ಧಾರವಾಡ: ಕಲೆ, ಸಾಹಿತ್ಯ, ಸಂಗೀತಕ್ಕೆ ಯಾವತ್ತೂ ಸಾವಿಲ್ಲ. ಸಂಗೀತ, ನೃತ್ಯ, ಕಲೆಗಳು ಮಾತ್ರ ಮನುಷ್ಯನ ಮನಸ್ಸನ್ನು ಅರಳಿಸಬಲ್ಲವು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಸವಿತಾ ಅಮರಶೆಟ್ಟಿ, ಸಾವಿತ್ರಿ ಕಡಿ, ಶಂಕರ ಹಲಗತ್ತಿ ಮಾತನಾಡಿದರು. ಮಲ್ಲಿಕಾರ್ಜುನ ಚಿಕ್ಕಮಠ ನಿರೂಪಿಸಿದರು. ಮಲ್ಲಿಕಾರ್ಜುನ ಸೊಲಗಿ ಪ್ರಾಸ್ತಾವಿಕ ಮಾತನಾಡಿದರು. ವಿನೋದ ಕುಸುಗಲ್ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಪೂರ್ಣಿಮಾ ಮುಕ್ಕುಂದಿ-ಸಂಗೀತ, ವಿದುಷಿ ನಾಗರತ್ನ ಹಡಗಲಿ-ನೃತ್ಯ, ಡಾ. ವೀಣಾ ಬಿರಾದಾರ-ಸಾಮಾಜಿಕ, ಅನ್ನಪೂರ್ಣ ಲಿಂಬಿಕಾಯಿ-ಲಲಿತಕಲೆ, ಅನನ್ಯ ಶಂಬಯ್ಯ ಹಿರೇಮಠ- ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಅನುಪಮ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.ನಂತರ ಜರುಗಿದ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವದಲ್ಲಿ ಡಾ. ಪೂರ್ಣಿಮಾ ಮುಕ್ಕುಂದಿ ಅವರ ಸುಗಮ ಸಂಗೀತ, ಸಿರಿಗಂಧ ಜಾನಪದ ಕಲಾ ಬಳಗದ ಪ್ರಕಾಶ ಕಂಬಳಿ ಮತ್ತು ಸಂಗಡಿಗರಿಂದ ಜೋಗತಿ ನೃತ್ಯ, ಹರ್ಲಾಪೂರದ ಶರೀಫ ದೊಡ್ಡಮನಿ ಮತ್ತು ತಂಡದಿಂದ ಜಾನಪದ ಗಾಯನ, ವಿದುಷಿ ನಾಗರತ್ನಾ ಹಡಗಲಿ ಮತ್ತು ತಂಡದಿಂದ ವಚನ ನೃತ್ಯ, ಡಾ. ಗುರುಬಸವ ಮಹಾಮನೆ ಮತ್ತು ತಂಡದಿಂದ ವಯೋಲಿನ್ ವಾದನ, ಯುವ ಡಾನ್ಸ್ ಅಕಾಡೆಮಿಯ ರಮೇಶ ಪಾಟೀಲ ಮತ್ತು ತಂಡದಿಂದ ಜಾನಪದ ನೃತ್ಯ, ಡಾ. ಪರಶುರಾಮ ಕಟ್ಟಿಸಂಗಾವಿ, ಸ್ವರಸಂವಾದಿನಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ತಬಲಾದಲ್ಲಿ ದಯಾನಂದ ಸುತಾರ ಹಾಗೂ ಹಾರ್ಮೊನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ ಸಾಥ್ ಸಂಗತ ನೀಡಿದರು.