕ ಹಾದು ಹೋಗುತ್ತದೆ.
ಗಣಪತಿ ಸಚ್ಚಿದಾನಂದ ಆಶ್ರಮ ಮತ್ತು ಕಡಕೊಳ ಕೈಗಾರಿಕಾ ಕ್ರಾಸ್ ಜೊತೆಗೆ ಎರಡು ಲೇನ್ ಟ್ರಾಫಿಕ್ ಮತ್ತು ಉಳಿದ ಎರಡು ಲೇನ್ ರಸ್ತೆಯನ್ನು ಜಂಕ್ಷನ್ ನಿರ್ಮಿಸಿದ್ದು, ರಸ್ತೆ ಸುರಕ್ಷತೆಯಿಂದ ಇದು ಸರಿಯಲ್ಲ. ಆದ್ದರಿಂದ, ಈ ಎರಡನ್ನೂ ಮತ್ತೊಮ್ಮೆ ಪರಿಶೀಲಿಸಲು ಕೋರಿದರು.ಮೈಸೂರಿನಿಂದ ನಂಜನಗೂಡಿಗೆ 20ಕಿಮೀ ಉದ್ದದ ಸಂಚಾರದ ತೀವ್ರತೆ 40,000 ಪಿಸಿಯುಗಳಿಗಿಂತ ಹೆಚ್ಚಿದೆ ಮತ್ತು ಮುಖ್ಯ ಟ್ರಾಫಿಕ್ ಉತ್ಪಾದನಾ ಕೇಂದ್ರಗಳು ರೈಲ್ವೆಯ ಕಂಟೈನರ್ ಡಿಪೋ, ಕಡಕೋಳ, ತಾಂಡವಪುರ ಮತ್ತು ನಂಜನಗೂಡು ಮುಂತಾದ ಕೈಗಾರಿಕಾ ಪ್ರದೇಶಗಳು ದಕ್ಷಿಣ ಕಾಶಿ - ದೇವಸ್ಥಾನ ಮತ್ತು ಚಾಮರಾಜನಗರದ ಕಡೆಗೆ ರಾಷ್ಟ್ರೀಯ ಹೆದ್ದಾರಿ- 150ಎ ಅನ್ನು ವಿಭಜಿಸುತ್ತದೆ. ಊಟಿ ಮತ್ತು ವಿಮಾನ ನಿಲ್ದಾಣದ ರಸ್ತೆಯು ಇಲ್ಲಿಯೇ ಇರುವುದರಿಂದ ಈ ರಸ್ತೆಯನ್ನು 6 ಲೇನ್ ಗೆ ನವೀಕರಿಸುವ ಅಗತ್ಯವಿದೆ. ಈ ಸಂಬಂಧ ಡಿಪಿಆರ್ ತಯಾರಿಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡುವಂತೆ ಅವರು ಕೋರಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ರನ್ ವೇ ವಿಸ್ತರಣೆ ಮಾಡಲು ಅಡ್ಡಿಯಾದ ರಾಷ್ಟ್ರೀಯ ಹೆದ್ದಾರಿ- 766ರ ಮಾರ್ಗ ಬದಲಾವಣೆಗೆ ಕೂಡಲೇ ಮನವಿ ಮಾಡಿದರು.ಸಚಿವರ ಬೆಂಬಲ ಮತ್ತು ಮಾರ್ಗದರ್ಶನವು ಮೈಸೂರು- ಕೊಡಗಿನ ಮೂಲ ಸೌಕರ್ಯ ಪರಿವರ್ತಿಸಲು, ಸಂಪರ್ಕ ಹೆಚ್ಚಿಸಲು ಸಹಕಾರಿಯಾಗುವ ಜೊತೆಗೆ ಮೈಸೂರಿನ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದರು.
ಯದುವೀರ್ ಅವರ ಕೋರಿಕೆ ಸ್ವೀಕರಿಸಿದ ನಿತಿನ್ ಗಡ್ಕರಿ ಅವರು ಸಹಕಾರ ನೀಡುವುದಾಗಿ ಭರವಸೆ ನೀಡಿದರು.