ಕೃತಕ ಬುದ್ಧಿ ಮತ್ತೆ ನಮಗೇ ಬುದ್ದಿ ಕಲಿಸುವಂತಾಗಿದೆ: ಅನಿಲ್ ಆತಂಕ

KannadaprabhaNewsNetwork |  
Published : Nov 10, 2026, 01:30 AM IST
ಚಿತ್ರ :  8ಎಂಡಿಕೆ1 : 75 ವರ್ಷ ಪೂರೈಸಿರುವ ಲಯನ್ಸ್ ಸಂಸ್ಥೆಯಲ್ಲಿ ಸದಸ್ಯರಾಗಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿರುವವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕೃತಕ ಬುದ್ಧಿ ಮತ್ತೆ ಆಧೀನಕ್ಕೆ ನಮ್ಮ ಬುದ್ದಿಯನ್ನು ಕೊಟ್ಟು ಆ ಬುದ್ದಿ ಮತ್ತೆ ಸೃಷ್ಟಿಸುವ ಪದಗಳನ್ನು ನೈಜ ಭಾಷೆಯೆಂದು ಭಾವಿಸಿ ಮೂಲ ಭಾಷೆಯನ್ನು ಇಂದಿನ ಯುವ ಪೀಳಿಗೆ ಮರೆಯುತ್ತಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್‌ ಅಧ್ಯಕ್ಷ ಅನಿಲ್‌ ಎಚ್‌.ಟಿ. ಆತಂಕ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ : ಕೃತಕ ಬುದ್ಧಿ ಮತ್ತೆ ಆಧೀನಕ್ಕೆ ನಮ್ಮ ಬುದ್ದಿಯನ್ನು ಕೊಟ್ಟು ಆ ಬುದ್ದಿ ಮತ್ತೆ ಸೃಷ್ಟಿಸುವ ಪದಗಳನ್ನು ನೈಜ ಭಾಷೆಯೆಂದು ಭಾವಿಸಿ ಮೂಲ ಭಾಷೆಯನ್ನು ಇಂದಿನ ಯುವ ಪೀಳಿಗೆ ಮರೆಯುತ್ತಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್‌ ಅಧ್ಯಕ್ಷ ಅನಿಲ್‌ ಎಚ್‌.ಟಿ. ಆತಂಕ ವ್ಯಕ್ತಪಡಿಸಿದ್ದಾರೆ.ಮಡಿಕೇರಿಯ ಲಯನ್ಸ್‌ ಸಂಸ್ಥೆ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನದ ಅಮೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ಪರಿಸ್ಥಿತಿಯಲ್ಲಿ ಕೃತಕ ಬುದ್ಧಿ ಮತ್ತೆಯ ವ್ಯವಸ್ಥೆ ನಮಗೇ ಬುದ್ದಿ ಕಲಿಸುವಂತಾಗಿದೆ. ಕನ್ನಡದಂತಹ ಸರಳ ಭಾಷೆ ಕೂಡ ಎ. ಐ. ಮಾಯಾಜಾಲಕ್ಕೆ ಸಿಲುಕಿ ತನ್ನ ನೈಜತೆ ಮತ್ತು ಆಹ್ಲಾದತೆಯನ್ನು ಕಳೆದುಕೊಳ್ಳತ್ತಿದೆ. ಹಲವಾರು ವರ್ಷಗಳಿ೦ದ ನಾವು ಬಳಸುತ್ತಿದ್ದ ಸುಂದರ ಭಾಷೆಯನ್ನು ಯಂತ್ರದ ಕೈಗೆ ನೀಡಿ ಅದು ಹೇಳಿದ್ದೆ ಸರಿ ಎಂಬ ಭ್ರಮೆಯಲ್ಲಿ ನಾವಿದ್ದೇವೆ ಎಂದು ಅನಿಲ್‌ ನುಡಿದರು.

ನಿತ್ಯದ ಒಳಕೆಯಲ್ಲಿ ಕನ್ನಡವನ್ನೇ ಹೆಚ್ಚು ಬಳಸುವ ಮೂಲಕ, ಕನ್ನಡ ಪತ್ರಿಕೆಗಳನ್ನು ಹೆಚ್ಚು ತರಿಸಿ ಓದುವ ಮೂಲಕ, ಕನ್ನಡ ಸಾಹಿತ್ಯವನ್ನು ಪೋತ್ಸಾಹಿಸುವ ಮೂಲಕ ಕನ್ನಡ ಭಾಷೆಯನ್ನು ಪ್ರತಿಯೋರ್ವ ಕನ್ನಡಿಗನು ರಕ್ಷಿಸಲು ಸಾಧ್ಯ ಎಂದು ಅನಿಲ್ ಹೇಳಿದರು.

ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಲ್. ಮೋಹನ್ ಕುಮಾರ್ ಮಾತನಾಡಿ ಸಮಾಜಕ್ಕೆ ಹಿರಿಯರು ನೀಡಿರುವ ಕೊಡುಗೆ ಮತ್ತು ಮಾರ್ಗ ದರ್ಶನ ಅಮೂಲ್ಯ ಎಂದರು.

ಕಮಲ ಮುರುಗೇಶ್ ಪ್ರಾರ್ಥಿಸಿ, ಪ್ರೇಮಾ ಕೋಟಿ ಧ್ವಜ ವಂದನೆ ನಿರ್ವಹಿಸಿ, ಸತೀಶ್ ರೈ ಲಯನ್ಸ್ ನ ನೀತಿ ಸಂಹಿತೆ ವಾಚಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಕೆ. ಮಧುಕರ್,ಕೆ.ಕೆ. ದಾಮೋದರ್, ಗೀತಾ ಮಧುಕರ್ ನಿರ್ವಹಿಸಿದರು. ಮಡಿಕೇರಿ ಲಯನ್ಸ್ ಸಂಸ್ಥೆಯ ಖಜಾಂಚಿ . ನವೀನ್ ಅಂಬೆಕಲ್ ವಂದಿಸಿದರು. ಲಯನ್ಸ್ ಸಂಸ್ಥೆಯ ವಲಯ ಅಧ್ಯಕ್ಷ ಮದನ್ ವೇದಿಕೆಯಲ್ಲಿ ಇದ್ದರು. ಹಿರಿಯರಿಗೆ ಸನ್ಮಾನ.-75 ವರ್ಷ ಪೂರೈಸಿರುವ ಲಯನ್ಸ್ ಸಂಸ್ಥೆಯಲ್ಲಿ ಸದಸ್ಯರಾಗಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ. ವಿ. ಮೋಹನ್ ದಾಸ್, ಪಿ. ಪಿ. ಸೋಮಣ್ಣ, ಎಸ್. ಬಿ. ಮುರುಗೇಶ್, ಮತ್ತು ಜೆ. ವಿ. ಕೋಟಿ ಅವರನ್ನು ಇದೇ ಸಂದರ್ಭದಲ್ಲಿ ಅಮೃತೋತ್ಸವ ಯೋಜನೆಯಡಿಯಲ್ಲಿ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ